alex Certify ಒಮಿಕ್ರಾನ್ ರೂಪಾಂತರ ಕುರಿತು ಬೇಡ ನಿರ್ಲಕ್ಷ್ಯ….! ಯುಎಸ್ ವಿಜ್ಞಾನಿಗಳ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಮಿಕ್ರಾನ್ ರೂಪಾಂತರ ಕುರಿತು ಬೇಡ ನಿರ್ಲಕ್ಷ್ಯ….! ಯುಎಸ್ ವಿಜ್ಞಾನಿಗಳ ಎಚ್ಚರಿಕೆ

ಒಮಿಕ್ರಾನ್ ರೂಪಾಂತರದ ಸೋಂಕಿನ “ಸೌಮ್ಯ” ಫಲಿತಾಂಶ ವೈರಸ್ ಗುಣ ಲಕ್ಷಣಗಳಿಗಿಂತ, ಹೆಚ್ಚಿನ ಜನಸಂಖ್ಯೆಯಲ್ಲಿರುವ ಪ್ರತಿರಕ್ಷೆಯ ಕಾರಣದಿಂದಾಗಿರಬಹುದು ಎಂದು ಯುಎಸ್ ನ ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ‌.

ಒಮಿಕ್ರಾನ್ ರೂಪಾಂತರವನ್ನು ಮೊದಲು 2021ರ, ನವೆಂಬರ್ ತಿಂಗಳ ಕೊನೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಡಿಟೆಕ್ಟ್ ಮಾಡಲಾಯಿತು. ಈ ಮೊದಲು ಸೃಷ್ಟಿಯಾದ ರೂಪಾಂತರಗಳಿಗೆ ಹೋಲಿಸಿದರೆ, ಒಮಿಕ್ರಾನ್ ಗಮನಾರ್ಹವಾಗಿ ಕಡಿಮೆ ಪರಿಣಾಮ ಬೀರಿದೆ. ಅಂದರೆ ಆಸ್ಪತ್ರೆಗೆ ಸೇರುವವರ ಸಂಖ್ಯೆ ಮತ್ತು ಸಾವಿನ ದರಗಳು ಈ ರೂಪಾಂತರದಲ್ಲಿ ಕಡಿಮೆ ದಾಖಲಾಗಿವೆ. ಇದರಿಂದ ಈ ರೂಪಾಂತರವು ಕಡಿಮೆ ಮಟ್ಟದ ಫಲಿತಾಂಶಗಳನ್ನು ಉಂಟುಮಾಡುತ್ತದೆ ಎಂದು ಕೆಲವರು ತೀರ್ಮಾನಿಸಿದ್ದಾರೆ.

ಯಾವಾಗಲೂ ಕೆಲಸ ಕೆಲಸ ಎನ್ನುವ ಅಪ್ಪನ ಮೇಲೆ ಅಳುತ್ತಲೇ ಪ್ರೀತಿ ತೋರಿದ ಪುಟ್ಟ ಪೋರಿ…! ಮುದ್ದಾದ ವಿಡಿಯೋ ವೈರಲ್

ಒಮಿಕ್ರಾನ್ ಸೋಂಕುಗಳ ಕಡಿಮೆ ತೀವ್ರತೆಯು ಸೋಂಕಿತ ಜನರಲ್ಲಿನ ರೋಗ ನಿರೋಧಕ ಶಕ್ತಿಯ ಮಟ್ಟಕ್ಕೆ ಸಂಬಂಧಿಸಿದ ಅಂಶಗಳಿಂದಾಗಿ ಕಂಡುಬರುತ್ತದೆ. 2021 ರಲ್ಲಿ, ದಕ್ಷಿಣ ಆಫ್ರಿಕಾದ ಒಟ್ಟು ಜನಸಂಖ್ಯೆಯ ಬಹುಪಾಲು ಜನರು ಲಸಿಕೆ ಪಡೆದುಕೊಂಡಿದ್ದರು. ಬಹುಶಃ ಸಾಂಕ್ರಾಮಿಕ ರೋಗದ ಹಿಂದಿನ ಅಲೆಗಳ ಸಮಯದಲ್ಲಿ ಮತ್ತೊಂದು ರೂಪಾಂತರದ ಸೋಂಕಿಗೆ ಒಳಗಾಗಿದ್ದರು. ಒಮಿಕ್ರಾನ್ ನ ಕಡಿಮೆ ತೀವ್ರತೆ ಅದರ ಮೂಲ ಲಕ್ಷಣವಲ್ಲ, ಇದು ಸೋಂಕಿತ ಜನರ ರೋಗನಿರೋಧಕ ಶಕ್ತಿಯ ಮಟ್ಟದ ಮೇಲೆ ನಿರ್ಧಾರವಾಗಬಹುದೆಂದು, ಯುಎಸ್‌ ನ ಮ್ಯಾಸಚೂಸೆಟ್ಸ್ ಜನರಲ್ ಹಾಸ್ಪಿಟಲ್ ಮತ್ತು ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ಸಂಶೋಧಕರು, ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ದೃಷ್ಟಿಕೋನ ಲೇಖನದಲ್ಲಿ ತಿಳಿಸಿದ್ದಾರೆ.

ಸೋಂಕಿನ ವಿರುದ್ಧ ಹೋರಾಡಲು ಉತ್ತಮವಾಗಿ ಸಜ್ಜುಗೊಂಡಿರುವ ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿರುವ ಜನರಿಂದಲೆ ಒಮಿಕ್ರಾನ್ ಗುಣಲಕ್ಷಣಗಳು ಸೌಮ್ಯವಾಗಿ ಕಾಣಿಸುತ್ತಿರುವುದೆಂದು ಅವರು ವಾದಿಸಿದ್ದಾರೆ. ಸಂಶೋಧಕರ ಪ್ರಕಾರ, ದಕ್ಷಿಣ ಆಫ್ರಿಕಾದ ಪರಿಸ್ಥಿತಿಯು ಇತರ ದೇಶಗಳಿಗಿಂತ ಆಂತರಿಕವಾಗಿ ವಿಭಿನ್ನವಾಗಿದೆ. ಯುವಜನತೆಯೆ ಹೆಚ್ಚಿರುವ, ಭಾಗಶಃ ಲಸಿಕೆ ಪಡೆದಿರುವ ದೇಶದಲ್ಲಿ ಹುಟ್ಟಿರುವ ಸೋಂಕಿನ ಗುಣಲಕ್ಷಣಗಳು ಮೊದಲು ಸೌಮ್ಯವಾಗಿವೆ. ಆದರೆ ಬೇರೆ ದೇಶದಲ್ಲಿ ಪರಿಸ್ಥಿತಿ ಬದಲಾಗಬಹುದು. ಒಟ್ನಲ್ಲಿ, ಒಮಿಕ್ರಾನ್ ಮೂಲವಾಗಿ ಸೌಮ್ಯ ಸ್ವಭಾವದ ಸೋಂಕಲ್ಲ ಎಂಬುದು ಸಂಶೋಧಕರ ವಾದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...