alex Certify ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಿಸಾಡುವ ಮುನ್ನ ಈ ಸ್ಪೂರ್ತಿದಾಯಕ ಸ್ಟೋರಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಿಸಾಡುವ ಮುನ್ನ ಈ ಸ್ಪೂರ್ತಿದಾಯಕ ಸ್ಟೋರಿ ಓದಿ

ಪುಣೆ: ಪ್ಲಾಸ್ಟಿಕ್ ತ್ಯಾಜ್ಯಗಳು ಪರಿಸರಕ್ಕೆ ಅತ್ಯಂತ ಮಾಲಿನ್ಯಕಾರಕ ತ್ಯಾಜ್ಯಗಳಾಗಿವೆ. ಇವು ಭೂಮಿಯಲ್ಲಿ ಕೊಳೆಯಲು 1000 ವರ್ಷಗಳಿಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಆದರೆ, ತ್ಯಾಜ್ಯ ವಿಲೇವಾರಿ ಮಾಡುವ ‘ಎಕೋಕರಿ’ಯಂತಹ ಸಂಸ್ಥೆಗಳಿಗೆ ಧನ್ಯವಾದ ಹೇಳಲೇಬೇಕು. ಯಾಕೆಂದರೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಬಹುದಾದ ಉತ್ಪನ್ನಗಳನ್ನಾಗಿ ಮಾರ್ಪಾಡು ಮಾಡುತ್ತಿದೆ.

ನಂದನ್ ಭಟ್ ಅವರು ಎಕೋಕರಿ ಸಂಸ್ಥೆಯನ್ನು ಮಹಾರಾಷ್ಟ್ರದ ಪುಣೆಯಲ್ಲಿ ಸ್ಥಾಪಿಸಿದ್ದಾರೆ. ಪರಿಸರವನ್ನು ಸಂರಕ್ಷಿಸುವ ಹಾಗೂ ಮಹಿಳೆಯರು ಮತ್ತು ಯುವಕರಿಗೆ ಕುಶಲಕರ್ಮಿಗಳಾಗಿ ಜೀವನೋಪಾಯವನ್ನು ಒದಗಿಸುವ ಮುಖ್ಯ ಉದ್ದೇಶವನ್ನು ಎಕೋಕರಿ ಸಂಸ್ಥೆ ಹೊಂದಿದೆ ಎಂದು ನಂದನ್ ಭಟ್ ತಿಳಿಸಿದ್ದಾರೆ. ಕಾಶ್ಮೀರದಲ್ಲಿ ಹುಟ್ಟಿ, ಬೆಳೆದ ನಂದನ್ ಭಟ್, “ನಾನು ಯಾವಾಗಲೂ ಪ್ರಕೃತಿಯೊಂದಿಗೆ ಸಂಪರ್ಕ ಹೊಂದಿದ್ದೇನೆ. ಹಾಗೂ ಅದರ ಒಳಿತಿಗಾಗಿ ಏನಾದರೂ ಮಾಡಲು ಬಯಸುತ್ತೇನೆ” ಎಂದು ಹೇಳಿದ್ದಾರೆ.

ಕೋವಿಡ್‌ ಎಫೆಕ್ಟ್: ಆಹಾರಕ್ಕಾಗಿ ಗ್ರಾಮಗಳಿಗೆ ಲಗ್ಗೆಯಿಡುತ್ತಿವೆ ಕೋತಿಗಳು

ಇನ್ನು ಪ್ಲಾಸ್ಟಿಕ್ ತ್ಯಾಜ್ಯಗಳ ಕುರಿತು ಅವರ ಸಂಶೋಧನೆಯು ಮಹಾರಾಷ್ಟ್ರಕ್ಕೆ ತೆರಳಿದ ಬಳಿಕ ಪ್ರಾರಂಭವಾಯಿತು. ಪ್ಲಾಸ್ಟಿಕ್ ತ್ಯಾಜ್ಯವನ್ನು ಜನರು ಪರ್ವತಗಳಲ್ಲಿ, ಬೀದಿಯಲ್ಲಿ ಎಸೆಯುವುದನ್ನು ಗಮನಿಸಿದರು. ಈ ವೇಳೆ ತ್ಯಾಜ್ಯವನ್ನು ಬಳಸಬಹುದಾದ ಉತ್ಪನ್ನಗಳನ್ನಾಗಿ ಮಾರ್ಪಾಡು ಮಾಡುವ ಆಲೋಚನೆ ಬಂದಿರುವುದಾಗಿ ಅವರು ಹೇಳಿದರು.

ಕಳೆದ ವರ್ಷ ಭಾರತದಲ್ಲಿ ಮೊದಲ ಅಲೆಯ ಕೊರೋನ ವೈರಸ್ ನಂತರ ಅವರು ತಮ್ಮ ಯೋಜನೆಯನ್ನು ಔಪಚಾರಿಕವಾಗಿ ಆರಂಭಿಸಿದರು. ಅಂದಿನಿಂದ ‘ಎಕೋಕಾರಿ’ ದೇಶದಾದ್ಯಂತ ಪ್ಲಾಸ್ಟಿಕ್ ತ್ಯಾಜ್ಯ ಎತ್ತುವ ಸಂಸ್ಥೆಗಳು, ಹಾಗೂ ಉತ್ಪಾದಿಸುವ ಕಂಪನಿಗಳಿಂದ ಒಪ್ಪಂದ ಮಾಡಿಕೊಂಡಿದೆ. ನಂತರ ಅದನ್ನು ಮರುಬಳಕೆ ಮಾಡಲಾಗುತ್ತದೆ.

ಸಂಗ್ರಾಹಕರಿಂದ ಸ್ವೀಕರಿಸಿದ ನಂತರ ಅವರು ಪ್ಲಾಸ್ಟಿಕ್ ಅನ್ನು ತೊಳೆದು ಸ್ವಚ್ಛಗೊಳಿಸುತ್ತಾರೆ. ಕುತೂಹಲಕಾರಿ ಅಂಶವೆಂದರೆ, ಪ್ಲಾಸ್ಟಿಕ್ ಅನ್ನು ಉಡುಗೊರೆ ಹೊದಿಕೆಗಳು, ಚಿಪ್ ಗಳ ಪ್ಯಾಕೆಟ್ ಗಳು ಹಾಗೂ ಕುಕೀಗಳ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಅವುಗಳನ್ನು ಚೀಲಗಳು, ಶೂಗಳು ಹಾಗೂ ಇತರೆ ಬಳಸಬಹುದಾದ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇನ್ನು ಈ ಉತ್ಪನ್ನಗಳನ್ನು ತಮ್ಮದೇ ವೆಬ್ ಸೈಟ್ ಹಾಗೂ ಇತರ ತೃತೀಯ ಇ-ಕಾಮರ್ಸ್ ವೆಬ್ ಸೈಟ್ ಗಳ ಮೂಲಕ ಮಾರಾಟ ಮಾಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...