alex Certify 59 ವರ್ಷಗಳ ಹಿಂದೆ ನಡೆದಿದ್ದ ಮದುವೆ ಫೋಟೊಶೂಟ್ ಮರುಸೃಷ್ಟಿ ಮಾಡಿದ ವೃದ್ಧ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

59 ವರ್ಷಗಳ ಹಿಂದೆ ನಡೆದಿದ್ದ ಮದುವೆ ಫೋಟೊಶೂಟ್ ಮರುಸೃಷ್ಟಿ ಮಾಡಿದ ವೃದ್ಧ ದಂಪತಿ

ಕೇರನ್ ಮತ್ತು ಗ್ಯಾರಿ ರ್ಯಾನ್, ಇಬ್ಬರಿಗೂ 79 ವರ್ಷ ಈಗ. ಆದರೆ ಅವರ ಜೀವನೋತ್ಸಾಹಕ್ಕೆ ಇನ್ನೂ ಹದಿಹರೆಯ. 1962ರಲ್ಲಿ ಅವರ ವಿವಾಹ ಸಮಾರಂಭ ಅದ್ಧೂರಿಯಿಂದ ನಡೆದಿತ್ತು.

ವೈನ್ ಪಾರ್ಟಿ, ನೂರಾರು ಸ್ನೇಹಿತರ ಹಾರೈಕೆಗಳ ನಡುವೆ ಜೋಡಿಯು ಖುಷಿಯಿಂದ ಮಿಂದೆದ್ದಿತ್ತು. ಆದರೆ ಬಳಿಕ ಜೀವನ ಜಂಜಾಟದಲ್ಲಿ ಮುಳುಗಿದ್ದ ಜೋಡಿಗೆ ಅವರ ವಿವಾಹ ವಾರ್ಷಿಕೋತ್ಸವಗಳ ಲೆಕ್ಕವೇ ಇಲ್ಲದಂತಾಗಿ ದಿನಗಳನ್ನು ದೂಡುತ್ತಿದ್ದರು ಅಷ್ಟೇ.

ಇದೇ ವೇಳೆ ಕೆಲ ದಿನಗಳ ಮುನ್ನ ಗೋಡೌನ್‍ನಲ್ಲಿ ಎಸೆಯಲಾಗಿದ್ದ ಕೇರನ್ ಅವರ ವೆಡ್ಡಿಂಗ್ ಗೌನ್, ಅವರ ಮೊಮ್ಮಗಳಿಗೆ ಸಿಕ್ಕಿಬಿಡ್ತು. ಆಕೆಯು ಈ ಬಾರಿಯ ವಿವಾಹ ವಾರ್ಷಿಕೋತ್ಸವವನ್ನು 59 ವರ್ಷಗಳ ಮುನ್ನ ನಡೆದಂತೆಯೆ ಮರುಸೃಷ್ಟಿಸಿ ಫೋಟೊಶೂಟ್ ಮಾಡುವ ಐಡಿಯಾ ಕೊಟ್ಟಳು. ವೃದ್ಧ ದಂಪತಿಯು ಖುಷಿಯಿಂದ ಒಪ್ಪಿಕೊಂಡರು.

ತಾಯಿ – ಪತ್ನಿ ಮಧ್ಯೆ ಸಿಕ್ಕು ಹೈರಾಣಾದ ಹುಡುಗ…! ವೈರಲ್‌ ಆಯ್ತು ವಿಡಿಯೋ

ಗ್ಯಾರಿ ಸೂಟ್ ಧರಿಸಿದರೆ, ಕೇರನ್ ಹಳೆಯ ಗೌನ್ ತೊಟ್ಟು ಬೊಚ್ಚು ಬಾಯಿಯಲ್ಲಿ ಸಂಭ್ರಮಿಸಿದರು. ವೈನ್ ಪಾರ್ಟಿ ಮಾಡಿ ಮಿಂಚಿದರು. ಇವರ ಮೊಮ್ಮಗಳು ನಿಕ್ಕಿ ರ್ಯಾನ್, ಫೋಟೊಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...