ಶಾಲೆಯಿಂದ ಮನೆಗೆ ಮರಳಿದ ತನ್ನ ಒಡಹುಟ್ಟಿದವರನ್ನು ಬರಮಾಡಿಕೊಳ್ಳಲು ಪುಟಾಣಿ ಪುಟ್ಟಿಯೊಬ್ಬಳು ಓಡೋಡಿ ಹೋಗುತ್ತಿರುವ ಮುದ್ದು ಕ್ಷಣಗಳ ವಿಡಿಯೋವೊಂದು ನೆಟ್ಟಿಗರನ್ನು ಫುಲ್ ಫಿದಾ ಮಾಡಿಬಿಟ್ಟಿದೆ.
ಬ್ರಿಟ್ಟಾನಿ ಹೆಸರಿನ ಮಹಿಳೆಯೊಬ್ಬರು ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
BIG NEWS: ವಿಧಾನಸೌಧದ ಸುತ್ತ 2 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ
ಇನ್ನೂ ಆಗ ತಾನೇ ನಡೆಯಲು ಕಲಿಯುತ್ತಿರುವ ಈ ಪುಟ್ಟಿ ತನ್ನ ಮನೆ ಎದುರಿನ ಫುಟ್ಪಾತ್ ಮೇಲೆ ಓಡೋಡಿ ಮತ್ತೊಂದು ಬದಿಯಿಂದ ಬರುತ್ತಿರುವ ತನ್ನ ಅಣ್ಣಂದಿರನ್ನು ಬರಮಾಡಿಕೊಳ್ಳುವುದನ್ನು ನೋಡುವುದೇ ದೊಡ್ಡ ಆನಂದ.
ಮುದ್ದು ತಂಗಿ ತಮ್ಮತ್ತ ಬರುತ್ತಲೇ ಆಕೆಯನ್ನು ಅಣ್ಣಂದಿರು ಬರಮಾಡಿ ಅಪ್ಪಿಕೊಳ್ಳುವ ಈ ವಿಡಿಯೋಗೆ ನೆಟ್ಟಿಗರಿಂದ ಭಾರೀ ಪ್ರಶಂಸೆ ಸಿಕ್ಕಿದೆ.
https://youtu.be/Atwshn2slew