alex Certify ಗಮನಿಸಿ : ಆಗಸ್ಟ್ ತಿಂಗಳ ‘ಅನ್ನಭಾಗ್ಯ’ ಹಣ ಜಮಾ ಆಗಿದ್ಯೋ.. ಇಲ್ವೋ ಎಂದು ಜಸ್ಟ್ ಈ ರೀತಿ ಚೆಕ್ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : ಆಗಸ್ಟ್ ತಿಂಗಳ ‘ಅನ್ನಭಾಗ್ಯ’ ಹಣ ಜಮಾ ಆಗಿದ್ಯೋ.. ಇಲ್ವೋ ಎಂದು ಜಸ್ಟ್ ಈ ರೀತಿ ಚೆಕ್ ಮಾಡಿ

ಬೆಂಗಳೂರು : ಹೆಚ್ಚುವರಿ 5 ಅಕ್ಕಿ ಬದಲು ಹಣ ನೀಡುವ ವ್ಯವಸ್ಥೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದ್ದು, ಪಡಿತರರ ಖಾತೆಗೆ ಸರ್ಕಾರ ನೇರವಾಗಿ ಹಣ ವರ್ಗಾವಣೆ ಮಾಡುತ್ತಿದೆ. ಸದ್ಯ , ಸರ್ಕಾರ ಆಗಸ್ಟ್ ತಿಂಗಳ ಹಣವನ್ನು ಕೂಡ ವರ್ಗಾವಣೆ ಮಾಡಿದ್ದು, ನೀವು ಈ ರೀತಿಯಾಗಿ ಅಕೌಂಟ್ ಗೆ ಹಣ ಬಂದಿದ್ಯೋ..ಇಲ್ವೋ ಎಂದು ಚೆಕ್ ಮಾಡಬಹುದು.

ಹೌದು. ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ದಾರರ ಖಾತೆಗೆ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಯ ಆಗಸ್ಟ್ ತಿಂಗಳ ಎರಡನೇ ಕಂತಿನ ಹಣ ಜಮಾ ಮಾಡಲಾಗಿದೆ.ರೇಷನ್ ಕಾರ್ಡ್ ಮಾಹಿತಿ ಆಧರಿಸಿ ಸರ್ಕಾರ DBT ಮೂಲಕ ಹಣ ವರ್ಗಾವಣೆ ಮಾಡುತ್ತಿದೆ. ಆದರೆ ಎಲ್ಲರಿಗೂ ಕೂಡ ಈ ಹಣ ವರ್ಗಾವಣೆಯಾಗಿಲ್ಲ, ರೇಷನ್ ಕಾರ್ಡ್, ಬ್ಯಾಂಕ್ ಮಾಹಿತಿ ಮತ್ತು ಆಧಾರ್ ಕಾರ್ಡ್ ಮಾಹಿತಿಯಲ್ಲಿ ಹೊಂದಾಣಿಕೆ ಆಗದವರು ಈ ಹಣವನ್ನು ಪಡೆಯಲಾಗಿಲ್ಲ.

ಚೆಕ್ ಮಾಡುವುದು ಹೇಗೆ..?
1) ಆಹಾರ ಇಲಾಖೆಯ ವೆಬ್ ಸೈಟ್ ಗೆ ಲಾಗಿನ್ ಆಗಬೇಕು
2) ಇದರಲ್ಲಿ ಸ್ಟೇಟಸ್ ಆಫ್ ಡಿಬಿಟಿ ಅನ್ನುವ ಆಯ್ಕೆ ಕಾಣಿಸುತ್ತದೆ. ಅದನ್ನು ಆಯ್ಕೆ ಮಾಡಿ.
3) ನಂತರ ನಿಗದಿತ ಕಾಲಂ ನಲ್ಲಿ ರೇಷನ್ ಕಾರ್ಡ್ ನ ನಂಬರ್ ಕೇಳುತ್ತದೆ, ಅಂದ್ರೆ ಆರ್ ಸಿ ನಂಬರ್ನ್ನು ನಮೂದಿಸಿ
4) ನಂತರ ನಿಮ್ಮ ರೇಷನ್ ಕಾರ್ಡ್ ನ ಮೇಲ್ಬಾಗದಲ್ಲಿ ಕಾಣುವ ಆರ್ ಸಿ ನಂಬರ್ ಅನ್ನು ಇಲ್ಲಿ ನಮೂದಿಸಿ ಮುಂದುವರೆಯಿರಿ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
5) ಮುಂದಿನ ಪುಟದಲ್ಲಿ ನಿಮ್ಮ ಅಕೌಂಟ್ಗ ಗೆ ಹಣ ಜಮಾ ಆಗಿದ್ಯಾ, ಒಂದೊಮ್ಮೆ ಖಾತೆಗೆ ಹಣ ಬರದಿದ್ದಲ್ಲಿ ಅದು ಯಾವ ಕಾರಣಕ್ಕೆ ಕ್ರೆಡಿಟ್ ಆಗಿಲ್ಲ ಎಂಬ ಮಾಹಿತಿ ನಿಮಗೆ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...