alex Certify ಮರದ ಬೋರ್ಡ್‌ ಪೀಸ್‌ ಮಾಡಿದ ಕರಾಟೆ ಪಟು: ಬಾಲಕಿಯ ಮುಖ ಭಾವನೆಗೆ ಮನ ಸೋತ ನೆಟ್ಟಿಗರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರದ ಬೋರ್ಡ್‌ ಪೀಸ್‌ ಮಾಡಿದ ಕರಾಟೆ ಪಟು: ಬಾಲಕಿಯ ಮುಖ ಭಾವನೆಗೆ ಮನ ಸೋತ ನೆಟ್ಟಿಗರು….!

ಅಮೆರಿಕದ ಉಟ್ಹಾದಲ್ಲಿನ ಫಾರ್ಮಿಂಗ್ಟನ್‌ನಲ್ಲಿ ಪುಟ್ಟ ಬಾಲಕಿಯು ಕರಾಟೆ ತರಗತಿಗೆ ತೆರಳಿದ್ದಾಳೆ. ಅಲ್ಲಿ, ತರಬೇತುದಾರರು ಕೈನಲ್ಲಿಮರದ ಬೋರ್ಡ್‌ ಹಿಡಿದುಕೊಂಡು ಬಾಲಕಿಗೆ ಪೀಸ್‌ ಮಾಡು ಎಂದು ಆಜ್ಞೆ ಕೊಟ್ಟಿದ್ದಾರೆ. ಪಾಪ, ಬಾಲಕಿ ಹಿಂಜರಿಕೆಯಿಂದಲೇ ಕೈಗಳನ್ನು ಎತ್ತಿಕೊಂಡು ಬೋರ್ಡ್‌ಗೆ ಗುದ್ದಿದ್ದಾಳೆ. ಆಕೆಗೇ ಮಹಾನ್‌ ಅಚ್ಚರಿ ಎಂಬಂತೆ ಬೋರ್ಡ್‌ ಎರಡು ತುಂಡಾಗಿದೆ.

ಆಗ ಬಾಲಕಿಯ ಮುಖದ ಅಚ್ಚರಿಯ ಭಾವವು ಎಲ್ಲರನ್ನೂ ಫಿದಾ ಆಗಿಸಿದೆ.

ಜೀವನದಲ್ಲೇ ಮೊದಲ ಬಾರಿ ಪಿಜ್ಜಾಗೆ ಬಾಯಿ ಹಾಕಿದ ಈ ಅಜ್ಜಿಯ ಮುಖಭಾವ ನೀವು ನೋಡ್ಲೇಬೇಕು….!

ಕರಾಟೆ ಡ್ರೆಸ್‌ ತೊಟ್ಟು, ಆಕರ್ಷಕ ಎಕ್ಸ್‌ಪ್ರೆಷನ್‌ ಕೊಟ್ಟಿರುವುದು ಎವಿಲಿನ್‌. ಇನ್‌ಸ್ಟಾಗ್ರಾಂನಲ್ಲಿ ‘ಡಿಯರ್‌ಡೊರನ್ಸ್‌’ ಎಂಬ ಖಾತೆಯಲ್ಲಿ ಈ ಮುದ್ದಾದ ವಿಡಿಯೊ ಪೋಸ್ಟ್‌ ಮಾಡಲಾಗಿದೆ. ಟೊಬಿನ್ಸ್‌ ಎಲೈಟ್‌ ಅಕಾಡೆಮಿ ಆಫ್‌ ಮಾರ್ಷಿಯಲ್‌ ಆರ್ಟ್ಸ್ ಟೀಮ್‌ನಿಂದ ವಿಡಿಯೊ ಪೋಸ್ಟ್‌ ಮಾಡಲಾಗಿದೆ.

ಎವಿಲಿನ್‌ ಸಾಹಸಕ್ಕೆ ಆಕೆಯ ಸಹಪಾಠಿಗಳು, ಪೋಷಕರು, ತರಬೇತುದಾರರು ಖುಷಿಯಿಂದ ಚಪ್ಪಾಳೆ ತಟ್ಟುತ್ತಾ ಮೆಚ್ಚುಗೆ ಸೂಚಿಸಿದ್ದಾರೆ. ಮುಗ್ಧ ಬಾಲಕಿ ಎವಿಲಿನ್‌ ಮುಖಭಾವವು ತಮಗೆ ಆನಂದಬಾಷ್ಪ ಬರುವಂತೆ ಮಾಡುತ್ತಿದೆ ಎಂದು ಹಲವು ಇನ್‌ಸ್ಟಾಗ್ರಾಂ ಬಳಕೆದಾರರು ಕಮೆಂಟ್‌ ಮಾಡಿದ್ದಾರೆ.

https://www.instagram.com/reel/CVhHmCBju1h/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...