alex Certify ಗಾಂಧಿ ಜಯಂತಿ ಪ್ರಯುಕ್ತ ʼಮೆಟ್ರೋʼ ಪ್ರಯಾಣಿಕರಿಗೆ ಬಂಪರ್ ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಂಧಿ ಜಯಂತಿ ಪ್ರಯುಕ್ತ ʼಮೆಟ್ರೋʼ ಪ್ರಯಾಣಿಕರಿಗೆ ಬಂಪರ್ ಆಫರ್

ಗಾಂಧಿ ಜಯಂತಿಯ ಪ್ರಯುಕ್ತ ಕೊಚ್ಚಿ ಮೆಟ್ರೋ ರೈಲು ನಿಗಮ​​ ಪ್ರಯಾಣಿಕರಿಗೆ ಪ್ರಯಾಣ ದರದಲ್ಲಿ 50 ಪ್ರತಿಶತ ವಿನಾಯ್ತಿ ನೀಡಿದೆ. ಕೊಚ್ಚಿ 1 ಕಾರ್ಡ್ ಹೊಂದಿರುವವರಿಗೆ ಸಹ ಕ್ಯಾಶ್​ಬ್ಯಾಕ್​ ಸೌಕರ್ಯ ನೀಡಲಾಗಿದೆ. ಕೆಎಂಆರ್​ಎಲ್​ ದಿವ್ಯಾಂಗ ಪ್ರಯಾಣಿಕರಿಗೆ ಉಚಿತ ಪ್ರಯಾಣ ಹಾಗೂ ದಿವ್ಯಾಂಗ ವ್ಯಕ್ತಿಯ ಜೊತೆ ಬರುವವರಿಗೆ ಇಂದಿನಿಂದ 50 ಪ್ರತಿಶತ ದರ ವಿನಾಯ್ತಿ ನೀಡುತ್ತಿದೆ.

ಈ ನಡುವೆ ಕೊಚ್ಚಿ ಮೆಟ್ರೋ ಅಧಿಕಾರಿಗಳು ಮೆಟ್ರೋ ರೈಲು ಸಂಚಾರದ ವಾರಾಂತ್ಯದ ಪಟ್ಟಿಯನ್ನು ಪರಿಷ್ಕರಿಸಿದ್ದಾರೆ. ಲಾಕ್ ​ಡೌನ್​ ಬಳಿಕ ವಾರದ ದಿನಗಳಂತೆಯೇ ವಾರಾಂತ್ಯದಲ್ಲೂ ಜನಸಂದಣಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ರೈಲು ಸಂಚಾರದ ವೇಳಾಪಟ್ಟಿ ಬದಲಿಸಲು ನಿರ್ಧರಿಸಲಾಗಿದೆ ಎಂದು KMRL ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಶನಿವಾರದಂದು ಮೆಟ್ರೋ ರೈಲುಗಳ ನಡುವಿನ ಅಂತರವನ್ನು 8 ನಿಮಿಷ 15 ಸೆಕೆಂಡ್​ಗೆ ನಿಗದಿ ಮಾಡಲಾಗಿದೆ. ಜನರ ಓಡಾಟ ಕಡಿಮೆ ಇರುವ ಸಮಯದಲ್ಲಿ ಈ ಅಂತರವು 10 ನಿಮಿಷ ಆಗಿರಲಿದೆ. ಭಾನುವಾರದಂದು ಈ ಹಿಂದೆ ಮೆಟ್ರೋ ರೈಲು ಸಂಚಾರದ ನಡುವಿನ ಅಂತರವನ್ನು 15 ನಿಮಿಷಕ್ಕೆ ನಿಗದಿ ಮಾಡಲಾಗಿತ್ತು. ಆದರೆ ಈಗ ಈ ಅವಧಿಯನ್ನು 10 ನಿಮಿಷಕ್ಕೆ ಬದಲಾಯಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...