alex Certify ‘ಮೇಕಪ್’ ಮೂಲಕ ವಯಸ್ಸು ಮರೆಮಾಚಿ ಮತ್ತೊಂದು ಮದುವೆಯಾದ 54 ವರ್ಷದ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮೇಕಪ್’ ಮೂಲಕ ವಯಸ್ಸು ಮರೆಮಾಚಿ ಮತ್ತೊಂದು ಮದುವೆಯಾದ 54 ವರ್ಷದ ಮಹಿಳೆ…!

ಈಗಾಗಲೇ ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿದ್ದ ಮಹಿಳೆಯೊಬ್ಬರು ಮತ್ತೊಂದು ಮದುವೆಯಾಗುವ ಸಲುವಾಗಿ ಚಿಕ್ಕ ಹುಡುಗಿಯಂತೆ ಕಾಣಲು ಮೇಕಪ್ ಮಾಡಿಕೊಂಡು 30 ವರ್ಷವೆಂದು ಸುಳ್ಳು ಹೇಳಿ ಮದುವೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ತಮಿಳುನಾಡಿನಲ್ಲಿ ಈ ಘಟನೆ ನಡೆದಿದ್ದು 35 ವರ್ಷದ ವಿಚ್ಛೇದಿತ ವ್ಯಕ್ತಿಯೊಬ್ಬರು ಮರು ವಿವಾಹಕ್ಕೆ ವಧುವಿನ ತಲಾಷೆಯಲ್ಲಿದ್ದರು. ಇದಕ್ಕಾಗಿ ಮ್ಯಾಟ್ರಿಮೊನಿ ಸೈಟ್ ನಲ್ಲಿ ವಿವರ ಹಾಕಿದ್ದರು ಎಂದು ಹೇಳಲಾಗಿದೆ.

ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ತಿರುಪತಿಯ ಶರಣ್ಯಾ ಎಂಬಾಕೆ ತನಗೆ 30 ವರ್ಷವೆಂದು ಹೇಳಿ ಫೋಟೋ ಕಳಿಸಿದ್ದಾಳೆ. ಇದನ್ನು ನಂಬಿದ ವಿಚ್ಛೇದಿತ ವ್ಯಕ್ತಿ ಆಕೆಯನ್ನು ವಿವಾಹವಾಗಿದ್ದು, ಆ ಬಳಿಕ ಆಧಾರ್ ಪರಿಶೀಲಿಸಿದಾಗ ಸತ್ಯಾಂಶ ಬಹಿರಂಗವಾಗಿದೆ.

ಅಲ್ಲದೆ ಮತ್ತಷ್ಟು ಮಾಹಿತಿ ಕಲೆ ಹಾಕಿದಾಗ ಶರಣ್ಯಾಳ ಇಬ್ಬರು ಹೆಣ್ಣು ಮಕ್ಕಳಿಗೂ ಸಹ ಈಗಾಗಲೇ ಮದುವೆಯಾಗಿದೆ ಎಂಬ ಸಂಗತಿ ತಿಳಿದು ಬಂದಿದೆ. ಗಂಡನೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ ಶರಣ್ಯಾ ಸುಂದರವಾಗಿ ಮೇಕಪ್ ಮಾಡಿಕೊಂಡು ವಯಸ್ಸನ್ನು ಮರೆಮಾಚಿ ಮತ್ತೊಂದು ಮದುವೆಯಾಗಿದ್ದು, ಮದುವೆಯಾಗಿರುವ ವಿಚ್ಛೇದಿತ ಇದೀಗ ಕಂಗಾಲಾಗಿ ಕುಳಿತಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...