alex Certify ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್‌ ನ್ಯೂಸ್

ಭಾರತೀಯ ರೈಲ್ವೆ ಇಲಾಖೆಯು ಹೊಸ ಎಸಿ -2 ಟೈರ್​ ಎಲ್​ಹೆಚ್​​ಬಿ ಕೋಚ್​ ರೈಲುಗಳ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಈ ಹೊಸ ಕೋಚ್​​ಗಳು ಪ್ರತಿ ಗಂಟೆಗೆ 180 ಕಿಲೋಮೀಟರ್​ ವೇಗದಲ್ಲಿ ಚಲಿಸಿವೆ.

ಪಶ್ಚಿಮ ಕೇಂದ್ರ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಕೋಚ್​ನ್ನು ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸುವ ಸಲುವಾಗಿ ಈ ಪ್ರಯೋಗ ಸಂಚಾರವನ್ನ ನಡೆಸಲಾಯ್ತು ಎಂದು ಹೇಳಿದ್ದಾರೆ.

ಭಾರತೀಯ ರೈಲ್ವೆ ನಾಗ್ಡಾ-ಕೋಟಾ-ಸವಾಯಿ ಮಾಧೋಪುರ ವಿಭಾಗದಲ್ಲಿ ಡಬ್ಲುಸಿಆರ್​​ನಲ್ಲಿ ವಿವಿಧ ಕೋಚ್​ಗಳು ವೇಗದ ಪ್ರಯೋಗವನ್ನು ನಡೆಸಿವೆ.

ಇದೊಂದು 350 ಕಿಲೋಮೀಟರ್ ಉದ್ದದ ಮಾರ್ಗವಾಗಿದ್ದು ಇಲ್ಲಿಯವರೆಗೆ 8900 ಕಿಲೋಮೀಟರ್​​ ವೇಗದ ಪರೀಕ್ಷೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.

ಈ ಸಂಬಂಧ ಭಾರತೀಯ ರೈಲ್ವೆ ಇಲಾಖೆ ವಿಡಿಯೋವೊಂದನ್ನ ಶೇರ್ ಮಾಡಿದ್ದು ಇದರಲ್ಲಿ ಸ್ಪೀಡೋಮೀಟರ್​ನಲ್ಲಿ ದಾಖಲಾದ ವೇಗವನ್ನೂ ನೀವು ನೋಡಬಹುದಾಗಿದೆ. ಸ್ಪೀಡೋಮೀಟರ್​ನಲ್ಲಿ ವೇಗವು ಪ್ರತಿ ಗಂಟೆಗೆ 180 ಕಿಮೀ ಎಂದು ತೋರಿಸುತ್ತಿದೆ.

— Ministry of Railways (@RailMinIndia) July 21, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...