
ಯೂರೋಪ್‌ನ ಅತ್ಯಂತ ಬ್ಯುಸಿ ವಿಮಾನ ನಿಲ್ದಾಣಗಳಲ್ಲಿ ಒಂದಾದ ಆಮ್ಸ್‌ಸ್ಟರ್‌ಡ್ಯಾಂನ ಶಿಪೋಲ್ ವಿಮಾನ ನಿಲ್ದಾಣಕ್ಕೆ ಇತ್ತೀಚಿನ ದಿನಗಳಲ್ಲಿ ಅತ್ಯಂತ ಅಸಹಜ ಸವಾಲೊಂದು ಎದುರಾಗಿದೆ.
ವಿಮಾನ ನಿಲ್ದಾಣವು 10.3 ಚದರ ಮೈಲಿ ವಿಸ್ತೀರ್ಣದಲ್ಲಿ ಹಬ್ಬಿದ್ದು, ಆಗಾಗ ನಿಂತ ನೀರಿನಿಂದ ಭಾರೀ ಸಮಸ್ಯೆ ಎದುರಿಸುತ್ತಲೇ ಇರುತ್ತದೆ. ಈ ಪ್ರದೇಶದಲ್ಲಿ ಚೆನ್ನಾಗಿ ಬೆಳೆ ಬೆಳೆಯುವ ವಾತಾವರಣವಿದ್ದು, ಪಕ್ಷಿಗಳನ್ನು ಸೆಳೆಯುತ್ತದೆ.
ಶಿಲ್ಪಾ ಶೆಟ್ಟಿ – ರಾಜ್ ಕುಂದ್ರಾಗೆ ಮತ್ತೊಂದು ಶಾಕ್: ದಂಪತಿಗಳ ವಿರುದ್ಧ ತಿರುಗಿಬಿದ್ದ ಶೆರ್ಲಿನ್ ಚೋಪ್ರಾ
ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಬರುವ ಪಕ್ಷಿಗಳು ವಿಪರೀತ ಎನ್ನುವಷ್ಟು ಹೆಚ್ಚಾಗಿದ್ದು, ವಿಮಾನ ನಿಲ್ದಾಣಕ್ಕೆ ಆಗಮಿಸುವ ಹಾಗೂ ಅಲ್ಲಿಂದ ನಿರ್ಗಮಿಸುವ ವಿಮಾನಗಳ ಓಡಾಟಕ್ಕೇ ಸವಾಲಾಗಿಬಿಟ್ಟಿವೆ ಈ ಪಕ್ಷಿಗಳು. ರನ್‌ವೇಗಳ ನಡುವೆ ಬಾತುಕೋಳಿಗಳ ಗುಂಪೊಂದು ಅಡ್ಡಾಡುವುದನ್ನು ಸಹ ನೋಡಬಹುದಾಗಿದೆ.
ಈ ಪಕ್ಷಿಗಳ ಅಡ್ಡಾಟವನ್ನು ತಹಬದಿಗೆ ತರಲೆಂದು ವಿಶಿಷ್ಟವಾದ ಪ್ರಯತ್ನಕ್ಕೆ ಕೈ ಹಾಕಿರುವ ವಿಮಾನ ನಿಲ್ದಾಣದ ಆಡಳಿತ ವರ್ಗ ಹಂದಿಗಳು ವಿಶೇಷ ತಂಡವೊಂದನ್ನು ರನ್‌ವೇಗಳ ಸುತ್ತ ಗಸ್ತು ತಿರುಗಲು ನೇಮಕ ಮಾಡಿಕೊಂಡಿದೆ. ಈ ಹಂದಿಗಳ ಸಮೂಹವು ರನ್‌ವೇ ಸುತ್ತ ಪಕ್ಷಿಗಳು ಬಾರದಂತೆ ನೋಡಿಕೊಳ್ಳುತ್ತಿದೆ.
ಬರೋಬ್ಬರಿ 9 ತಿಂಗಳ ಲಾಕ್‌ಡೌನ್ ಬಳಿಕ ಸಹಜ ಸ್ಥಿತಿಗೆ ಮರಳುತ್ತಿದೆ ಈ ನಗರ….!
ಶಿಫೋಲ್ ವಿಮಾನ ನಿಲ್ದಾಣದ ಡ್ಯೂಟಿಗೆಂದು 20 ಹಂದಿಗಳ ತಂಡವನ್ನು ನೇಮಕ ಮಾಡಿಕೊಳ್ಳಲಾಗಿದೆ. ವಿಮಾನದ ಆರು ರನ್‌ವೇಗಳ ಭದ್ರತೆಗಾಗಿ ಈ ಹಂದಿಗಳನ್ನು ನೇಮಕ ಮಾಡಲಾಗಿದೆ.
ಪ್ರಯಾಣಿಕರ ಆಗಮನ/ನಿರ್ಗಮನದ ಲೆಕ್ಕಾಚಾರದಲ್ಲಿ ಯೂರೋಪ್‌ನ ಮೂರನೇ ಅತಿ ದೊಡ್ಡ ವಿಮಾನ ನಿಲ್ದಾಣವಾದ ಶಿಫೋಲಿ ಒಟ್ಟಾರೆ ವಿಮಾನಗಳ ಸಂಚಾರದಲ್ಲಿ ಖಂಡದ ಅತ್ಯಂತ ದೊಡ್ಡ ನಿಲ್ದಾಣವಾಗಿದೆ.