alex Certify BIG NEWS: ಇ-ಕಾಮರ್ಸ್ ವೆಬ್‌ ಸೈಟ್‌ ಗಳಲ್ಲಿ ಇನ್ಮುಂದೆ ಸಿಗಲ್ಲ ಫ್ಲಾಶ್ ಸೇಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇ-ಕಾಮರ್ಸ್ ವೆಬ್‌ ಸೈಟ್‌ ಗಳಲ್ಲಿ ಇನ್ಮುಂದೆ ಸಿಗಲ್ಲ ಫ್ಲಾಶ್ ಸೇಲ್

ಆನ್ಲೈನ್ ಶಾಪಿಂಗ್ ಮಾಡುವವರಿಗೊಂದು ಮಹತ್ವದ ಸುದ್ದಿಯಿದೆ. ಅಮೆಜಾನ್-ಫ್ಲಿಪ್ಕಾರ್ಟ್‌ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಫ್ಲ್ಯಾಶ್ ಮಾರಾಟ ಅಥವಾ ದೊಡ್ಡ ರಿಯಾಯಿತಿ ನಿರೀಕ್ಷೆಯಲ್ಲಿದ್ದರೆ ನಿಮಗೊಂದು ಮಹತ್ವದ ಮಾಹಿತಿಯಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಭಾರಿ ರಿಯಾಯಿತಿ ಹೆಸರಿನಲ್ಲಿ ನಡೆಯುವ ಮೋಸದ ಮಾರಾಟವನ್ನು ನಿಷೇಧಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ.

ಆನ್‌ಲೈನ್ ಶಾಪಿಂಗ್ ನಿಯಮಗಳಲ್ಲಿ ಬದಲಾವಣೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರ ವಿಭಾಗದಲ್ಲಿ ಈ ಕಂಪನಿಗಳು ಮತ್ತು ಪ್ಲಾಟ್‌ಫಾರ್ಮ್‌ಗಳ ನೋಂದಣಿಯನ್ನು ಕಡ್ಡಾಯಗೊಳಿಸಲು ಪ್ರಸ್ತಾಪಿಸಲಾಗಿದೆ. ಸಣ್ಣ ವ್ಯಾಪಾರಿಗಳು, ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳ ಮಧ್ಯ ಪ್ರವೇಶ ಮತ್ತು ಭಾರಿ ರಿಯಾಯಿತಿಯ ಬಗ್ಗೆ ದೂರು ನೀಡುತ್ತಿದ್ದಾರೆ. ಈ ದೂರಿನ ನಂತರ ಭಾರತದಲ್ಲಿ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್‌ನಂತಹ ಇ-ಕಾಮರ್ಸ್ ಕಂಪನಿಗಳ ವ್ಯಾಪಾರ ವಿಧಾನದ ಬಗ್ಗೆ  ನಿಯಮ ರೂಪಿಸಲು ಸರ್ಕಾರ ಮುಂದಾಗಿದೆ.

ಫ್ಲ್ಯಾಶ್ ಮಾರಾಟವನ್ನು ಸೀಮಿತಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಸಾಂಪ್ರದಾಯಿಕವಾಗಿ ನಡೆಸುವ ಇ-ಕಾಮರ್ಸ್ ರಿಯಾಯಿತಿ ಮಾರಾಟಕ್ಕೆ ಯಾವುದೇ ನಿಷೇಧವಿರುವುದಿಲ್ಲ. ನಿರ್ದಿಷ್ಟ ಗ್ರಾಹಕರನ್ನು ಸೆಳೆಯಲು ಆಗಾಗ ಮಾಡುವ ಫ್ಲ್ಯಾಶ್ ಸೇಲ್ ನಿಯಂತ್ರಣಕ್ಕೆ ಮುಂದಾಗಿದೆ. ಎಲ್ಲರಿಗೂ ಸಮಾನ ಅವಕಾಶ ನೀಡುವುದು ಇದ್ರ ಉದ್ದೇಶವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...