alex Certify ಭಾರತದ ʼಐಕಾನ್‌ʼ ಯಾರು ಎಂಬ ಪ್ರಶ್ನೆಗೆ ಗವಾಸ್ಕರ್‌ ಹೇಳಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ʼಐಕಾನ್‌ʼ ಯಾರು ಎಂಬ ಪ್ರಶ್ನೆಗೆ ಗವಾಸ್ಕರ್‌ ಹೇಳಿದ್ದೇನು ಗೊತ್ತಾ…?

ಸುನೀಲ್​ ಗವಾಸ್ಕರ್​ ಅಂದರೆ ಸಾಕು ಕ್ರಿಕೆಟ್​​ ಹಾಗೂ ಅವರ ಕಮೆಂಟರಿ ನೆನಪಿಗೆ ಬರಬಹುದು. ಇವರ ಬಳಿ ಹೋಗಿ ಭಾರತದ ಐಕಾನ್​ ಯಾರು ಎಂದು ಕೇಳಿದ್ರೆ ಏನು ಉತ್ತರ ನೀಡಬಹುದು..? ಸಚಿನ್​, ವಿರಾಟ್​, ರೋಹಿತ್​ ಶರ್ಮಾ ಹೀಗೆ ಕ್ರಿಕೆಟ್​ ಆಟಗಾರರ ಹೆಸರು ಹೇಳಬಹುದು ಎಂದು ನೀವು ಅಂದುಕೊಂಡಿರಬಹುದು. ಆದರೆ ಸಂದರ್ಶನವೊಂದರಲ್ಲಿ ಸುನೀಲ್ ಗವಾಸ್ಕರ್​ ಹೇಳಿರುವ ಹೆಸರು ಕೇಳಿ ಎಲ್ಲರೂ ಶಾಕ್​ ಆಗಿದ್ದಾರೆ.

ಅನಾಲಿಸ್ಟ್​​ ಇನ್​ಸೈಡ್​​ ಪಾಡ್​ಕಾಸ್ಟ್​ನ ಸಂದರ್ಶನದಲ್ಲಿ ಗವಾಸ್ಕರ್​​ ತಮ್ಮ ಕ್ರಿಕೆಟ್​ ಜೀವನದ ಬಗ್ಗೆ ಹಾಗೂ ಇಂಡಿಯನ್​ ಪ್ರೀಮಿಯರ್​ ಲೀಗ್​ ಬಗ್ಗೆ ಮಾತನಾಡುತ್ತಾ ಭಾರತದ ಈ ಸೆಲಿಬ್ರಿಟಿ ಎಲ್ಲಾ ಕ್ರಿಕೆಟಿಗರಿಗಿಂತಲೂ ದೊಡ್ಡ ಸ್ಟಾರ್ ಎಂದು ಹೇಳಿದ್ದಾರೆ.

ಹೌದು..! ಸುನೀಲ್​ ