alex Certify ಸಾರ್ವಜನಿಕರೇ ಗಮನಿಸಿ : 10 ರೂ.ಮುಖಬೆಲೆಯ `ನಾಣ್ಯ’ ಅಧಿಕೃತವಾಗಿ ಸ್ವೀಕರಿಸುವಂತೆ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರೇ ಗಮನಿಸಿ : 10 ರೂ.ಮುಖಬೆಲೆಯ `ನಾಣ್ಯ’ ಅಧಿಕೃತವಾಗಿ ಸ್ವೀಕರಿಸುವಂತೆ ಸೂಚನೆ

ಮೈಸೂರು: ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ 10 ರೂ. ನಾಣ್ಯ ಚಲಾವಣೆಯಲ್ಲಿದೆ, ಎಲ್ಲರೂ ಇದನ್ನು ಬಳಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆವಿ ರಾಜೇಂದ್ರ ಸ್ಪಷ್ಟನೆ ನೀಡಿದ್ದಾರೆ.

ವಹಿವಾಟು ಮತ್ತು ಪಾವತಿಗಾಗಿ ರೂ.10 ರೂಪಾಯಿ ನಾಣ್ಯವನ್ನು ಸ್ವೀಕರಿಸಲು ಅಂಗಡಿಯವರು, ವ್ಯಾಪಾರಿಗಳು ಮತ್ತು ಸಾಮಾನ್ಯ ಸಾರ್ವಜನಿಕರು ರೂ.10 ನಾಣ್ಯಗಳ ಸ್ವೀಕಾರ ಮತ್ತು ಬಳಕೆಯನ್ನು ನಿರಾಕರಿಸುವುದು ಕಂಡು ಬಂದಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ಡಾ.ಕೆವಿ ರಾಜೇಂದ್ರ ಸ್ಪಷ್ಟನೆ ನೀಡಿದ್ದಾರೆ.

10 ರೂ ನಾಣ್ಯ ಚಲಾವಣೆಯಲ್ಲಿದೆ ಎಂದು ರಿಸರ್ವ್ ಬ್ಯಾಂಕ್ ಕೂಡ ಸ್ಪಷ್ಟನೆ ನೀಡಿದೆ. ಕೇಂದ್ರ ಸರ್ಕಾರ ಕೂಡ ಹಿಂಪಡೆದಿಲ್ಲ. ಆದ್ದರಿಂದ ಸಾರ್ವಜನಿಕರು ಯಾವು ವದಂತಿ ನಂಬದೇ ಈ ನಾಣ್ಯವನ್ನು ಸ್ವೀಕರಿಸಬಹುದಾಗಿದೆ. ಒಂದು ವೇಳೆ 10 ರೂ ನಾಣ್ಯ ಸ್ವೀಕರಿಸದಿದ್ದಲ್ಲಿ ನಾಣ್ಯ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...