alex Certify ಬಿಗ್‌ ನ್ಯೂಸ್: ONLINE ವಂಚನೆ ತಡೆಗೆ ಮಹತ್ವದ ಕ್ರಮ‌ – ʼಸಹಾಯವಾಣಿʼ ಸೇವೆ ಆರಂಭಿಸಿದ ಸೈಬರ್‌ ಸೆಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ನ್ಯೂಸ್: ONLINE ವಂಚನೆ ತಡೆಗೆ ಮಹತ್ವದ ಕ್ರಮ‌ – ʼಸಹಾಯವಾಣಿʼ ಸೇವೆ ಆರಂಭಿಸಿದ ಸೈಬರ್‌ ಸೆಲ್

ಭಾರತದಲ್ಲಿ ಬ್ಯಾಂಕಿಂಗ್ ಸೇವೆಗಳು ಆನ್ಲೈನ್ ಆಗ್ತಿವೆ. ಇದೇ ಸಮಯದಲ್ಲಿ ಆನ್ಲೈನ್ ಮೋಸವೂ ವೇಗ ಪಡೆದಿದೆ. ಆನ್ಲೈನ್ ನಲ್ಲಿ ಮೋಸ ಹೋದವರು ಸರಿಯಾದ ಸಮಯಕ್ಕೆ ಸರಿಯಾದ ವ್ಯಕ್ತಿಗೆ ದೂರು ನೀಡದೆ ತೊಂದರೆ ಅನುಭವಿಸುತ್ತಿದ್ದಾರೆ.

ಆನ್ಲೈನ್ ಮೋಸ ತಪ್ಪಿಸಲು ಗೃಹ ಸಚಿವಾಲಯ ಮತ್ತು ದೆಹಲಿ ಪೊಲೀಸರ ಸೈಬರ್ ಸೆಲ್ ಕೈಜೋಡಿಸಿವೆ. ಗೃಹ ಸಚಿವಾಲಯ ಮತ್ತು ದೆಹಲಿ ಪೊಲೀಸರ ಸೈಬರ್ ಸೆಲ್ ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಿದೆ. ಮೋಸ ಹೋದವರು ಈ ಸಹಾಯವಾಣಿಗೆ ಕರೆ ಮಾಡಿ ಸಹಾಯ ಕೇಳಬಹುದು.

ಗೃಹ ಸಚಿವಾಲಯ ಮತ್ತು ದೆಹಲಿ ಪೊಲೀಸರ ಸೈಬರ್ ಸೆಲ್ 155260 ನಂಬರ್ ಸಹಾಯವಾಣಿ ಪ್ರಾರಂಭಿಸಿದೆ. ಆನ್‌ಲೈನ್ ವಂಚನೆಗೆ ಬಲಿಯಾಗಿದ್ದರೆ, ತಕ್ಷಣ ಈ ಸಂಖ್ಯೆಗೆ ಕರೆ ಮಾಡಬಹುದು. ಸಹಾಯವಾಣಿ ಆ ಬ್ಯಾಂಕ್ ಅಥವಾ ಇ-ಸೈಟ್‌ಗಳಿಗೆ ಎಚ್ಚರಿಕೆಯ ಸಂದೇಶವನ್ನು ಕಳುಹಿಸಿ, ನಿಮ್ಮ ಹಣ ಬೇರೆ ಖಾತೆಗೆ ತಲುಪದಂತೆ ತಡೆ ಹಿಡಿಯುತ್ತದೆ.

ಆನ್‌ಲೈನ್ ವಂಚನೆ ಘಟನೆಗಳನ್ನು ತಡೆಗಟ್ಟಲು ಗೃಹ ಸಚಿವಾಲಯದ ಸೈಬರ್ ಪೋರ್ಟಲ್ https://cybercrime.gov.in/  ಮತ್ತು ದೆಹಲಿ ಪೊಲೀಸರ ಸೈಬರ್ ಸೆಲ್‌ 155260 ನಂಬರ್ ಕಳೆದ ನವೆಂಬರ್ ನಲ್ಲಿ ಪ್ರಾಯೋಗಿಕವಾಗಿ ಶುರುವಾಗಿತ್ತು. ಆದರೆ ಈಗ ಇದನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲಾಗಿದೆ.

ಸುಮಾರು 55 ಬ್ಯಾಂಕುಗಳು, ಇ-ವ್ಯಾಲೆಟ್‌ಗಳು, ಇ-ಕಾಮರ್ಸ್ ಸೈಟ್‌ಗಳು, ಪಾವತಿ ಗೇಟ್‌ವೇಗಳು ಮತ್ತು ಇತರ ಸಂಸ್ಥೆಗಳು ಸಿಟಿಜನ್ ಫೈನಾನ್ಷಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಸಿಸ್ಟಮ್ ಎಂಬ ಸಂಪರ್ಕ ವೇದಿಕೆಯನ್ನು ಹೊಂದಿವೆ. ಈ ವೇದಿಕೆಯ ಮೂಲಕ ಆನ್‌ಲೈನ್ ಹಣಕಾಸು ವಂಚನೆಗಳಿಗೆ ಬಲಿಯಾದವರನ್ನು ಬಹಳ ಕಡಿಮೆ ಸಮಯದಲ್ಲಿ ರಕ್ಷಿಸಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...