alex Certify ಆಲಿಯಾ ಭಟ್ ಲೆಹೆಂಗಾವನ್ನು ಕಾಲಿನಿಂದ ತಳ್ಳಿದ ರಣಬೀರ್ ಕಪೂರ್: ಇದೇನಾ ಗೌರವ ಎಂದು ಕಿಡಿಕಾರಿದ ನೆಟ್ಟಿಗರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಲಿಯಾ ಭಟ್ ಲೆಹೆಂಗಾವನ್ನು ಕಾಲಿನಿಂದ ತಳ್ಳಿದ ರಣಬೀರ್ ಕಪೂರ್: ಇದೇನಾ ಗೌರವ ಎಂದು ಕಿಡಿಕಾರಿದ ನೆಟ್ಟಿಗರು….!

Ranbir Kapoor allegedly kicks Alia Bhatt's lehenga in a viral videoಬಾಲಿವುಡ್‌ನ ಪ್ರೇಮಿಗಳಲ್ಲಿ ಒಂದಾದ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡುವತ್ತ ಗಮನ ಹರಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

2022ರ ಬೇಸಿಗೆಯಲ್ಲಿ ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರಂತೆ ಎಂಬ ಗುಸುಗುಸು ಸುದ್ದಿ ಹಬ್ಬಿವೆ. ಇವರಿಬ್ಬರ ಜೋಡಿ ರೊಮ್ಯಾಂಟಿಕ್ ಆಗಿ ಕಂಡರೂ, ಕಾರ್ಯಕ್ರಮವೊಂದರಲ್ಲಿ ರಣಬೀರ್ ಕಪೂರ್ ತೋರಿದ ವರ್ತನೆಗೆ ನೆಟ್ಟಿಗರು ಟೀಕಿಸಿದ್ದಾರೆ.

ಪೂಜೆಯ ಸ್ಥಳದಲ್ಲಿ ಅಯಾನ್ ಮುಖರ್ಜಿ ಜೊತೆಯಲ್ಲಿ ಇವರಿಬ್ಬರು ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಿದ್ದರು. ದೀಪಾವಳಿ ಹಬ್ಬದಂದು ಆಲಿಯಾ ನೀಲಿ ಬಣ್ಣದ ಸಬ್ಯಸಾಚಿ ಲೆಹೆಂಗಾವನ್ನು ಧರಿಸಿದ್ದರು. ಈ ಫೋಟೋವನ್ನು ಆನ್‌ಲೈನ್‌ನಲ್ಲಿ ಅವರು ಹಂಚಿಕೊಂಡಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ರಣಬೀರ್ ಕಪೂರ್ ಆಲಿಯಾ ಲೆಹೆಂಗಾವನ್ನು ಕಾಲಿನಿಂದ ಕಿಕ್ ಮಾಡಿದ್ದಾರೆ.

ಪೂಜೆಯಲ್ಲಿ ಭಾಗವಹಿಸಿದ ನಂತರ ಈ ಜೋಡಿ ಅಲ್ಲಿಂದ ತೆರಳಿದೆ. ಈ ವೇಳೆ ಆಲಿಯಾ ಮೆಟ್ಟಿಲಿನಿಂದ ಕೆಳಗೆ ಇಳಿಯುತ್ತಾ ಹೋಗಿದ್ದಾರೆ. ಈ ವೇಳೆ ಆಲಿಯಾ ಧರಿಸಿದ್ದ ಲೆಹೆಂಗಾವು ಮೆಟ್ಟಿಲ ಮೇಲಿನವರೆಗೆ ಹರಡಿದೆ. ಇದರಿಂದ ರಣಬೀರ್ ಕಪೂರ್ ತನ್ನ ಕಾಲಿನಿಂದ್ ಕಿಕ್ ಮಾಡುವ ಮೂಲಕ ಲೆಹೆಂಗಾವನ್ನು ತಳ್ಳಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವರು ತಮಾಷೆಯಾಗಿ ಪ್ರತಿಕ್ರಿಯಿಸಿದರೆ, ಹಲವರು ರಣಬೀರ್ ವರ್ತನೆಯನ್ನು ಟೀಕಿಸಿದ್ದಾರೆ.

ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಇದೇ ರೀತಿ ಹಿರಿಯ ನಟಿ ರೇಖಾ ಅವರ ಸೀರೆಯ ಸೆರಗು ನೆಲದ ಮೇಲೆ ಹರಡಿದಾಗ, ರಣಬೀರ್ ಕಪೂರ್ ಅದನ್ನು ತನ್ನ ಕೈಯಲ್ಲಿ ಎತ್ತಿಕೊಂಡು ವೇದಿಕೆಯವರೆಗೂ ಹೋಗಿದ್ದರು. ಇದೆಲ್ಲಾ ಕ್ಯಾಮರಾ ಮುಂದೆ ಮಾತ್ರ ಇಂಥ ವರ್ತನೆ. ಕ್ಯಾಮರಾ ಇಲ್ಲದಿದ್ದಾಗ ಈ ರೀತಿ ಅಗೌರವ ತೋರುತ್ತಾರೆ ಅಂತೆಲ್ಲಾ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಣಬೀರ್ ತನ್ನ ಕಾಲಿನಿಂದ ಆಲಿಯಾ ಉಡುಪನ್ನು ತೆಗೆದು ಹಾಕುತ್ತಿರುವ ರೀತಿ ನೋಡಿದ್ರೆ ಆತ ಆಕೆಯನ್ನು ಎಷ್ಟು ಗೌರವಿಸುತ್ತಾನೆ ಎಂಬುದನ್ನು ಇದು ತೋರಿಸುತ್ತದೆ. ಆಲಿಯಾ ಮಾಡಿರುವ ಆಯ್ಕೆ ಸರಿಯಿಲ್ಲ ಅಂತೆಲ್ಲಾ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಸೋನಮ್ ಕಪೂರ್ ಮದುವೆಯ ಆರತಕ್ಷತೆಯಲ್ಲಿ ಇಬ್ಬರೂ ಜೊತೆಯಾಗಿ ಬಂದ ನಂತರ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಈ ಜೋಡಿ  ಸುಮಾರು ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...