alex Certify ಮಕ್ಕಳೇ ಕೊರೊನಾ ಲಸಿಕೆ ಭಯ ಬಿಡಿ…..! ಗಮನ ಸೆಳೆಯುತ್ತಿದೆ ಲಸಿಕಾ ಕೇಂದ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳೇ ಕೊರೊನಾ ಲಸಿಕೆ ಭಯ ಬಿಡಿ…..! ಗಮನ ಸೆಳೆಯುತ್ತಿದೆ ಲಸಿಕಾ ಕೇಂದ್ರ

ಕೊರೊನಾ ಲಸಿಕೆ ಅಭಿಯಾನ ದೇಶದಲ್ಲಿ ವೇಗವಾಗಿ ನಡೆಯುತ್ತಿದೆ. ಇದ್ರ ಮಧ್ಯೆ ಮಕ್ಕಳಿಗೆ ಕೊರೊನಾ ಲಸಿಕೆ ಹಾಕಲು ಒಪ್ಪಿಗೆ ಸಿಕ್ಕಿದೆ. ಎಂದಿನಿಂದ ಮಕ್ಕಳಿಗೆ ಲಸಿಕೆ ಹಾಕಲಾಗುವುದು ಎಂಬ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ. ಈ ಮಧ್ಯೆ ದೆಹಲಿ ಸರ್ಕಾರ, ಮಕ್ಕಳಿಗೆ ಕೊರೊನಾ ಲಸಿಕೆ ಹಾಕಲು ಸಿದ್ಧತೆ ನಡೆಸಿದೆ.

ದೆಹಲಿ ಸರ್ಕಾರ, ಮಕ್ಕಳಿಗಾಗಿ ವಿಶೇಷ ಲಸಿಕಾ ಕೇಂದ್ರವನ್ನು ಸಿದ್ಧಪಡಿಸುತ್ತಿದೆ. ಮಕ್ಕಳಿಗೆ ಲಸಿಕೆ ಅಂದ್ರೆ ಭಯ. ಇದನ್ನು ಹೋಗಲಾಡಿಸಲು ತಿಲಕ್ ನಗರದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗೆ ಲಸಿಕೆ ಭಯ ಹೋಗಲು ಮೋಟು-ಪತ್ಲು ಪೋಸ್ಟರ್ ಹಾಕಲಾಗಿದೆ. ಇದಲ್ಲದೆ ಕಾರ್ಟೂನ್ ಚಿತ್ರಗಳಾದ ಸೂಪರ್ ಮ್ಯಾನ್ ನಂತಹ ಪೋಸ್ಟರ್ ಗಳನ್ನು ಹಾಕಲಾಗಿದೆ.

ಮಕ್ಕಳಿಗಾಗಿ ಆಟಿಕೆಗಳು ಹಾಗೂ ಜೋಕಾಲಿಗಳನ್ನು ಕೂಡ ಹಾಕಲಾಗ್ತಿದೆ. ಮಕ್ಕಳಿಗಾಗಿ ಕೋವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ಸಿಕ್ಕಿದೆ. ಮಕ್ಕಳಿಗೆ ಲಸಿಕೆ ಶೇಕಡಾ 78ರಷ್ಟು ಪರಿಣಾಮಕಾರಿ ಎಂದು ಕಂಪನಿ ಹೇಳಿದೆ. ಈ ಔಷಧಕ್ಕೆ ಸಂಬಂಧಿಸಿದ ಹೆಚ್ಚುವರಿ ಡೇಟಾವನ್ನು ಕಂಪನಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಶನಿವಾರ ಸಲ್ಲಿಸಿತ್ತು. ಮಂಗಳವಾರ ಲಸಿಕೆಗೆ ಒಪ್ಪಿಗೆ ಸಿಕ್ಕಿದೆ. ಕೊರೊನಾ ಲಸಿಕೆ ಅಭಿಯಾನದ ಬಗ್ಗೆ ಕೇಂದ್ರ ಸರ್ಕಾರ ಶೀಘ್ರವೇ ಮಾರ್ಗಸೂಚಿ ಬಿಡುಗಡೆ ಮಾಡಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...