alex Certify ಬೆಳ್ಳಂಬೆಳಗ್ಗೆ ಓಲಾ ಕಚೇರಿಯ ದೃಶ್ಯ ಶೇರ್​ ಮಾಡಿದ ಸಿಇಒ: ನಕ್ಕೂ ನಕ್ಕೂ ಸುಸ್ತಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳ್ಳಂಬೆಳಗ್ಗೆ ಓಲಾ ಕಚೇರಿಯ ದೃಶ್ಯ ಶೇರ್​ ಮಾಡಿದ ಸಿಇಒ: ನಕ್ಕೂ ನಕ್ಕೂ ಸುಸ್ತಾದ ನೆಟ್ಟಿಗರು

ಓಲಾ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಅವರು ಬೆಳಿಗ್ಗೆ ತಮ್ಮ ಕಚೇರಿ ಹೇಗೆ ಇರುತ್ತದೆ ಎಂಬ ಬಗ್ಗೆ ಫೋಟೋ ಒಂದನ್ನು ಟ್ವಿಟ್​ರ್​ನಲ್ಲಿ ಶೇರ್​ ಮಾಡಿದ್ದು, ಇದೀಗ ಸಕತ್​ ವೈರಲ್​ ಆಗಿದೆ.

ತಮ್ಮ ಕಚೇರಿ ಬೆಳ್ಳಂಬೆಳಗ್ಗೆ ಯಾವುದಕ್ಕೆ ಸಾಕ್ಷಿಯಾಗುತ್ತದೆ ಎನ್ನುವ ಇಣುಕು ನೋಟ ಇದು ಎಂದು ಬರೆದು ಅದನ್ನು ಶೇರ್​ ಮಾಡಿದ್ದಾರೆ. ಚಿತ್ರದಲ್ಲಿ ಮೂರು ನಾಯಿಗಳು ಓಲಾ ಕಚೇರಿಯಲ್ಲಿ ಸೋಫಾಗಳ ಮೇಲೆ ಮಲಗಿರುವುದನ್ನು ಮತ್ತು ವಿಶ್ರಾಂತಿ ಪಡೆಯುವುದನ್ನು ನೋಡಬಹುದಾಗಿದೆ.

‘ಓಲಾ ಕಚೇರಿಯಲ್ಲಿ ಬೆಳಿಗ್ಗೆ’ ಎಂದು ಅವರು ಶೀರ್ಷಿಕೆ ನೀಡಿದ್ದಾರೆ. ಇದಕ್ಕೆ ತಮಾಷೆಯ ಕಮೆಂಟ್ಸ್​ಗಳ ಸುರಿಮಳೆಯಾಗಿದೆ. ಹಲವಾರು ಬಳಕೆದಾರರು ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ” ನಾವು ಹೆಚ್ಚು ಹೆಚ್ಚು ಸಾಕುಪ್ರಾಣಿಗಳ ಜೊತೆ ಸ್ನೇಹ ಮಾಡಬೇಕು. ಅವುಗಳನ್ನೂ ಅಪಾಯಿಂಟ್​ ಮಾಡಿಕೊಳ್ಳಬೇಕು ಎಂದು ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...