alex Certify ನೋಡನೋಡುತ್ತಿದ್ದಂತೆ ರೈಲು ಹಳಿ ಮೇಲೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರೈಲ್ವೆ ಇನ್ಸ್ ಪೆಕ್ಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡನೋಡುತ್ತಿದ್ದಂತೆ ರೈಲು ಹಳಿ ಮೇಲೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರೈಲ್ವೆ ಇನ್ಸ್ ಪೆಕ್ಟರ್

ಮುಂಬೈನಲ್ಲಿ ಮುಖ್ಯ ಲೋಕೋ ಇನ್ಸ್ ಪೆಕ್ಟರ್ ಒಬ್ಬರು ರೈಲು ಬರ್ತಿದ್ದಂತೆ ಹಳಿ ಮೇಲೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಇನ್ಸ್ ಪೆಕ್ಟರ್ ಸ್ಥಳೀಯ ರೈಲು ಬರುವಿಕೆಗಾಗಿ ಕಾಯುತ್ತಿರುವುದನ್ನು ತೋರಿಸಿದೆ.

ಪ್ಲಾಟ್‌ಫಾರ್ಮ್‌ನಲ್ಲಿದ್ದ ಇತರ ಪ್ರಯಾಣಿಕರು ಭಯಭೀತರಾಗಿ ನೋಡುತ್ತಿರುವಾಗ ಇನ್ಸ್ ಪೆಕ್ಟರ್ ರೈಲು ಸಮೀಪಿಸುತ್ತಿದ್ದಂತೆ ಹಳಿ ಮೇಲೆ ಹಾರಿದರು. ಈ ಸಂಬಂಧ ಜಿಆರ್‌ಪಿ ವ್ಯಾಪ್ತಿಯ ವಿಲೇಪಾರ್ಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ಸ್ ಪೆಕ್ಟರ್‌ ಆತ್ಮಹತ್ಯೆ ನಿರ್ಧಾರ ಕೆಲಸದ ಒತ್ತಡಕ್ಕೆ ಸಂಬಂಧಿಸಿದ್ದಲ್ಲ ಎಂದು ಪಶ್ಚಿಮ ರೈಲ್ವೆಯ PRO ಹೇಳಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

ಈ ವಿಡಿಯೋ ನೋಡುಗರನ್ನು ಬೆಚ್ಚಿಬೀಳಿಸುವಂತಿರುವ ಕಾರಣ ಇದನ್ನು ಹಾಕಲಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...