alex Certify ಈ ದೃಷ್ಟಿ ಭ್ರಮೆ ಚಿತ್ರದಲ್ಲಿರುವ ʼಜಿರಾಫೆʼ ಯನ್ನು ಗುರುತಿಸಬಲ್ಲಿರಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದೃಷ್ಟಿ ಭ್ರಮೆ ಚಿತ್ರದಲ್ಲಿರುವ ʼಜಿರಾಫೆʼ ಯನ್ನು ಗುರುತಿಸಬಲ್ಲಿರಾ ?

ಜನರ ಮನಸ್ಸನ್ನು ಹಿಡಿದಿಡಲು ಅಥವಾ ಕೇಂದ್ರೀಕರಿಸಲು ಆಪ್ಟಿಕಲ್​ ಇಲ್ಯೂಷನ್​ ಸಹಕಾರಿ. ಇದು ವೀಕ್ಷಣಾ ಕೌಶಲ್ಯವನ್ನು ಪರೀಕ್ಷಿಸಲು ಅನುಕೂಲವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಇಂತಹ ಚಿತ್ರಗಳು ಹರಿದು ಬರುತ್ತಿರುತ್ತದೆ.

ಇದೀಗ ಬಂದಿರುವ ಆಪ್ಟಿಕಲ್​ ಇಲ್ಯೂಷನ್​ನಲ್ಲಿ ಕಾಡಿನಲ್ಲಿ ಅಡಗಿರುವ ಜಿರಾಫೆಯನ್ನು ಹುಡುಕಬೇಕಾಗಿದೆ. ಈ ಜಿರಾಫೆಯನ್ನು ಹುಡುಕಲು 20 ಸೆಕೆಂಡ್​ಗಳ ನಿಗದಿತ ಸಮಯದ ಮಿತಿಯೂ ಇದೆ.

ಸುತ್ತಲೂ ಸಾಕಷ್ಟು ಮರಗಳು ಮತ್ತು ಹುಲ್ಲಿನ ಕಾಡುಗಳನ್ನು ನೀವು ಗಮನಿಸಬಹುದು. ಈ ಹಸಿರಿನ ನಡುವೆ ಅಡಗಿರುವ ಜಿರಾಫೆಯನ್ನು ಕಂಡುಹಿಡಿಯುವುದು ಅಸಾಧ್ಯವೇನಲ್ಲ, ಆದರೂ ಒಂದಷ್ಟು ಪ್ರಯತ್ನ ಬೇಕಾಗುತ್ತದೆ. ಕೆಲವು ಸುಳಿವುಗಳು ಈ ಕೆಲಸವನ್ನು ಸ್ವಲ್ಪ ಸುಲಭಗೊಳಿಸಬಹುದು.

ಜಿರಾಫೆಯು ಮರದ ಹಿಂದೆ ನಿಂತಿದೆ ಎಂಬುದು ಮೊದಲ ಸುಳಿವಾಗಿದೆ. ಅದರ ಕತ್ತಿನ ಉದ್ದವು ಮರಕ್ಕಿಂತ ಉದ್ದವಾಗಿದೆ. ಜಿರಾಫೆಯನ್ನು ಸುಲಭವಾಗಿ ಪತ್ತೆಹಚ್ಚಲು ಸಹಾಯ ಮಾಡುವ ದೊಡ್ಡ ಸುಳಿವುಗಳಲ್ಲಿ ಒಂದಾಗಿದೆ.

ಹುಡುಕಾಟ ಕಷ್ಟವಾಗಿದ್ದರೆ ಇನ್ನೊಂದು ಸುಳಿವಾಗಿ, ಚಿತ್ರದ ಕಾರ್ನರ್​ನಲ್ಲಿ ಜಿರಾಫೆಯನ್ನು ಕಾಣಬಹುದು. ಮರದ ಒಂದು ಭಾಗಕ್ಕೆ ಹೋಲಿಕೆಯನ್ನು ನೀಡುವ ಟ್ರಿಕಿ ರೀತಿಯಲ್ಲಿ ಇರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...