alex Certify BIG BREAKING: ಕೇಂದ್ರದಿಂದ ಶಾಕಿಂಗ್ ಮಾಹಿತಿ; ನಿರುದ್ಯೋಗದಿಂದ 9140, ಆರ್ಥಿಕ ಸಂಕಷ್ಟದಿಂದ 25 ಸಾವಿರ ಜನ ಆತ್ಮಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೇಂದ್ರದಿಂದ ಶಾಕಿಂಗ್ ಮಾಹಿತಿ; ನಿರುದ್ಯೋಗದಿಂದ 9140, ಆರ್ಥಿಕ ಸಂಕಷ್ಟದಿಂದ 25 ಸಾವಿರ ಜನ ಆತ್ಮಹತ್ಯೆ

ನವದೆಹಲಿ: ದೇಶದಲ್ಲಿ ನಿರುದ್ಯೋಗದ ಕಾರಣದಿಂದ 9140 ಜನ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಕಳೆದ ಮೂರು ವರ್ಷದಲ್ಲಿ ಇಷ್ಟೊಂದು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಲಬಾಧೆ, ಆರ್ಥಿಕ ಸಂಕಷ್ಟದಿಂದ 16,091 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018 ರಿಂದ 20 ರ ಅವಧಿಯಲ್ಲಿ ನಿರುದ್ಯೋಗ, ಸಾಲಬಾಧೆ, ಆರ್ಥಿಕ ದಿವಾಳಿತನದಿಂದ 25 ಸಾವಿರ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆಯಿಂದ ರಾಜ್ಯಸಭೆಗೆ ಲಿಖಿತ ಮಾಹಿತಿ ನೀಡಲಾಗಿದೆ.

ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಲಿಖಿತ ಉತ್ತರ ನೀಡಿದ್ದು, 2018ರಲ್ಲಿ ನಿರುದ್ಯೋಗ ಕಾರಣದಿಂದ 2741 ಜನ, 2019 ರಲ್ಲಿ 2851 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019 ರಲ್ಲಿ 3548 ಜನ ಸೇರಿ ಮೂರು ವರ್ಷಗಳಲ್ಲಿ ನಿರುದ್ಯೋಗದ ಕಾರಣದಿಂದ 9140 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆರ್ಥಿಕ ಸಂಕಷ್ಟದಿಂದಾಗಿ 2018ರಲ್ಲಿ 4970 ಜನ, 2019 ರಲ್ಲಿ ಆರ್ಥಿಕ ಸಂಕಷ್ಟ, ಸಾಲಬಾಧೆಯಿಂದ 5908 ಹಾಗೂ 2020 ರಲ್ಲಿ 5213 ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ.

ರೈತರ ಆತ್ಮಹತ್ಯೆ:

2018 ಮತ್ತು 2020 ರ ನಡುವೆ ದೇಶದ ವಿವಿಧ ಭಾಗಗಳಲ್ಲಿ 17,000 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಲೋಕಸಭೆಗೆ ಮಂಗಳವಾರ ಮಾಹಿತಿ ನೀಡಲಾಗಿತ್ತು.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‌ಸಿಆರ್‌ಬಿ) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಅಪಘಾತ ಸಾವುಗಳು ಮತ್ತು ಆತ್ಮಹತ್ಯೆಗಳ ಅಂಕಿಅಂಶಗಳನ್ನು ಸಂಗ್ರಹಿಸುತ್ತದೆ ಮತ್ತು ಅದನ್ನು ವಾರ್ಷಿಕವಾಗಿ ‘ಭಾರತದಲ್ಲಿ ಅಪಘಾತ ಸಾವುಗಳು ಮತ್ತು ಆತ್ಮಹತ್ಯೆಗಳು'(ADSI) ವರದಿಯಾಗಿ ಪ್ರಕಟಿಸುತ್ತದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಹೇಳಿದ್ದರು.

ADSI ವರದಿಯ ಪ್ರಕಾರ, 2018 ರಲ್ಲಿ 5,763 ರೈತರು ಅಥವಾ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, 2019 ರಲ್ಲಿ 5,957 ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2020 ರಲ್ಲಿ 5,579 ರೈತರು ಅಥವಾ ಕೃಷಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...