alex Certify ನವರಾತ್ರಿಯಂದು ರಹಸ್ಯ ದುರ್ಗಾ ಮಂತ್ರ ಹಂಚಿಕೊಂಡ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವರಾತ್ರಿಯಂದು ರಹಸ್ಯ ದುರ್ಗಾ ಮಂತ್ರ ಹಂಚಿಕೊಂಡ ನಟಿ

ನಟಿ ಸುಶ್ಮಿತಾ ಸೇನ್‌ ಅವರು ಸಿಂಗಲ್‌ ಪೇರೆಂಟ್‌. ಅವರು ಇಬ್ಬರು ಪುತ್ರಿಯರನ್ನು ತಮ್ಮ ಸ್ವಂತ ಬಲದ ಮೇಲೆ ಬೆಳೆಸುತ್ತಿರುವ ದಿಟ್ಟ ಮಹಿಳೆ. 1994ರಲ್ಲೇ ಮಿಸ್‌ ಯೂನಿವರ್ಸ್‌ ಪಟ್ಟ ಮುಡಿಗೇರಿಸಿಕೊಂಡ ಪಶ್ಚಿಮ ಬಂಗಾಳದ ಸುಂದರಿಗೆ ಸದ್ಯ 45 ವರ್ಷ.

ಅವರು ಈ ದುರ್ಗಾಷ್ಟಮಿಗೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯ ಮೂಲಕ ಅಭಿಮಾನಿಗಳಿಗೆ ಮತ್ತು ದೇಶದ ಜನರಿಗೆ ಶುಭಾಶಯ ಕೋರಿದ್ದಾರೆ. ಆದರೆ, ಈ ಬಾರಿ ಒಂದು ವಿಶೇಷವೂ ಇದೆ. ಅದೇನೆಂದರೆ ಅವರು, ಪ್ರಾರ್ಥನೆ ಸಮಯದಲ್ಲಿ ದುಗ್ಗಾ ದುಗ್ಗಾ ಎಂದು ರಹಸ್ಯ ಮಂತ್ರವನ್ನು ಜಪಿಸುತ್ತಾರಂತೆ!

BIG NEWS: ವಿಶೇಷ ಪ್ರಕರಣಗಳಲ್ಲಿ ಮಹಿಳೆ ಗರ್ಭಪಾತದ ಅವಧಿಯನ್ನು 20 ರಿಂದ 24 ವಾರಕ್ಕೆ ಏರಿಕೆ ಮಾಡಿದ ಕೇಂದ್ರ ಸರ್ಕಾರ

ಹೌದು, ಈ ಜಪದಿಂದಾಗಿ ಮಾತೆ ದುರ್ಗೆಯ ಶಕ್ತಿಯು ನೇರವಾಗಿ ಪ್ರಾರ್ಥಿಸುವವರ ಹೃದಯ ಪ್ರವೇಶಿಸುತ್ತದೆ. ಇದರ ಅನುಭೂತಿ ತಮಗಾಗಿದೆ ಎಂದು ನಟಿ ಸುಷ್ಮಿತಾ ಹೇಳಿಕೊಂಡಿದ್ದಾರೆ. ಸನಾತನ ಪರಂಪರೆಯಲ್ಲಿ ಇಂಥ ಸರಳ ಮಂತ್ರಗಳನ್ನು ನೀಡಿದ ಹಿರಿಯರಿಗೆ ನನ್ನ ಪ್ರಣಾಮಗಳು ಎಂದು ಕೂಡ ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪೋಸ್ಟ್‌ ಜತೆಯಲ್ಲಿ ತಮ್ಮ ಸುಂದರವಾದ ಮುಖದ ಸೆಲ್ಫಿಯೊಂದನ್ನು ನಟಿ ಸುಷ್ಮಿತಾ ಹಂಚಿಕೊಂಡಿದ್ದಾರೆ. ಪ್ರತಿ ವರ್ಷ ದುರ್ಗಾ ಪೂಜೆಯನ್ನು ಪೆಂಡಾಲ್‌ ರಚನೆ ಮೂಲಕ ಬಹಳ ಸಂಭ್ರಮದಿಂದ ಮಾಡುತ್ತಿದ್ದ ನಟಿ ಸುಷ್ಮಿತಾ ಅವರು, ಈ ಬಾರಿ ಕೋವಿಡ್‌-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸರಳವಾದ ಆಚರಣೆಗೆ ಮೊರೆ ಹೋಗಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ.

https://www.youtube.com/shorts/CjwjYT6ee4o

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...