alex Certify ವಿಮಾನಕ್ಕೆ ಡಿಕ್ಕಿ ಹೊಡೆದು ಉರುಳಿದ ಹಕ್ಕಿ: ಕ್ಯಾಮೆರಾ ಕಣ್ಣಲ್ಲಿ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನಕ್ಕೆ ಡಿಕ್ಕಿ ಹೊಡೆದು ಉರುಳಿದ ಹಕ್ಕಿ: ಕ್ಯಾಮೆರಾ ಕಣ್ಣಲ್ಲಿ ದಾಖಲು

ಹಕ್ಕಿಯೊಂದು ವಿಮಾನಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಒದ್ದಾಡುವ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೈಲಟ್‌ನ ಕ್ಯಾಬಿನ್‌ನಿಂದ ಚಿತ್ರೀಕರಿಸಲಾಗಿದೆ ಈ ಚಿತ್ರಣ. ಪಕ್ಷಿಯು ವಿಮಾನಕ್ಕೆ ಡಿಕ್ಕಿ ಹೊಡೆದ ಕ್ಷಣವನ್ನು ಈ ಕ್ಯಾಮೆರಾದಲ್ಲಿ ನೋಡಬಹುದಾಗಿದೆ. ಹಳೆಯ ವಿಡಿಯೋ ಇದಾಗಿದ್ದು, ಮತ್ತೊಮ್ಮೆ ವೈರಲ್​ ಆಗಿದೆ.

ವಿಡಿಯೋದಲ್ಲಿ ಪೈಲಟ್ ವಿಮಾನದ ಲ್ಯಾಂಡಿಂಗ್ ಅನ್ನು ಘೋಷಿಸುವುದನ್ನು ನಾವು ಕೇಳಬಹುದು. ಪೈಲಟ್​ ವಿಮಾನವನ್ನು ಲ್ಯಾಂಡಿಂಗ್​ ಮಾಡುತ್ತಿರುವಾಗಲೇ ಒಂದು ಪಕ್ಷಿಯು ಮುಂಭಾಗದ ಪರದೆಗೆ ಬಂದು ಡಿಕ್ಕಿ ಹೊಡೆದಿದೆ. ಕೂಡಲೇ ರಕ್ತದಿಂದ ಚೆಲ್ಲಿದೆ. ಹೀಗಾಗಿ, ಪೈಲಟ್‌ ಸ್ವಲ್ಪ ನಿಧಾನವಾಗಿ ಲ್ಯಾಂಡಿಂಗ್​ ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು.

2021 ರಲ್ಲಿ, ತುಣುಕನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದು ನೋಡುಗರನ್ನು ದಿಗ್ಭ್ರಮೆಗೊಳಿಸುತ್ತದೆ. ಅಪರೂಪದ ಮತ್ತು ಗೊಂದಲದ ಕ್ಷಣಕ್ಕೆ ಸಾಕ್ಷಿಯಾಗುವ ಈ ದೃಶ್ಯ ನೋಡಿದರೆ ದಿಗಿಲಾಗುವುದು ಗ್ಯಾರೆಂಟಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...