alex Certify ಕೋರ್ಟ್‌ ನಲ್ಲಿ ಮಹಿಳಾ ವಕೀಲರು ತಲೆಕೂದಲು ಸರಿಪಡಿಸಿಕೊಂಡ್ರೆ ಕಲಾಪಕ್ಕೆ ಅಡ್ಡಿ…! ಚರ್ಚೆಗೆ ಕಾರಣವಾಗಿದೆ ಈ ನೋಟೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋರ್ಟ್‌ ನಲ್ಲಿ ಮಹಿಳಾ ವಕೀಲರು ತಲೆಕೂದಲು ಸರಿಪಡಿಸಿಕೊಂಡ್ರೆ ಕಲಾಪಕ್ಕೆ ಅಡ್ಡಿ…! ಚರ್ಚೆಗೆ ಕಾರಣವಾಗಿದೆ ಈ ನೋಟೀಸ್

ಪುಣೆಯ ಜಿಲ್ಲಾ ನ್ಯಾಯಾಲಯವು ಮಹಿಳಾ ವಕೀಲರಿಗೆ ನೋಟಿಸ್ ಜಾರಿ‌ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ತೀವ್ರತರಹದ ಚರ್ಚೆ ಹುಟ್ಟುಹಾಕಿದೆ.

ಮಹಿಳಾ ವಕೀಲರು ತೆರೆದ ನ್ಯಾಯಾಲಯದಲ್ಲಿ ತಮ್ಮ ಕೂದಲನ್ನು ಸರಿಪಡಿಸಿಕೊಳ್ಳುತ್ತಿದ್ದರೆ, ಇದು ನ್ಯಾಯಾಲಯದ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುತ್ತಿದೆ. ಆದ್ದರಿಂದ, ಅದರಿಂದ ದೂರವಿರಲು ಮಹಿಳಾ ವಕೀಲರಿಗೆ ಸೂಚಿಸಲಾಗಿದೆ.

ವಕೀಲೆ ಇಂದಿರಾ ಜೈಸಿಂಗ್ ಎಂಬುವರು ನೋಟಿಸ್ ಫೋಟೋವನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿ, “ವಾವ್ ನೋಡಿ! ಮಹಿಳಾ ವಕೀಲರಿಂದ ಯಾರು ವಿಚಲಿತರಾಗಿದ್ದಾರೆ ಮತ್ತು ಏಕೆ !” ಎಂದು ಪ್ರಶ್ನೆ ಮಾಡಿದ್ದಾರೆ. ಈ ಆದೇಶವನ್ನು ಅಕ್ಟೋಬರ್ 20 ರಂದು ಪ್ರಕಟಿಸಲಾಗಿತ್ತು.

ಬಾರ್ ಅಂಡ್ ಬೆಂಚ್ ವರದಿ ಪ್ರಕಾರ ಟೀಕೆಗಳು ಬಂದ ನಂತರ ನೋಟಿಸ್ ಹಿಂಪಡೆಯಲಾಗಿದೆ. ಈ ನೋಟಿಸ್ ಕೇವಲ ನ್ಯಾಯಾಲಯದ ಸೌಹಾರ್ದತೆಯನ್ನು ಕಾಯ್ದುಕೊಳ್ಳುವ ಉದ್ದೇಶವನ್ನು ಹೊಂದಿತ್ತು ಎಂದು ಸ್ಪಷ್ಟನೆಯೂ ಬಂದಿದೆ.

“ಇದು ನಿಜವೇ!!! ಅಷ್ಟು ಸುಲಭವಾಗಿ ವಿಚಲಿತರಾಗುವ ಸಾಮರ್ಥ್ಯವಿರುವ ವ್ಯಕ್ತಿಗಳು ನ್ಯಾಯ ವಿತರಣಾ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿರಬೇಕೇ?” ಎಂದು ಟ್ವಿಟರ್ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...