alex Certify 2023-24 ನೇ ಸಾಲಿನಲ್ಲಿ ಹೊಸದಾಗಿ ಖಾಸಗಿ ಶಾಲೆಗಳನ್ನು ಆರಂಭಿಸಲು ಆನ್ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2023-24 ನೇ ಸಾಲಿನಲ್ಲಿ ಹೊಸದಾಗಿ ಖಾಸಗಿ ಶಾಲೆಗಳನ್ನು ಆರಂಭಿಸಲು ಆನ್ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ

ಬೆಂಗಳೂರು : 2023-24ನೇ ಸಾಲಿಗೆ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಖಾಸಗಿ ಶಾಶ್ವತ ಅನುದಾನರಹಿತ 1 ರಿಂದ 8 ಹಾಗೂ 6ರಿಂದ 8ನೇ ತರಗತಿಗಳನ್ನು ಹೊಂದಿರುವ ಶಾಲೆಗಳಲ್ಲಿ ಉನ್ನತೀಕರಿಸಿರುವ 9 ಮತ್ತು 10ನೇ ತರಗತಿಗಳನ್ನು ಪ್ರಾರಂಭಿಸಲು ನೋಂದಣಿ (Registration) ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಬಗ್ಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

2023-24ನೇ ಸಾಲಿಗೆ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಖಾಸಗಿ ಶಾಶ್ವತ ಅನುದಾನರಹಿತ 1 ರಿಂದ 8 ಹಾಗೂ 6ರಿಂದ 8ನೇ ತರಗತಿಗಳನ್ನು ಹೊಂದಿರುವ ಶಾಲೆಗಳಲ್ಲಿ ಉನ್ನತೀಕರಿಸಿರುವ 9 ಮತ್ತು 10ನೇ ತರಗತಿಗಳನ್ನು ಪ್ರಾರಂಭಿಸಲು ಉದ್ದೇಶಿಸಿರುವ ಸಂಸ್ಥೆಗಳು ಆನ್‌ಲೈನ್ ತಂತ್ರಾಂಶದ ಮುಖಾಂತರ ಇಲಾಖಾ ವೆಬ್‌ಸೈಟ್‌ನಲ್ಲಿ [www.schooleducation.kar.nic.in] ಅರ್ಜಿಗಳನ್ನು ಸಲ್ಲಿಸಿ ಅಗತ್ಯ ದಾಖಲೆಗಳನ್ನು ಸಲ್ಲಿಸದೇ ಇರುವ ಕಾರಣ ಹಾಗೂ ನಿಗದಿತ ಅಳತೆಯ ನಿವೇಶನದ ಕೊರತೆಯ ಕಾರಣದಿಂದ ತಿರಸ್ಕೃತಗೊಂಡಿರುವ 2022-23 ಮತ್ತು 2023-24ನೇ ಸಾಲಿನ ಶಾಲೆಯವರು ಮತ್ತೊಮ್ಮೆ ಅಗತ್ಯ ದಾಖಲೆಗಳನ್ನು ತಮ್ಮ ಈ ಹಿಂದಿನ ಶುಲ್ಕ ಪಾವತಿ ವಿವರದೊಂದಿಗೆ ಮುಂದುವರೆದು 2023-24ನೇ ಸಾಲಿನ ಹೊಸ ತಂತ್ರಾಂಶದಲ್ಲಿ ಸಲ್ಲಿಸಲು ದಿನಾಂಕ: 09-10-2023 ರಿಂದ ದಿನಾಂಕ:21-10-2023 ವರಗೆ ಅವಕಾಶ ಕಲ್ಪಿಸಲಾಗಿದೆ.

 2023-24ನೇ ಸಾಲಿನಲ್ಲಿ ಉನ್ನತೀಕರಿಸಿರುವ 9 ಮತ್ತು 10ನೇ ತರಗತಿಗಳನ್ನು ಪ್ರಾರಂಭಿಸಲು ಶುಲ್ಕ ಪಾವತಿಸಿ ತಾಂತ್ರಿಕ ಸಮಸ್ಯೆಯ ಕಾರಣದಿಂದ ಅಂತಿಮ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ಅವಕಾಶ ಸಿಗದಿರುವ ಆಡಳಿತ ಮಂಡಳಿಗಳಿಗೂ 2023-24ನೇ ಸಾಲಿನ ಹೊಸ ತಂತ್ರಾಂಶದಲ್ಲಿ ಸಲ್ಲಿಸಲು ದಿನಾಂಕ: 09-10-2023 ರಿಂದ ದಿನಾಂಕ:21-10-2023 ವರೆಗೆ ಅವಕಾಶ ಕಲ್ಪಿಸಲಾಗಿದೆ.

