alex Certify ಸರ್ಕಸ್​ ಷೋನಲ್ಲಿ ರಿಂಗ್​ ಮಾಸ್ಟರ್​ ಮೇಲೆ ಹುಲಿ ದಾಳಿ; ಶಾಕಿಂಗ್‌ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಸ್​ ಷೋನಲ್ಲಿ ರಿಂಗ್​ ಮಾಸ್ಟರ್​ ಮೇಲೆ ಹುಲಿ ದಾಳಿ; ಶಾಕಿಂಗ್‌ ವಿಡಿಯೋ ವೈರಲ್

ಸರ್ಕಸ್​ ಒಂದರ ಲೈವ್ ಷೋದಲ್ಲಿ ಸರ್ಕಸ್ ಕಲಾವಿದನ ಮೇಲೆ ಹುಲಿ ದಾಳಿ ಮಾಡುವ ಭಯಾನಕ ವಿಡಿಯೋ ವೈರಲ್​ ಆಗಿದೆ. ಇದು ಯಾವಾಗ ನಡೆದಿರುವುದು ಎಂಬ ಬಗ್ಗೆ ಉಲ್ಲೇಖವಿಲ್ಲ. ಆದರೆ ವಿಡಿಯೋ ನೋಡಿದರೆ ಎಂಥವರೂ ಬೆಚ್ಚಿಬೀಳುವಂತಿದೆ.

@earth.reel ಹೆಸರಿನ ಪುಟವು ಹಂಚಿಕೊಂಡ ಇನ್​ಸ್ಟಾಗ್ರಾಮ್​ ರೀಲ್‌ನಲ್ಲಿ ಈ ಭಯಾನಕ ವಿಡಿಯೋ ನೋಡಬಹುದು. ಎರಡು ಹುಲಿಗಳನ್ನು ರಿಂಗ್​ಮಾಸ್ಟರ್​ ತರಬೇತು ಕೊಡುತ್ತಿರುತ್ತಾನೆ. ಒಂದು ಹುಲಿ ಮೇಲೆ ನಿಂತಿರುತ್ತದೆ. ಆದರೆ ಕೆಳಗೆ ಇದ್ದ ಹುಲಿ ಸಿಟ್ಟಿನಿಂದ ರಿಂಗ್‌ಮಾಸ್ಟರ್ ಮೇಲೆ ಎರಗುತ್ತದೆ. ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ.

ಕೂಡಲೇ ಇನ್ನೊಬ್ಬ ರಿಂಗ್​ ಮಾಸ್ಟರ್​ ಅಲ್ಲಿಯೇ ಇರುವ ಟೇಬಲ್​ ಎತ್ತಿ ಹುಲಿಯನ್ನು ಹೊಡೆಯುವುದನ್ನು ನೋಡಬಹುದು. ಅಲ್ಲಿಗೆ ವಿಡಿಯೋ ಮುಗಿದಿದೆ. ನಂತರ ಏನಾಯಿತೋ ತಿಳಿದಿಲ್ಲ. ಈ ದೃಶ್ಯವು ಸರ್ಕಸ್​ ನಡೆಯುತ್ತಿರುವಾಗ ಜನರ ಸಮ್ಮುಖದಲ್ಲಿಯೇ ನಡೆದಿದ್ದು, ಜನರು ಕಿರುಚುವುದನ್ನು ನೋಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...