alex Certify ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಈ ಹಾಸಿಗೆ ಮೇಲೆ ಮಲಗಿದ್ರೆ ಸಿಗಲಿದೆ 25 ಲಕ್ಷ ರೂ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಈ ಹಾಸಿಗೆ ಮೇಲೆ ಮಲಗಿದ್ರೆ ಸಿಗಲಿದೆ 25 ಲಕ್ಷ ರೂ….!

ಕೆಲಸ ಹುಡುಕ್ತಿರುವ ಜನರಿಗೆ ಇಲ್ಲೊಂದು ಮಹತ್ವದ ಸುದ್ದಿಯಿದೆ. ಹಾಸಿಗೆ ಮೇಲೆ ಮಲಗಿದ್ರೆ ಕಂಪನಿಯೊಂದು ನಿಮಗೆ ಸಂಬಳ ನೀಡುತ್ತದೆ. ಬ್ರಿಟನ್ ಕಂಪನಿಯೊಂದು ಜಾಬ್ ಆಫರ್ ಮಾಡ್ತಿದೆ. ಕೆಲಸ ಪಡೆದ ನೌಕರರು, ಹಾಸಿಗೆ ಮೇಲೆ ಮಲಗಬೇಕು. ಕ್ರಾಫ್ಟೆಡ್ ಬೆಡ್ ಹೆಸರಿನ ಕಂಪನಿ ಈ ಕೆಲಸ ನೀಡ್ತಿದೆ.

ಕಂಪನಿ ಹಾಸಿಗೆ ಪರೀಕ್ಷಕ ಹುದ್ದೆಗೆ ನೇಮಕಾತಿ ಮಾಡಿಕೊಳ್ತಿದೆ. ಇಲ್ಲಿ ಕೆಲಸ ಪಡೆದ ವ್ಯಕ್ತಿ 6-7 ಗಂಟೆ ಹಾಸಿಗೆ ಮೇಲೆ ಮಲಗಬೇಕು. ಹಾಸಿಗೆ ಗುಣಮಟ್ಟದ ಬಗ್ಗೆ ಕಂಪನಿಗೆ ಮಾಹಿತಿ ನೀಡಬೇಕು. ವರ್ಷಕ್ಕೆ ಕಂಪನಿ 24 ಲಕ್ಷದ 79 ಸಾವಿರ ರೂಪಾಯಿ ನೀಡಲಿದೆ. ಹಾಸಿಗೆ ಸುಧಾರಣೆ, ನ್ಯೂನತೆಗಳು ಸೇರಿದಂತೆ ಅನೇಕ ವಿಷ್ಯಗಳನ್ನು ವರದಿ ಮಾಡಬೇಕಾಗುತ್ತದೆ.

ಬಾಲ್ಯದಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳ ಕುರಿತು ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ಹಿರಿಯ ನಟಿ

ವಾರದಲ್ಲಿ 37.5 ಗಂಟೆಗಳು ಅಂದರೆ ದಿನದಲ್ಲಿ 6 ಗಂಟೆ ಹಾಸಿಗೆ ಮೇಲಿರಬೇಕು. ವಿಶೇಷವೆಂದ್ರೆ ಈ ನೌಕರಿ ಪಡೆದ ವ್ಯಕ್ತಿ ಕಚೇರಿಗೆ ಹೋಗಬೇಕಾಗಿಲ್ಲ. ಬೆಡ್ ಮನೆಗೆ ಬರುತ್ತದೆ. ಆದ್ರೆ ಬೇಸರದ ಸಂಗತಿಯೂ ಇದೆ. ಈ ಕೆಲಸವನ್ನು ಬೇರೆ ಯಾವುದೇ ನಾಗರಿಕರಿಗೆ ನೀಡಲಾಗುವುದಿಲ್ಲ. ಬ್ರಿಟಿಷ್ ನಾಗರಿಕರಿಗೆ ಮಾತ್ರ ಈ ಕೆಲಸ ನೀಡಲಾಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...