
ಜಗತ್ತಿನಲ್ಲಿ ಕರುಣೆ ಹಾಗೂ ಅಂತಃಕರಣದ ಮೌಲ್ಯಗಳನ್ನು ಪಸರುವಂತೆ ಮಾಡಲು ವನ್ಯಜೀವಿಗಳಿಂದ ನಾವು ಸ್ಪೂರ್ತಿ ಪಡೆಯಬೇಕೆಂದು ಬಹಳಷ್ಟು ಸಹೃದಯಿಗಳು ಹೇಳುತ್ತಲೇ ಇರುತ್ತಾರೆ.
ಇದಕ್ಕೆ ಪರ್ಫೆಕ್ಟ್ ಉದಾಹರಣೆಯಾಗಿ, ಚಿಂಪಾಂಜಿಯೊಂದು ತನ್ನ ಜೀವ ಉಳಿಸಿದ ತಜ್ಞರೊಬ್ಬರನ್ನು ಕಂಡ ಕೂಡಲೇ ಅವರನ್ನು ಅಪ್ಪಿ ಮುದ್ದಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಸೈಬಿರಿಯಾದಲ್ಲಿ ರಷ್ಯಾದ ಪ್ರಯಾಣಿಕ ವಿಮಾನ ಕಣ್ಮರೆ..!
ಜೇನ್ ಗುಡಾಲ್ ಸಂಸ್ಥೆಯ ಸ್ಥಾಪಕಿ ತಮ್ಮ ಜೀವನವನ್ನೇ ವನ್ಯಜೀವಿಗಳ ಸಂರಕ್ಷಣೆಗೆ ಮುಡಿಪಾಗಿಟ್ಟಿದ್ದಾರೆ. ವನ್ಯ ಚಿಂಪಾಜಿಗಳ ಬಗ್ಗೆ ಭಾರೀ ಆಸಕ್ತಿ ಹೊಂದಿರುವ ಗುಡಾಲ್ ತಮ್ಮ ಜೀವಿತದ 60 ವಸಂತಗಳನ್ನು ಅವುಗಳ ಅಧ್ಯಯನಕ್ಕೇ ಮುಡಿಪಾಗಿಟ್ಟಿದ್ದಾರೆ.
ಅವರ ಈ ವಿಡಿಯೋವೊಂದನ್ನು ಶೇರ್ ಮಾಡಿಕೊಂಡ ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಧಾ ರಾಮನ್, “ಪ್ರೀತಿಗೆ ಇತಿಮಿತಿಗಳಿಲ್ಲ. ತನ್ನನ್ನು ರಕ್ಷಿಸಿದ ವ್ಯಕ್ತಿಯತ್ತ ಈ ಚಿಂಪಾಂಜಿಯ ನಿಷ್ಕಲ್ಮಶ ಪ್ರೀತಿಯನ್ನು ನೋಡಿ. ಮರಳಿ ಕಾಡಿಗೆ ಹೋಗುವ ಮುನ್ನ ತನ್ನ ಧನ್ಯವಾದಗಳನ್ನು ಡಾ. ಜೇನ್ ಗುಡಾಲ್ ಹಾಗೂ ತಂಡಕ್ಕೆ ಸಲ್ಲಿಸುತ್ತಿದೆ” ಎಂದು ತಿಳಿಸಿದ್ದಾರೆ.