alex Certify ‘ಇಂಥಾ ದೊಡ್ಡ ಹಡಗಿನಲ್ಲಿ ಆರ್ಯನ್​ ಮಾತ್ರ ತಿರುಗಾಡುತ್ತಿದ್ದನಾ..? NCB ಗೆ ಗಾಯಕ ಮಿಕಾ ಸಿಂಗ್​ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಇಂಥಾ ದೊಡ್ಡ ಹಡಗಿನಲ್ಲಿ ಆರ್ಯನ್​ ಮಾತ್ರ ತಿರುಗಾಡುತ್ತಿದ್ದನಾ..? NCB ಗೆ ಗಾಯಕ ಮಿಕಾ ಸಿಂಗ್​ ಪ್ರಶ್ನೆ

ಬಾಲಿವುಡ್​ನ ಖ್ಯಾತ ನಟ ಶಾರೂಕ್​ ಖಾನ್​ ಪುತ್ರ ಆರ್ಯನ್​ ಖಾನ್​ ಡ್ರಗ್​ ಸೇವನೆ ಪ್ರಕರಣದ ಅಡಿಯಲ್ಲಿ ಎನ್​ಸಿಬಿ ವಶದಲ್ಲಿದ್ದಾರೆ. ಆರ್ಯನ್​​, ಮುನ್ಮುನ್​​ ಧಮೇಚಾ ಹಾಗೂ ಅರ್ಬಾಜ್​​ ಮರ್ಚೆಂಟ್​ ಸೇರಿದಂತೆ ಬಂಧನಕ್ಕೊಳಗಾದ ಎಲ್ಲರನ್ನೂ ಅಕ್ಟೋಬರ್​ 7ರವರೆಗೆ ವಶಕ್ಕೆ ಪಡೆಯಲಾಗಿದೆ.

ಬರೋಬ್ಬರಿ 31 ವರ್ಷಗಳಿಂದ ಕೇವಲ ಚಹಾ ಸೇವಿಸಿ ಬದುಕಿದ್ದಾಳೆ ಈ ಮಹಿಳೆ..!

ಆರ್ಯನ್​ ಖಾನ್​ ಬಂಧನದ ಬಳಿಕ ಸಾಕಷ್ಟು ಬಾಲಿವುಡ್ ತಾರೆಯರು ಶಾರೂಕ್​ ಖಾನ್​ ಹಾಗೂ ಗೌರಿ ಖಾನ್​ ದಂಪತಿಗೆ ಬೆಂಬಲ ಸೂಚಿಸಿದ್ದಾರೆ. ಇದೀಗ ಈ ಸಾಲಿಗೆ ಬಾಲಿವುಡ್​ ಗಾಯಕ ಮಿಕಾ ಸಿಂಗ್​ ಕೂಡ ಆರ್ಯನ್​ ಪರ ದನಿ ಎತ್ತಿದ್ದಾರೆ.

ಟ್ವಿಟರ್​ನಲ್ಲಿ ಹಡಗಿನ ಫೋಟೋ ಶೇರ್​ ಮಾಡಿರುವ ಮಿಕಾ ಸಿಂಗ್​, ಎನ್​ಸಿಬಿಗೆ ಟಾಂಗ್​ ನೀಡಿದ್ದಾರೆ. ವ್ಹಾವ್​..! ಈ ಕಾರ್ಡೆಲಿಯಾ ಹಡಗು ಎಷ್ಟು ಸುಂದರವಾಗಿದೆ..! ನಾನು ಕೂಡ ಇಲ್ಲಿಗೆ ಹೋಗಬೇಕು ಎನಿಸುತ್ತಿದೆ. ನನಗೆ ತಿಳಿದ ಪ್ರಕಾರ ಈ ಹಡಗಿನಲ್ಲಿ ಸಾಕಷ್ಟು ಮಂದಿ ಇದ್ದರು. ಆದರೆ ನನಗೆ ಆರ್ಯನ್​ ಬಿಟ್ಟು ಇನ್ಯಾರೂ ಕಾಣಲಿಲ್ಲ. ಇಂತಹ ದೊಡ್ಡ ಹಡಗಿನಲ್ಲಿ ಕೇವಲ ಆರ್ಯನ್​ ಮಾತ್ರ ತಿರುಗಾಡುತ್ತಿದ್ದ. ಎಲ್ಲದಕ್ಕೂ ಒಂದು ಮಿತಿ ಇದೆ. ಎಂದು ಬರೆಯುವ ಮೂಲಕ ಎನ್​ಸಿಬಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಖ್ಯಾತ ನಟನ ನಿವಾಸದ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ……!

ಮಿಕಾ ಸಿಂಗ್​ರ ಈ ಟ್ವೀಟ್​ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಮಿಕಾ ಸಿಂಗ್​ ಹಾಗೂ ಶಾರೂಕ್​ ಅಭಿಮಾನಿಗಳು ಈ ಟ್ವೀಟ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಇತ್ತ ಆರ್ಯನ್​ ಖಾನ್​ಗೆ ಎನ್​ಸಿಬಿಯಿಂದ ಮುಕ್ತಿ ಸಿಕ್ಕಿಲ್ಲ. ಅಕ್ಟೋಬರ್​ 7ರವರೆಗೂ ಎನ್​ಸಿಬಿ ವಶದಲ್ಲಿ ಆರ್ಯನ್​ ಖಾನ್​ ಇರಲಿದ್ದಾರೆ. ಭಾನುವಾರದಂದು ಆರ್ಯನ್​ ಸೇರಿದಂತೆ 8 ಮಂದಿಯನ್ನು ಎನ್​ಸಿಬಿ ಬಂಧಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...