alex Certify ಭಾರತದಲ್ಲಿ ಅತಿ ಹೆಚ್ಚು ಸಂಬಳ ಸಿಗುವ ಉದ್ಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಅತಿ ಹೆಚ್ಚು ಸಂಬಳ ಸಿಗುವ ಉದ್ಯೋಗ

ಪ್ರತಿಯೊಬ್ಬರು ಉತ್ತಮ ಸಂಬಳ ಹಾಗೂ ಆರಾಮದಾಯಕ ಕೆಲಸವನ್ನು ಹುಡುಕ್ತಾರೆ. 10ನೇ ತರಗತಿ ನಂತ್ರ ಯಾವ ವಿಷ್ಯವನ್ನು ಆಯ್ಕೆ ಮಾಡಿಕೊಂಡು ಓದು ಮುಂದುವರಿಸಿದರೆ ಉತ್ತಮ ನೌಕರಿ ಪಡೆಯಬಹುದು ಎಂಬ ಹುಡುಕಾಟ ನಡೆಸುತ್ತಾರೆ. ಭಾರತದಲ್ಲಿ ಯಾವ ಕೆಲಸಕ್ಕೆ ಹೆಚ್ಚಿನ ಸಂಬಳ ಸಿಗ್ತಿದೆ ಎಂಬುದು ಮೊದಲೇ ಗೊತ್ತಿದ್ದರೆ ಅದೇ ಕ್ಷೇತ್ರದಲ್ಲಿ ಓದು ಮುಂದುವರಿಸಬಹುದು. ಶಿಕ್ಷಣ ಮುಗಿದ ಮೇಲೆ ಒಳ್ಳೆ ಕೆಲಸಕ್ಕೆ ತಡಕಾಡುವ ಬದಲು, ಆರಂಭದಲ್ಲಿಯೇ ಗುರಿಯಿಟ್ಟು ಓದಿದರೆ ಸಾಧನೆ ಸುಲಭವಾಗುತ್ತದೆ.

ಭಾರತದಲ್ಲಿ ಅತಿ ಹೆಚ್ಚು ಸಂಬಳ ಬರುವ ಉದ್ಯೋಗಗಳು :

ವೈದ್ಯ:  ವೈದ್ಯರ ಕೆಲಸ ಹಾಗೂ ಸಂಬಳದ ಬಗ್ಗೆ ಬಹುತೇಕರಿಗೆ ತಿಳಿದಿರುತ್ತದೆ. ವೈದ್ಯ ಪ್ರತಿ ತಿಂಗಳು 1.5 ಲಕ್ಷದಿಂದ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಗಳಿಸಬಹುದು. ವೈದ್ಯರ ಶೈಕ್ಷಣಿಕ ಅರ್ಹತೆ ಎಂಬಿಬಿಎಸ್.

ಚಾರ್ಟರ್ಡ್ ಅಕೌಂಟೆಂಟ್‌ : ಚಾರ್ಟರ್ಡ್ ಅಕೌಂಟೆಂಟ್ ಗಳಿಗೆ ಉತ್ತಮ ಸಂಬಳ ನೀಡಲಾಗುತ್ತದೆ. ಸಿಎ ಹುದ್ದೆಯಲ್ಲಿ ಕೆಲಸ ಮಾಡುವ ಅನೇಕರಿಗೆ 5 ಲಕ್ಷಕ್ಕಿಂತ ಹೆಚ್ಚು ಸಂಬಳ ಬರುತ್ತದೆ. 12 ನೇ ತರಗತಿಯ ನಂತರ, ಸಿಎಗೆ ಸಂಬಂಧಿಸಿದ  ವಿವಿಧ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಪರೀಕ್ಷೆ ತೆಗೆದುಕೊಳ್ಳಬೇಕು. ರಾಷ್ಟ್ರೀಯ ಮಟ್ಟದ CA CPT ಪರೀಕ್ಷೆಯನ್ನು ಐಸಿಎಐ ಆಯೋಜಿಸುತ್ತದೆ.

ಪೈಲಟ್ ಹುದ್ದೆ : ಅತಿ ಹೆಚ್ಚು ಸಂಬಳ ಪಡೆಯುವ ಹುದ್ದೆಯಲ್ಲಿ ಇದೂ ಒಂದು. ಪೈಲಟ್ ಕೆಲಸ ಮಾಡುವ ಜನರು ತಿಂಗಳಿಗೆ 1.5 ಲಕ್ಷಕ್ಕಿಂತ ಹೆಚ್ಚು ಗಳಿಸುತ್ತಾರೆ. 12 ನೇ ತರಗತಿಯಲ್ಲಿ ವಿಜ್ಞಾನ ವಿಷ್ಯದಲ್ಲಿ ಕನಿಷ್ಠ ಶೇಕಡಾ 50 ಅಂಕ ಪಡೆದಿರಬೇಕು. ಪೈಲಟ್ ಪರವಾನಗಿ, ವಾಣಿಜ್ಯ ಪೈಲಟ್ ಪರವಾನಗಿಗಾಗಿ 6 ​​ತಿಂಗಳ ತರಬೇತಿಯ ಅಗತ್ಯವಿರುತ್ತದೆ. ಪೈಲಟ್ ಆಗಲು ಮೂರು ವರ್ಷಗಳ ತರಬೇತಿ ಕೋರ್ಸ್ ಮಾಡಬೇಕು.

ನಾಗರಿಕ ಸೇವೆಗಳು :  ಯುಪಿಎಸ್ಸಿ ಮೂಲಕ ಐಎಎಸ್, ಐಪಿಎಸ್, ಐ ಎಫ್ ಎಸ್ ಹುದ್ದೆ ಪಡೆಯುವುದು ಹೆಮ್ಮೆಯ ವಿಷ್ಯ. ಈ ಹುದ್ದೆಗಳಲ್ಲಿ ಕೆಲಸ ಮಾಡುವವರಿಗೆ ಅನೇಕ ಸರ್ಕಾರಿ ಸೌಲಭ್ಯಗಳ ಜೊತೆಗೆ ಉತ್ತಮ ಸಂಬಳ ನೀಡಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಜನರು ಯಾವುದೇ ಮಾನ್ಯತೆ ಪಡೆದ ಕಾಲೇಜು ಅಥವಾ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು.

ಸೈಬರ್ ಸೆಕ್ಯುರಿಟಿ ಮತ್ತು ಎಥಿಕಲ್ ಹ್ಯಾಕರ್ : ಸೈಬರ್ ಸೆಕ್ಯುರಿಟಿ ಮತ್ತು ಎಥಿಕಲ್ ಹ್ಯಾಕರ್‌ನಲ್ಲಿ ಕೆಲಸ ಮಾಡುವ ಜನರ ಸಂಬಳ ಕೋಟಿಗಳಲ್ಲಿರುತ್ತದೆ. ಸರ್ಕಾರಿ ಮತ್ತು ಖಾಸಗಿ ಎರಡೂ ಇಲಾಖೆಗಳಿಗೆ ಇವರ ಅಗತ್ಯವಿದೆ. ಮನೆಯಲ್ಲೇ ಕುಳಿತು ಕಂಪ್ಯೂಟರ್ ಮೂಲಕ ಈ ಕೆಲಸ ಮಾಡಬಹುದಾಗಿದೆ. ಈ ಕೆಲಸವನ್ನು ಮಾಡಲು ಅಭ್ಯರ್ಥಿಯು ಸೈಬರ್ ಸೆಕ್ಯುರಿಟಿಗೆ ಸಂಬಂಧಿಸಿದ ಕೋರ್ಸ್ ಮಾಡಲು ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಟೆಕ್ ಮಾಡಿರುವುದು ಕಡ್ಡಾಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...