alex Certify ಮದ್ಯದಂಗಡಿ ಮುಂದೆ ನಿಲ್ಲಬೇಕಾಗಿಲ್ಲ ಕ್ಯೂ….! ಮನೆಗೆ ಬರಲಿದೆ ಆಲ್ಕೋಹಾಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದಂಗಡಿ ಮುಂದೆ ನಿಲ್ಲಬೇಕಾಗಿಲ್ಲ ಕ್ಯೂ….! ಮನೆಗೆ ಬರಲಿದೆ ಆಲ್ಕೋಹಾಲ್

ದೇಶದ ಅನೇಕ ಭಾಗಗಳಲ್ಲಿ ಲಾಕ್ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಘೋಷಣೆ ಮಾಡ್ತಿದ್ದಂತೆ ಜನರು ವಸ್ತುಗಳ ಖರೀದಿಗೆ ಮುಗಿ ಬಿದ್ದಿದ್ದರು. ಮದ್ಯದಂಗಡಿ ಮುಂದೆ ದೊಡ್ಡ ಸಾಲಿತ್ತು. ಇದನ್ನು ಗಮನಿಸಿದ ಛತ್ತೀಸ್ಗಢ ಸರ್ಕಾರ ಆನ್ಲೈನ್ ನಲ್ಲಿ ಮಧ್ಯ ಮಾರಾಟಕ್ಕೆ ಅನುಮತಿ ನೀಡಿದೆ.

ರಾಜ್ಯದಲ್ಲಿ ಸೋಮವಾರದಿಂದ ಆನ್ಲೈನ್ ಆಲ್ಕೋಹಾಲ್ ಡಿಲೆವರಿ ಶುರುವಾಗಿದೆ. ಛತ್ತೀಸ್ಗಢ ಸರ್ಕಾರ ಮಾತ್ರವಲ್ಲ ದೆಹಲಿ, ಮುಂಬೈ ಸರ್ಕಾರ ಕೂಡ ಆನ್ಲೈನ್ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಆನ್ಲೈನ್ ನಲ್ಲಿ ಮದ್ಯ ಮಾರಾಟಕ್ಕೆ ಕೆಲ ಅಪ್ಲಿಕೇಷನ್ ಬಳಸಬಹುದು.

ಲಿವಿಂಗ್ ಲಿಕ್ವಿಡ್ಜ್ ಅಪ್ಲಿಕೇಶನ್ ಮೂಲಕ ಅಂತರರಾಷ್ಟ್ರೀಯ ಮತ್ತು ಸ್ಥಳೀಯ ಬ್ರಾಂಡ್‌ಗಳ ಮದ್ಯವನ್ನು ಆರ್ಡರ್ ಮಾಡಬಹುದು. 25 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಮದ್ಯ ಆರ್ಡರ್ ಮಾಡಬಹುದು.

ಈ ಅಪ್ಲಿಕೇಷನ್ ಮುಂಬೈ, ನವೀ ಮುಂಬೈ, ಥಾಣೆ, ಬೆಂಗಳೂರಿನಂತಹ ನಗರಗಳಿಗೆ ಮದ್ಯ ಡಿಲೆವರಿ ಮಾಡುತ್ತದೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ಲಿವಿಂಗ್ ಲಿಕ್ವಿಡ್ಸ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಕರೆ, ವಾಟ್ಸಾಪ್ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ಆರ್ಡರ್ ಮಾಡಬಹುದು.

ಭಾರತದ ಮೊದಲ ಕಾನೂನುಬದ್ಧ ಮದ್ಯ ವಿತರಣೆಯಾಗಿ ಹಿಪ್ಬಾರನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಈ ಆ್ಯಪ್ ಮೂಲಕ  ಬಿಯರ್, ವಿಸ್ಕಿ, ಟಕಿಲಾ, ರಮ್, ಬ್ರಾಂಡಿ, ಜಿನ್, ವೈನ್, ವೋಡ್ಕಾ ಮತ್ತು ಇತರ ಹಲವು ರೀತಿಯ ಮದ್ಯವನ್ನು ಖರೀದಿಸಬಹುದು. ಈ ಅಪ್ಲಿಕೇಶನನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು.

ಜೊಮಾಟೊ ಜನಪ್ರಿಯ ಆಹಾರ ವಿತರಣಾ ಅಪ್ಲಿಕೇಶನ್. ಇದ್ರಲ್ಲೂ ವೈನ್ ಆರ್ಡರ್ ಮಾಡಬಹುದು. ಜೊಮಾಟೊ ಭುವನೇಶ್ವರ, ಕೋಲ್ಕತಾ, ಸಿಲಿಗುರಿ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಮದ್ಯವನ್ನು ಡಿಲೆವರಿ ಮಾಡುತ್ತದೆ. ಆರ್ಡರ್ ಮಾಡಿದ 60 ನಿಮಿಷಗಳಲ್ಲಿ ಮದ್ಯ ಮನೆಗೆ ಬರುತ್ತದೆ.

ಇದಲ್ಲದೆ ಬಿಯರ್ ಬಾಕ್ಸ್, ಸ್ವಿಗ್ಗಿ, ನೇಚರ್ಸ್ ಬಾಸ್ಕೆಟ್ ನಲ್ಲಿ ಕೂಡ ಆಲ್ಕೋಹಾಲ್ ಖರೀದಿ ಮಾಡಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...