alex Certify ಬೆಂಗಳೂರಿಗರೇ ಗಮನಿಸಿ : ಮಾ.31 ರೊಳಗೆ ನಲ್ಲಿಗಳಲ್ಲಿ ಈ ಸಾಧನ ಅಳವಡಿಸದಿದ್ರೆ 5000 ದಂಡ ಫಿಕ್ಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿಗರೇ ಗಮನಿಸಿ : ಮಾ.31 ರೊಳಗೆ ನಲ್ಲಿಗಳಲ್ಲಿ ಈ ಸಾಧನ ಅಳವಡಿಸದಿದ್ರೆ 5000 ದಂಡ ಫಿಕ್ಸ್..!

ಬೆಂಗಳೂರು : ಬೆಂಗಳೂರಿನಲ್ಲಿ ನೀರಿಗಾಗಿ ಜನರು ಪರದಾಡುವಂತಾಗಿದ್ದು, ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಜನತೆ ಹೆಚ್ಚಿನ ಹಣ ನೀಡಿ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ.

ಇದರ ನಡುವೆ ಬೆಂಗಳೂರಿನ ಜಲಮಂಡಳಿ ನಲ್ಲಿಗಳಲ್ಲಿ ಕಡ್ಡಾಯವಾಗಿ Flow Restrictor/Aerator ಸಾಧನ ಅಳವಡಿಸಬೇಕೆಂದು ಆದೇಶ ಹೊರಡಿಸಿದೆ.

ನಗರದ ಮಾಲ್ ಗಳಿಂದ ಹಿಡಿದು ವಾಣಿಜ್ಯ ಸಂಕೀರ್ಣ, ಅಪಾರ್ಟ್ ಮೆಂಟ್, ಹೋಟೆಲ್, ರೆಸ್ಟೋರೆಂಟ್ ಸೇರಿ ಎಲ್ಲಾ ಕಡೆ ನಲ್ಲಿಗಳಲ್ಲಿ ಕಡ್ಡಾಯವಾಗಿ Flow Restrictor/Aerator ಎಂಬ ಸಾ‍ಧನವನ್ನು ಅಳವಡಿಸಿಕೊಳ್ಳಬೇಕು ಎಂದು ಜಲಮಂಡಳಿ ಆದೇಶ ಹೊರಡಿಸಿತ್ತು. ಮಾ.31 ರೊಳಗೆ ಈ ಸಾಧನವನ್ನು ಅಳವಡಿಸದೇ ಇದ್ರೆ 5000 ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಉಲ್ಲಂಘನೆಯು ಮರುಕಳಿಸಿದರೆ ದಂಡದ ಮೊತ್ತ 5000 ರೂ. ಜತೆಗೆ, ಹೆಚ್ಚುವರಿಯಾಗಿ 500 ರೂ. ಅನ್ನು ಪ್ರತಿದಿನದಂತೆ ದಂಡವಾಗಿ ವಸೂಲಿ ಮಾಡಲಾಗುತ್ತದೆ ಎಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಎಚ್ಚರಿಕೆ ನೀಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...