alex Certify ಲಸಿಕೆ ತುಂಬದೆ ಸಿರಿಂಜ್​​ ಇಂಜೆಕ್ಟ್‌ ಮಾಡಿದ ನರ್ಸ್​: ವೈರಲ್​ ಆಯ್ತು ಬೆಚ್ಚಿಬೀಳಿಸುವ ವಿಡಿಯೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆ ತುಂಬದೆ ಸಿರಿಂಜ್​​ ಇಂಜೆಕ್ಟ್‌ ಮಾಡಿದ ನರ್ಸ್​: ವೈರಲ್​ ಆಯ್ತು ಬೆಚ್ಚಿಬೀಳಿಸುವ ವಿಡಿಯೋ..!

ದೇಶದಲ್ಲಿ ಕೊರೊನಾ ಲಸಿಕೆಯ ಅಭಿಯಾನ ಭರದಿಂದ ಸಾಗಿದೆ. ಈ ನಡುವೆ ಬಿಹಾರದ ನರ್ಸ್ ಒಬ್ಬರು ಸಿರಿಂಜ್​ ತುಂಬಿಸದೇ ವ್ಯಕ್ತಿಗೆ ಲಸಿಕೆ ನೀಡಿದಂತೆ ನಾಟಕ ಮಾಡಿದ್ದು, ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ನರ್ಸ್​ ಖಾಲಿ ಸಿರಿಂಜ್​ ಹಿಡಿದು ಇಂಜೆಕ್ಷನ್​ ನೀಡಿರೋದು ಸ್ಪಷ್ಟವಾಗಿ ಗೋಚರವಾಗಿದೆ. ಜೂನ್​ 21ನೇ ತಾರೀಖಿನಂದು ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆದರೆ ಈ ವಿಡಿಯೋ ತಡವಾಗಿ ಬೆಳಕಿಗೆ ಬಂದಿದೆ.

48 ವರ್ಷದ ನರ್ಸ್​ ಚಂದ ಕುಮಾರಿ ಜನರ ಜೊತೆ ಮಾತನಾಡುತ್ತಾ ಸಿರಿಂಜ್ ​ನ್ನು ಕೈಗೆ ತೆಗೆದುಕೊಳ್ತಾರೆ. ಇದಕ್ಕೆ ಲಸಿಕೆಯನ್ನ ತುಂಬದೇ ವ್ಯಕ್ತಿಗೆ ಇಂಜೆಕ್ಷನ್​ ನೀಡಿದ್ದಾರೆ.

20 ವರ್ಷದ ಅಝರ್​ ಈ ವಿಚಾರದ ಬಗ್ಗೆ ಮಾತನಾಡಿದ್ದು, ಪ್ಲಾಸ್ಟಿಕ್​ ಕವರ್​ನಿಂದ ಸಿರಿಂಜ್ ​​ನ್ನು ಹೊರತೆಗೆದ ನರ್ಸ್​ ಅದರಲ್ಲಿ ಲಸಿಕೆಯನ್ನ ತುಂಬದೇ ನನಗೆ ಇಂಜೆಕ್ಟ್​ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಅಜರ್ ಸ್ನೇಹಿತ ಈ ವಿಡಿಯೋ ಚಿತ್ರೀಕರಿಸಿದ್ದು ವಿಡಿಯೋ ನೋಡಿದ ಬಳಿಕ ಅಜರ್ ಶಾಕ್​ ಆಗಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

— The Warrior X (@optimusprime699) June 24, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...