alex Certify ನಾಪತ್ತೆಯಾಗಿದ್ದ NPS ನೌಕರರ ಸಂಘದ ಅಧ್ಯಕ್ಷ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಪತ್ತೆಯಾಗಿದ್ದ NPS ನೌಕರರ ಸಂಘದ ಅಧ್ಯಕ್ಷ ಪತ್ತೆ

ಶಿವಮೊಗ್ಗ: ನಾಪತ್ತೆಯಾಗಿದ್ದ ಎನ್.ಪಿ.ಎಸ್. ನೌಕರರ ಸಂಘದ ಶಿವಮೊಗ್ಗ ತಾಲೂಕು ಶಾಖೆ ಅಧ್ಯಕ್ಷ ಪ್ರಭಾಕರ್ ಪತ್ತೆಯಾಗಿದ್ದಾರೆ.

ಶಿವಮೊಗ್ಗ ತಾಲೂಕು ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಪ್ರಭಾಕರ್ ಜುಲೈ 19ರಂದು ಸಂದೇಶ ರವಾನಿಸಿ ನಾಪತ್ತೆಯಾಗಿದ್ದರು. ಬದುಕಿಗೆ ವಿದಾಯ ಹೇಳುತ್ತಿರುವುದಾಗಿ ಎನ್‌ಪಿಎಸ್ ಹೋರಾಟ ಸಮಿತಿಯ ವಾಟ್ಸಾಪ್ ಗ್ರೂಪ್ ನಲ್ಲಿ ಸಂದೇಶ ಹಾಕಿ ನಾಪತ್ತೆಯಾಗಿದ್ದರು.

ತಮ್ಮ ಕಾರ್ ಕಾರ್ಕಳದಲ್ಲಿ ಬಿಟ್ಟು ಅವರು ಹುಬ್ಬಳ್ಳಿಗೆ ಹೋಗಿದ್ದರು. ನಂತರ ತಮ್ಮ ಕುಟುಂಬದವರ ಸಂಪರ್ಕಕ್ಕೆ ಬಂದಿದ್ದ ಪ್ರಭಾಕರ್ ಹುಬ್ಬಳ್ಳಿ ನಗರದಿಂದ ದಾವಣಗೆರೆಗೆ ಬಂದಿದ್ದರು. ದಾವಣಗೆರೆಯಲ್ಲಿ ಅವರನ್ನು ವಶಕ್ಕೆ ಪಡೆದ ಪೊಲೀಸರು ಶಿವಮೊಗ್ಗಕ್ಕೆ ಕರೆದುಕೊಂಡು ಬಂದಿದ್ದಾರೆ. ಶಿವಮೊಗ್ಗದ ಕೋಟೆ ಠಾಣೆಗೆ ಪ್ರಭಾಕರನನ್ನು ಕರೆದುಕೊಂಡು ಬರಲಾಗಿದ್ದು, ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...