alex Certify ಗಮನಿಸಿ : `E-KYC’ ಮಾಡದಿದ್ದರೆ ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರೇ ಡಿಲೀಟ್ ಆಗಲಿದೆ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : `E-KYC’ ಮಾಡದಿದ್ದರೆ ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರೇ ಡಿಲೀಟ್ ಆಗಲಿದೆ!

ಬೆಂಗಳೂರು : ಪಡಿತರ ಚೀಟಿದಾರರಿಗೆ ಆಹಾರ ಇಲಾಖೆಯು ಮಹತ್ವದ ಮಾಹಿತಿ ನೀಡಿದ್ದು, ಪಡಿತರ ಚೀಟಿದಾರರು ಇ-ಕೆವೈಸಿ ಮಾಡದಿದ್ದರೆ ರೇಷನ್ ಕಾರ್ಡ್ ನಲ್ಲಿರುವ ಹೆಸರು ರದ್ದಾಗಲಿದೆ ಎಂದು ತಿಳಿಸಿದೆ.

ಪಡಿತರದಾರರು ತಪ್ಪದೇ ಇ-ಕೆವೈಸಿ ಮಾಡಬೇಕು. ಇಲ್ಲವಾದಲ್ಲಿ ನಿಮಗೆ ರೇಷನ್ ಸಿಗಲ್ಲ. ಅನೇಕರು ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಗೆ ಹಾಗೂ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿಲ್ಲ, ದಯವಿಟ್ಟು ಈ ಕೆಲಸ ಮಾಡಿಕೊಳ್ಳಿ. ಹಾಗೂ ಕುಟುಂಬ ಸದಸ್ಯರ e-kyc ಅಪ್ಡೇಟ್ ಆಗದಿರುವುದು ಅಥವಾ ನೀಡಿರುವ ಆಧಾರ್ ಕಾರ್ಡ್ ಮಾಹಿತಿ ತಪ್ಪಾಗಿರುವುದು , ಬ್ಯಾಂಕ್ ಅಕೌಂಟ್ ಮಾಹಿತಿ ನೀಡಿರುವುದು ಈ ಎಲ್ಲಾ ಕಾರಣದಿಂದ ಹಲವರು ಅನ್ನಭಾಗ್ಯ ಯೋಜನೆ ಹಣದಿಂದ ವಂಚಿತರಾಗಿದ್ದಾರೆ. ಆದ್ದರಿಂದ ತಪ್ಪದೇ ನೀವು ಈ ಕೆಲಸ ಮಾಡಬೇಕು.

ಆಗಸ್ಟ್‌ ಒಳಗೆ ಇ-ಕೆವೈಸಿ ಮಾಡದೇ ಇರುವವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದು ಸೌಲಭ್ಯ ನೀಡದಿರಲು ಆಹಾರ ಇಲಾಖೆ ನಿರ್ಧರಿಸಿದೆ. ಹೀಗಾಗಿ ಇ ಕೆವೈಸಿ ಮಾಡಲು ಬಾಕಿ ಇರುವವರಿಗೆ ಆ. 31ರ ಕೊನೆಯ ಗಡುವು ನೀಡಲಾಗಿದೆ. ಒಂದು ವೇಳೆ ಮಾಡಿಸದಿದ್ದಲ್ಲಿ ಅಂತಹ ಸದಸ್ಯಗಳನ್ನು ಪಡಿತರ ಚೀಟಿಯಿಂದ ಅಮಾನತುಗೊಳಿಸುವ ಜತೆಗೆ ಫಲಾನುಭವಿಗಳಿಗೆ ಆಹಾರಧಾನ್ಯ ಮತ್ತು ಡಿಬಿಟಿ ನಗದು ಸೌಲಭ್ಯವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...