alex Certify ನಿಧಾನವೇ ಪ್ರಧಾನ ಎನ್ನುವ ಹಿರಿಯರ ಮಾತು ಎಷ್ಟು ನಿಜ ನೋಡಿ: ಇಲ್ಲಿದೆ ಬಾಲಕ ಕಲಿಸಿದ ಈ ಪಾಠ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಧಾನವೇ ಪ್ರಧಾನ ಎನ್ನುವ ಹಿರಿಯರ ಮಾತು ಎಷ್ಟು ನಿಜ ನೋಡಿ: ಇಲ್ಲಿದೆ ಬಾಲಕ ಕಲಿಸಿದ ಈ ಪಾಠ

ಜೀವನದಲ್ಲಿ ನಿಧಾನವಾಗಿ ಹೋದರೆ ಜಯ ಸಾಧಿಸುತ್ತೀರಾ. ಜಯವನ್ನು ಬೇಗನೇ ಸಾಧಿಸಬೇಕು ಎನ್ನುವ ಉದ್ದೇಶದಿಂದ ಓಡಬೇಡಿ ಎಂದು ಹಿರಿಯರ ಮಾತಿಗೆ ಅನ್ವಯ ಆಗುವಂತೆ ವಿಡಿಯೋ ಒಂದು ವೈರಲ್​ ಆಗಿದೆ.

ಬಾಯಲ್ಲಿ ಲಿಂಬೆಹಣ್ಣು ಇಟ್ಟುಕೊಂಡು ಆಡುವ ಆಟದಲ್ಲಿ ನಿಧಾನವಾಗಿ ನಡೆದುಕೊಂಡು ಹೋದ ಬಾಲಕ ಜಯಸಾಧಿಸುವ ವಿಡಿಯೋ ಇದಾಗಿದೆ.

ಲೆಮನ್ ರೇಸ್ ನಲ್ಲಿ ಪಾಲ್ಗೊಂಡಿದ್ದ ಪುಟಾಣಿಗಳನ್ನು ವಿಡಿಯೋದಲ್ಲಿ ನೋಡಬಹುದು. ಅವರಲ್ಲಿ ಕೆಲವರು ಅವಸರದಲ್ಲಿ ಪ್ರಾರಂಭಿಸುತ್ತಾರೆ. ಬೇಗ ಬೇಗ ಹೋಗಿ ಗುರಿಮುಟ್ಟುವ ಉದ್ದೇಶದಿಂದ ಮಕ್ಕಳು ಓಡೋಡಿ ಹೋಗುತ್ತಾರೆ. ಆದರೆ ಎಲ್ಲರ ಬಾಯಲ್ಲಿ ಇರುವ ಚಮಚದಲ್ಲಿನ ಲಿಂಬೆಹಣ್ಣು ಬಿದ್ದುಹೋಗುತ್ತದೆ.

ಆದರೆ ಪುಟ್ಟ ಬಾಲಕನೊಬ್ಬ ಎಲ್ಲರೂ ಓಡಿಓಡಿ ಹೋದರೂ ತಲೆ ಕೆಡಿಸಿಕೊಳ್ಳದೇ ನಿಧಾನವಾಗಿ ಹೋಗುತ್ತಾನೆ. ಲಿಂಬೆಹಣ್ಣು ಬಾಯಲ್ಲಿ ಇಟ್ಟುಕೊಂಡು ನಿಧಾನವಾಗಿ ಹೋದ್ದರಿಂದ ಆತನ ಲಿಂಬೆಹಣ್ಣು ಬೀಳಲಿಲ್ಲ. ಇದೇ ಬಾಲಕ ಜಯ ಸಾಧಿಸಿದ.

ಈ ವಿಡಿಯೋವನ್ನು 10 ಮಿಲಿಯನ್ ಮಂದಿ ವೀಕ್ಷಿಸಿ ಹಿರಿಯರ ಮಾತು ಎಷ್ಟು ನಿಜ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...