alex Certify ನಡುರಸ್ತೆಯಲ್ಲೇ ಮಹಿಳೆಯನ್ನ ಪದೇ ಪದೇ ಇರಿದು ಕೊಂದ ಪಾಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಡುರಸ್ತೆಯಲ್ಲೇ ಮಹಿಳೆಯನ್ನ ಪದೇ ಪದೇ ಇರಿದು ಕೊಂದ ಪಾಪಿ

ಅದು ಹೈದರಾಬಾದ್‌ನ ಹಫೀಸ್ ಬಾಬಾ ಅನ್ನೊ ಜನನಿಬಿಡ ಪ್ರದೇಶ. ವಾಹನಗಳ ಗದ್ದಲ, ಜನರ ಓಡಾಟ ಅಗತ್ಯಕ್ಕಿಂತ ಹೆಚ್ಚಾಗಿ ಇರುವ ರಸ್ತೆ. ಅದೇ ಸಮಯದಲ್ಲಿ ಅಲ್ಲಿ ನಡೆದ ಭೀಕರ ಘಟನೆ ಜನರನ್ನ ಬೆಚ್ಚಿಬೀಳುವಂತೆ ಮಾಡಿತ್ತು. ವ್ಯಕ್ತಿಯೊಬ್ಬ ರಸ್ತೆ ದಾಡುತ್ತಿದ್ದ 48 ವರ್ಷದ ಮಹಿಳೆಯ ಮೇಲೆ ಹಿಂದಿನಿಂದ ಬಂದು ಚಾಕುವಿನಿಂದ ಹಲ್ಲೆ ಮಾಡಿರೋ ಘಟನೆ ಹಾಡಹಗಲೇ ನಡೆದಿದೆ.

ಈ ಘಟನೆ ಇಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹೀಗೆ ಹಲ್ಲೆ ನಡೆಸಿ ಕೊಂದು ಹಾಕಿದವರು ಮಹಿಳೆಯ ಪಕ್ಕದ ಮನೆಯವನೇ ಅಂತ ಹೇಳಲಾಗುತ್ತಿದೆ. ಹೀಗೆ ಅಮಾನುಷವಾಗಿ ದಾಳಿ ನಡೆಯುತ್ತಿದ್ದರೂ ಆಕೆಯ ಸಹಾಯಕ್ಕೆ ಯಾರೊಬ್ಬರೂ ಮುಂದೆ ಬಂದಿರಲಿಲ್ಲ.

ಈ ರಾಶಿಯವರಿಗೆ ಇದೆ ಇಂದು ಶುಭ ಸಮಯ

ಹಲ್ಲೆಗೊಳಗಾದ ಮಹಿಳೆ ಸೈಯದ್ ನೂರ್ ಬಾನು ಅಂತ ಗುರುತಿಸಲಾಗಿದೆ. ಚಿಕಿತ್ಸೆಗೆ ಸ್ಥಳೀಯ ಓವೈಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ವಿಧವೆ ಸೈಯದ್ ನೂರ್‌ಗೆ ಆ ವ್ಯಕ್ತಿ ಮುಂಚೆಯಿಂದಲೂ ಕಿರುಕುಳ ನೀಡುತ್ತಿದ್ದ ಅಂತ ಹೇಳಲಾಗಿದೆ. ಈ ಹಿಂದೆ ಆ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ಕೂಡಾ ನೀಡಲಾಗಿದೆ. ಆದರೆ ಕೆಲ ದಿನಗಳ ಹಿಂದೆ ಇಬ್ಬರ ನಡುವೆ ಏನೋ ವಾದ ವಿವಾದ ನಡೆದಿದೆ ಕೊನೆಗೆ ಅದು ಕೊಲೆಯಲ್ಲಿ ಅಂತ್ಯಗೊಂಡಿರಬಹುದು ಅಂತ ಕೇಸ್ ದಾಖಲಿಸಿಕೊಂಡ ಸ್ಥಳೀಯ ಪೊಲೀಸರು ಹೇಳಿಕೆ ಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...