alex Certify ಮಾಸ್ಕ್​ ಹಾಕದವರು ಕಂಡಲ್ಲಿ ದಂಡ ವಿಧಿಸಿ ಎಂದು ಎಚ್ಚರಿಕೆ ನೀಡಿದ್ದಾರೆ ಈ ಅಧಿಕಾರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್​ ಹಾಕದವರು ಕಂಡಲ್ಲಿ ದಂಡ ವಿಧಿಸಿ ಎಂದು ಎಚ್ಚರಿಕೆ ನೀಡಿದ್ದಾರೆ ಈ ಅಧಿಕಾರಿ..!

ದೇಶದಲ್ಲಿ ಮತ್ತೊಮ್ಮೆ ಕೊರೊನಾ ಅಲೆ ಆರಂಭವಾಗಿದ್ದು ವಿವಿಧ ರಾಜ್ಯಗಳು ಕೊರೊನಾ ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳುತ್ತಿವೆ. ಅದರಂತೆ ತಮಿಳುನಾಡು ಆರೋಗ್ಯ ಇಲಾಖೆ ಕಾರ್ಯದರ್ಶಿ ಜೆ. ರಾಧಾಕೃಷ್ಣನ್​ ಕೂಡ ಮಾಸ್ಕ್​ ಧರಿಸದೇ ಇರುವ ವ್ಯಕ್ತಿ ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬಂದಲ್ಲಿ ಅಂತವರಿಗೆ ಮುಲಾಜಿಲ್ಲದೇ ದಂಡ ವಿಧಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೊರೊನಾ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಅಲರ್ಟ್​ ಆಗಿರೋದು ಅನಿವಾರ್ಯವಾಗಿದೆ. ಹೀಗಾಗಿ ಮಾಸ್ಕ್​ ಧರಿಸದೇ ಇರುವ ವ್ಯಕ್ತಿಯ ಬಳಿ 200 ರೂಪಾಯಿಗಳನ್ನ ದಂಡದ ರೂಪದಲ್ಲಿ ವಸೂಲಿ ಮಾಡಿ ಎಂದು ಸೂಚನೆ ನೀಡಲಾಗಿದೆ.

ದೇಶದ ಜನತೆಗೆ ಮತ್ತೆ ಬಿಗ್ ಶಾಕ್: ಗ್ಯಾಸ್, ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಹೆಚ್ಚಳ

ವರದಿಗಳ ಪ್ರಕಾರ ಈವರೆಗೆ ತಮಿಳು ನಾಡು ಸರ್ಕಾರ ಸಾಮಾಜಿಕ ಅಂತರ ಕಾಪಾಡದ ಹಾಗೂ ಮಾಸ್ಕ್​ ಧರಿಸದ ಕಾರಣಕ್ಕೆ 14 ಲಕ್ಷ ಜನರಿಂದ ಈವರೆಗೆ 13 ಕೋಟಿ ರೂಪಾಯಿ ಹಣವನ್ನ ದಂಡದ ರೂಪದಲ್ಲಿ ವಸೂಲಿ ಮಾಡಿದೆಯಂತೆ.

ಕೊರೊನಾ ವೈರಸ್​ ಅಬ್ಬರಕ್ಕೆ ಎಲ್ಲಾ ರೀತಿಯಲ್ಲೂ ಸಿದ್ಧವಾಗಿರುವ ತಮಿಳುನಾಡು ಸರ್ಕಾರ ಚೆನ್ನೈನ ಆಸ್ಪತ್ರೆಗಳಲ್ಲಿ 4 ಸಾವಿರ ಬೆಡ್​ಗಳನ್ನ ಕೊರೊನಾ ರೋಗಿಗಳಿಗೆ ಮೀಸಲಿಟ್ಟಿದೆ. ಅಲ್ಲದೇ ತಮಿಳುನಾಡಿನ ಎಲ್ಲಾ ಜಿಲ್ಲೆಗಳಲ್ಲೂ ರೋಗಿಗಳ ಚಿಕಿತ್ಸೆಗೆ ಸಕಲ ಕ್ರಮ ಕೈಗೊಳ್ಳಲಾಗ್ತಿದೆ ಎಂದು ರಾಧಾಕೃಷ್ಣನ್​ ಹೇಳಿದ್ದಾರೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...