2023-24ನೇ ಸಾಲಿನಲ್ಲಿ ಉಲ್ಲೇಖ (3)ರಲ್ಲಿ ಆನ್ ಲೈನ್ ಪ್ರಕ್ರಿಯೆಯಲ್ಲಿ ಕೆಲವು ಸುಧಾರಣೆಗಳು ಅಳವಡಿಸಿದ್ದು ಅದರಂತ ಪರಿಷ್ಕರಿಸಿ ವಿವರವಾದ ಸುತ್ತೋಲೆ ಹೊರಡಿಸಲಾಗಿತ್ತು. ಉಲ್ಲೇಖ(5)ರಲ್ಲಿ 2017-18 ಪೂರ್ವದ ಶಾಲೆಗಳಿಗೆ ನಿಗದಿತ ನಿವೇಶನದ ಮಾನದಂಡಗಳನ್ನು ವಿನಾಯಿತಿ ನೀಡಲಾಗಿದೆ. ಉಳಿದಂತೆ ಎಲ್ಲಾ ಮಾನದಂಡಗಳನ್ನು ನಿಯಮಾನುಸಾರ ಪರಿಶೀಲಿಸಿ ಉಪನಿರ್ದಶಕರು ನಿಯಮಾನುಸಾರ ಅರ್ಜಿಗಳನ್ನು ಇತ್ಯರ್ಥಪಡಿಸುವುದು.

ಆಡಳಿತ ಮಂಡಳಿಗಳು ಜವಾಬ್ದಾರಿಗಳು:-

ಖಾಸಗಿ ಶಾಲೆಯ ಎಲ್ಲಾ ಆಡಳಿತ ಮಂಡಳಿಗಳು ತಮ್ಮ ಶಾಲೆಯ ಲಾಗಿನ್ ಐಡಿ (LOGIN ID ) ಮತ್ತು ಪಾಸ್‌ವರ್ಡ್ (PASSWORD) ಬಳಸಿಕೊಂಡು 2023-24ನೇ ಸಾಲಿನ ಹೊಸ ಶಾಲೆ ನೂಂದಣಿ ತಂತ್ರಾಂಶದಲ್ಲಿ ಲಾಗಿನ್ ಆಗುವುದು, ಲಾಗಿನ್ ಆದ ನಂತರದಲ್ಲಿ ತಿರಸ್ಕೃತ ಆದೇಶದಲ್ಲಿನ ಅಗತ್ಯ ಮಾಹಿತಿ /ದಾಖಲೆಗಳನ್ನು ಸಂಗ್ರಹಿಸಿಕೊಂಡು ಹಾಗೂ ಜಿಯೋ ಟ್ಯಾಗ್ ಮಾದರಿಯಲ್ಲಿ ಶಾಲಾ ಮೂಲಭೂತ ಸೌಲಭ್ಯಗಳ, ಕಟ್ಟಡದ ಫೋಟೋ ಮತ್ತು ವಿಡಿಯೋಗಳನ್ನು ಅಪ್‌ಲೋಡ್ ಮಾಡುವುದು. ಉಳಿದಂತ ಉಲ್ಲೇಖ(1) ರ ಈ ಹಿಂದಿನ ಅಧಿಸೂಚನೆಯಲ್ಲಿನ ಮಾನದಂಡಗಳು ಯಥಾವತ್ತಾಗಿ ಮುಂದುವರೆಸುವುದು,

ಆನ್‌ಲೈನ್‌ನಲ್ಲಿ ದಾಖಲೆ ಸಲ್ಲಿಸಲು ಕಳಕಂಡಂತ ಅಗತ್ಯ ಕ್ರಮವಹಿಸುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...