alex Certify ಮುತ್ತಿಡಲು ವಿರೋಧಿಸಿದ ವೃದ್ಧೆ ಮೇಲೆ ಹುಡುಗಿಯರಿಂದ ಹಲ್ಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುತ್ತಿಡಲು ವಿರೋಧಿಸಿದ ವೃದ್ಧೆ ಮೇಲೆ ಹುಡುಗಿಯರಿಂದ ಹಲ್ಲೆ

ಮಹಾರಾಷ್ಟ್ರದ ಪುಣೆಯಲ್ಲಿ ಆಶ್ಚರ್ಯಕರ ಘಟನೆ ನಡೆದಿದೆ. 64 ವರ್ಷದ ವೃದ್ಧೆ ಮೇಲೆ ನಾಲ್ವರು ಹಲ್ಲೆ ನಡೆಸಿದ್ದಾರೆ. ಪರಸ್ಪರ ಚುಂಬಿಸಲು ಮುಂದಾಗಿದ್ದ ಹುಡುಗಿಯರನ್ನು ತಡೆದ ಕಾರಣ ವೃದ್ಧೆ ಮೇಲೆ ಹಲ್ಲೆ ನಡೆದಿದೆ. ಘಟನೆ ಡಿ-ಅಡಿಕ್ಷನ್ ಸೆಂಟರ್ ನಲ್ಲಿ ನಡೆದಿದೆ.

ವರದಿ ಪ್ರಕಾರ, ಈ ಘಟನೆ ಕೃಪಾ ಫೌಂಡೇಶನ್ ಡಿ-ಅಡಿಕ್ಷನ್ ಸೆಂಟರ್ ನಲ್ಲಿ ನಡೆದಿದೆ. ವೃದ್ಧೆ ಡಿ-ಅಡಿಕ್ಷನ್ ಸೆಂಟರ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಸೆಂಟರ್ ನಲ್ಲಿದ್ದ ಇಬ್ಬರು ಹುಡುಗಿಯರು ಪರಸ್ಪರ ಮುತ್ತಿಡಲು ಮುಂದಾಗಿದ್ದರು. ಇದನ್ನು ನೋಡಿದ ವೃದ್ಧೆ ತಡೆದಿದ್ದಾಳೆ. ಇದ್ರಿಂದ ಕೋಪಗೊಂಡ ಹುಡುಗಿಯರು ವೃದ್ಧೆ ಮೇಲೆ ದಾಳಿ ನಡೆಸಿದ್ದಾರೆ. ಮಹಿಳೆ ಹಲ್ಲು ಮುರಿದಿರುವ ಹುಡುಗಿಯರ ಈ ಕೆಲಸ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಲ್ಲೆ ನಂತ್ರ ಮುಂಬೈಗೆ ಹೋಗಿ ಚಿಕಿತ್ಸೆ ಪಡೆದ ಮಹಿಳೆ ವಾಪಸ್ ಬಂದ್ಮೇಲೆ ಪೊಲೀಸರಿಗೆ ದೂರು ನೀಡಿದ್ದಾಳೆ. ನಾಲ್ವರ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ನವಿಚಾರಣೆ ನಡೆಸುತ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...