alex Certify ಓಲಾ ಗ್ರಾಹಕರಿಗೆ ಅಪ್ಡೇಟೆಡ್ ಮೂವ್ ಒಸ್ 2 ಒಟಿಎ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓಲಾ ಗ್ರಾಹಕರಿಗೆ ಅಪ್ಡೇಟೆಡ್ ಮೂವ್ ಒಸ್ 2 ಒಟಿಎ

ಎಲೆಕ್ಟ್ರಿಕ್ ವೆಹಿಕಲ್ ಕ್ಷೇತ್ರದಲ್ಲಿ ಸಂಚಲನ‌ ಮೂಡಿಸುತ್ತಿರುವ ಓಲಾ, ಮೂವ್ ಒಎಸ್ 2 ಸಾಫ್ಟ್‌ವೇರ್‌ನೊಂದಿಗೆ Ola S1 Pro ಎಲೆಕ್ಟ್ರಿಕ್ ಸ್ಕೂಟರ್‌ನ್ನು ಅಪ್ಡೇಟ್ ಮಾಡಿದೆ‌

ಇದು ಸಾಮರ್ಥ್ಯ ವೃದ್ಧಿಸಿದ್ದು, ಈ ಹಿಂದಿನ‌ ಅನೇಕ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿದೆ. ರೇಂಜ್ ಡ್ರಾಪ್, ಬ್ಯಾಟರಿ ಡಿಸ್ಚಾರ್ಜ್‌ನಂತಹ ಸಮಸ್ಯೆಗಳಿಗೂ ಪರಿಹಾರ ನೀಡುತ್ತಿದೆ.

ಓಲಾ ಎಲೆಕ್ಟ್ರಿಕ್ ಕಂಪನಿಯ ಅಪ್ಲಿಕೇಶನ್ ಮೂಲಕ ದೂರದಿಂದಲೇ ಲಾಕ್ ಓಪನ್ ಮತ್ತು ಲಾಕ್ ಮಾಡಲು ಸಾಧ್ಯವಾಗುತ್ತದೆ. ಎಲ್ಲಾ ಮೋಡ್‌‌ಗಳಲ್ಲಿ ರೇಂಜ್ ಲೆಕ್ಕಾಚಾರ, ಚಾರ್ಜ್ ಸ್ಥಿತಿ ಮುಂತಾದ ಅರಿಯಲು ಸಾಧ್ಯವಾಗಲಿದೆ.

ಇತ್ತೀಚಿನ ಸಾಫ್ಟ್‌ವೇರ್ ನವೀಕರಣವು ಮ್ಯೂಸಿಕ್ ಪ್ಲೇಬ್ಯಾಕ್ ಎಂಬ ವೈಶಿಷ್ಟ್ಯವನ್ನು ತಂದಿದೆ. ಈ‌ ಮೂಲಕ ಬಳಕೆದಾರರು ಎಲೆಕ್ಟ್ರಿಕ್ ಸ್ಕೂಟರ್ ಬ್ಲೂಟೂತ್ ಮೂಲಕ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಇವಿಯೊಂದಿಗೆ ಜೋಡಿಸಲು ಮತ್ತು ಸಂಗೀತವನ್ನು ಆನಂದಿಸಲು ಸಾಧ್ಯವಾಗಲಿದೆ.

ಓಲಾ ಎಸ್ ಒನ್ ಪ್ರೋ ಬಳಕೆದಾರರಿಗೆ ಹೊಸ ಕ್ರೂಸ್ ನಿಯಂತ್ರಣ ವೈಶಿಷ್ಟ್ಯ ಸಹ ಪರಿಚಯಿಸಲಾಗಿದೆ. ಇದು ಟ್ರಾಫಿಕ್ ಮುಕ್ತ ರಸ್ತೆಗಳಲ್ಲಿ 20 ಕಿಮೀನಿಂದ 80 ಕಿಮೀ ಸ್ಥಿರವಾದ ವೇಗವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.

ಹೊಸ ಒಟಿಎ ಸಾಫ್ಟ್‌ವೇರ್ ಉತ್ತಮ ನ್ಯಾವಿಗೇಷನ್ ಸಪೋರ್ಟ್ ನೀಡುತ್ತದೆ. ಇದು ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಸಪೋರ್ಟ್ ಸಕ್ರಿಯಗೊಳಿಸಲು ಮತ್ತು ಎಲೆಕ್ಟ್ರಿಕ್ ವಾಹನದ ಲೈವ್ ಮಾರ್ಗ ನಕ್ಷೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಹೀಗಾಗಿ ಸವಾರರು ತಾವು ತಲುಪಬೇಕಾದ ಸ್ಥಳವನ್ನು ಶೀಘ್ರವಾಗಿ ತಲುಪಲು ಸಹಾಯ ಮಾಡಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...