alex Certify ಜಮ್ಮು & ಕಾಶ್ಮೀರ ಪ್ರವಾಸದಲ್ಲಿ ರಾಹುಲ್​: ದುರ್ಗಾ ಮಾತೆ ದರ್ಶನ ಪಡೆದ ‘ರಾಗಾ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಮ್ಮು & ಕಾಶ್ಮೀರ ಪ್ರವಾಸದಲ್ಲಿ ರಾಹುಲ್​: ದುರ್ಗಾ ಮಾತೆ ದರ್ಶನ ಪಡೆದ ‘ರಾಗಾ’

ಕಾಶ್ಮೀರ ಪ್ರವಾಸದಲ್ಲಿ ರಾಹುಲ್ ಗಾಂಧಿ: ಖೀರ್ ಭವಾನಿ ದೇಗುಲಕ್ಕೆ ಭೇಟಿ, ದುರ್ಗಾದೇವಿ  ದರ್ಶನ ಪಡೆದ ಕಾಂಗ್ರೆಸ್ ನಾಯಕ- Kannada Prabhaಜಮ್ಮು & ಕಾಶ್ಮೀರ ಪ್ರವಾಸದಲ್ಲಿರುವ ಸಂಸದ ಹಾಗೂ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಇಂದು ಗಂದೇರ್​​ಬಲ್​ ಜಿಲ್ಲೆಯಲ್ಲಿರುವ ಖೀರ್​ ಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ಜಮ್ಮು ಕಾಶ್ಮೀರದಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿರುವ ರಾಹುಲ್​ ಗಾಂಧಿ, ಮುಂಜಾನೆ ಮಧ್ಯ ಕಾಶ್ಮೀರ ಜಿಲ್ಲೆಯ ತಲ್ಲಮುಕ್ಕಾ ಪ್ರದೇಶದ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಕಾಂಗ್ರೆಸ್​ ನಾಯಕರು ಮಾಹಿತಿ ನೀಡಿದ್ದಾರೆ.

ಖೀರ್ ಭವಾನಿ ಎಂದೇ ಖ್ಯಾತಿ ಪಡೆದಿರುವ ರಗ್ನ್ಯಾ ದೇವಿ ದೇಗುಲಕ್ಕೆ ರಾಹುಲ್​ ಭೇಟಿಗೆ ಕೆ.ಸಿ. ವೇಣುಗೋಪಾಲ್​ ಕೂಡ ಸಾಥ್​ ನೀಡಿದ್ರು. ಇದೊಂದು ಖಾಸಗಿ ಭೇಟಿ. ರಾಹುಲ್​ ಗಾಂಧಿಯವರು ದೇಗುಲಕ್ಕೆ ಪೂಜೆ ಸಲ್ಲಿಸಲು ಇಚ್ಛಿಸಿದ್ದರು ಎಂದು ಕೆಸಿವಿ ಹೇಳಿದ್ದಾರೆ.

ರಾಹುಲ್​ ಗಾಂಧಿಯನ್ನು ಸ್ವಾಗತಿಸುವ ಸಲುವಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ದೇಗುಲದ ಸಂಕೀರ್ಣದ ಹೊರಗೆ ಜಮಾಯಿಸಿದ್ದರು. ಖೀರ್​ ಭವಾನಿ ದೇಗುಲ ಭೇಟಿ ಬಳಿಕ ರಾಹುಲ್​ ಗಾಂಧಿ ದಾಲ್​ ಸರೋವರ ದಡದಲ್ಲಿರುವ ದರ್ಗಾ ಹಜರತ್​ಬಾಲ್​ ದೇವಸ್ಥಾನಕ್ಕೂ ಭೇಟಿ ನೀಡಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...