alex Certify ಆನ್ಲೈನ್ ಕ್ಲಾಸ್ ನಲ್ಲಿ ಅಚಾತುರ್ಯ: ಅಶ್ಲೀಲ ವೀಡಿಯೋ ಪ್ರಸಾರ; ಮಕ್ಕಳು, ಶಿಕ್ಷಕರಿಗೆ ಮುಜುಗರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ಲೈನ್ ಕ್ಲಾಸ್ ನಲ್ಲಿ ಅಚಾತುರ್ಯ: ಅಶ್ಲೀಲ ವೀಡಿಯೋ ಪ್ರಸಾರ; ಮಕ್ಕಳು, ಶಿಕ್ಷಕರಿಗೆ ಮುಜುಗರ

ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಆನ್ಲೈನ್ ಕ್ಲಾಸ್ ನಡೆಯುವಾಗ ಅಶ್ಲೀಲ ವಿಡಿಯೋ ಓಪನ್ನಾಗಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮುಜುಗರಕ್ಕೀಡಾಗಿದ್ದಾರೆ. ಇದರಿಂದಾಗಿ ಆನ್ಲೈನ್ ಕ್ಲಾಸ್ ಬಂದ್ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆನ್ಲೈನ್ ಕ್ಲಾಸ್ ನಡೆಯುವ ಸಂದರ್ಭದಲ್ಲಿ ದಿಢೀರನೆ ಲಿಂಕ್ ಅಪ್ಲೋಡ್ ಆಗಿದ್ದು, ಅದನ್ನು ಕ್ಲಿಕ್ ಮಾಡುತ್ತಿದ್ದಂತೆ ಅಶ್ಲೀಲ ವಿಡಿಯೋಗಳು ಕಾಣಿಸಿಕೊಂಡಿವೆ. ಬೆಂಗಳೂರಿನ ಹೆಣ್ಣೂರು ಮುಖ್ಯರಸ್ತೆಯ ಲಿಂಗರಾಜಪುರದ ಖಾಸಗಿ ಶಾಲೆಯಲ್ಲಿ ಘಟನೆ ನಡೆದಿದೆ. ಕೆಲವು ಪೋಷಕರು ಇದರ ಬಗ್ಗೆ ಚೈಲ್ಡ್ ರೈಟ್ಸ್ ಟ್ರಸ್ಟ್ ಗಮನಕ್ಕೆ ತಂದಿದ್ದಾರೆ.

ಭೌತಿಕ ತರಗತಿ ನಡೆಸಲು ಅನುಮತಿ ನೀಡಲಾಗಿದ್ದರೂ, ಕೂಡ ಈ ಶಾಲೆಯಲ್ಲಿ ಆನ್ಲೈನ್ ಮೂಲಕ ಕ್ಲಾಸ್ ನಡೆಸಲಾಗುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಮಕ್ಕಳು ಆನ್ಲೈನ್ ಕ್ಲಾಸ್ನಲ್ಲಿ ಭಾಗಿಯಾಗಿದ್ದು, ಈ ವೇಳೆ ವಿದ್ಯಾರ್ಥಿನಿಯೊಬ್ಬಳು ನೆಟ್ವರ್ಕ್ ಸಮಸ್ಯೆಯಿಂದ ಹಿಂತಿರುಗಿ ಮತ್ತೆ ಲಾಗಿನ್ ಆಗಿ ಆನ್ಲೈನ್ ಕ್ಲಾಸ್ ಗೆ ಸೇರಿಸಲು ಶಿಕ್ಷಕರಿಗೆ ಮನವಿ ಮಾಡಿದ್ದಾಳೆ. ಶಿಕ್ಷಕರು ಅದನ್ನು ಸ್ವೀಕರಿಸಿದ ಕೂಡಲೇ ಅಶ್ಲೀಲ ವಿಡಿಯೋ ಓಪನ್ ಲಿಂಕ್ ರವಾನೆಯಾಗಿದೆ. ಮಕ್ಕಳು ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಅಶ್ಲೀಲ ವಿಡಿಯೋ ಪ್ರಸಾರವಾಗಿವೆ. ಮಕ್ಕಳೊಂದಿಗೆ ಇದ್ದ ಪೋಷಕರು, ಶಿಕ್ಷಕರು ಕೂಡ ಗಾಬರಿಯಾಗಿದ್ದು, ತಕ್ಷಣ ಆನ್ಲೈನ್ ಕ್ಲಾಸ್ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...