
ಬರೋಬ್ಬರಿ 31 ವರ್ಷಗಳಿಂದ ಕೇವಲ ಚಹಾ ಸೇವಿಸಿ ಬದುಕಿದ್ದಾಳೆ ಈ ಮಹಿಳೆ..!
ಆರ್ಯನ್ ಖಾನ್ ಬಂಧನದ ಬಳಿಕ ಸಾಕಷ್ಟು ಬಾಲಿವುಡ್ ತಾರೆಯರು ಶಾರೂಕ್ ಖಾನ್ ಹಾಗೂ ಗೌರಿ ಖಾನ್ ದಂಪತಿಗೆ ಬೆಂಬಲ ಸೂಚಿಸಿದ್ದಾರೆ. ಇದೀಗ ಈ ಸಾಲಿಗೆ ಬಾಲಿವುಡ್ ಗಾಯಕ ಮಿಕಾ ಸಿಂಗ್ ಕೂಡ ಆರ್ಯನ್ ಪರ ದನಿ ಎತ್ತಿದ್ದಾರೆ.
ಟ್ವಿಟರ್ನಲ್ಲಿ ಹಡಗಿನ ಫೋಟೋ ಶೇರ್ ಮಾಡಿರುವ ಮಿಕಾ ಸಿಂಗ್, ಎನ್ಸಿಬಿಗೆ ಟಾಂಗ್ ನೀಡಿದ್ದಾರೆ. ವ್ಹಾವ್..! ಈ ಕಾರ್ಡೆಲಿಯಾ ಹಡಗು ಎಷ್ಟು ಸುಂದರವಾಗಿದೆ..! ನಾನು ಕೂಡ ಇಲ್ಲಿಗೆ ಹೋಗಬೇಕು ಎನಿಸುತ್ತಿದೆ. ನನಗೆ ತಿಳಿದ ಪ್ರಕಾರ ಈ ಹಡಗಿನಲ್ಲಿ ಸಾಕಷ್ಟು ಮಂದಿ ಇದ್ದರು. ಆದರೆ ನನಗೆ ಆರ್ಯನ್ ಬಿಟ್ಟು ಇನ್ಯಾರೂ ಕಾಣಲಿಲ್ಲ. ಇಂತಹ ದೊಡ್ಡ ಹಡಗಿನಲ್ಲಿ ಕೇವಲ ಆರ್ಯನ್ ಮಾತ್ರ ತಿರುಗಾಡುತ್ತಿದ್ದ. ಎಲ್ಲದಕ್ಕೂ ಒಂದು ಮಿತಿ ಇದೆ. ಎಂದು ಬರೆಯುವ ಮೂಲಕ ಎನ್ಸಿಬಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಖ್ಯಾತ ನಟನ ನಿವಾಸದ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ……!
ಮಿಕಾ ಸಿಂಗ್ರ ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಿಕಾ ಸಿಂಗ್ ಹಾಗೂ ಶಾರೂಕ್ ಅಭಿಮಾನಿಗಳು ಈ ಟ್ವೀಟ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಇತ್ತ ಆರ್ಯನ್ ಖಾನ್ಗೆ ಎನ್ಸಿಬಿಯಿಂದ ಮುಕ್ತಿ ಸಿಕ್ಕಿಲ್ಲ. ಅಕ್ಟೋಬರ್ 7ರವರೆಗೂ ಎನ್ಸಿಬಿ ವಶದಲ್ಲಿ ಆರ್ಯನ್ ಖಾನ್ ಇರಲಿದ್ದಾರೆ. ಭಾನುವಾರದಂದು ಆರ್ಯನ್ ಸೇರಿದಂತೆ 8 ಮಂದಿಯನ್ನು ಎನ್ಸಿಬಿ ಬಂಧಿಸಿತ್ತು.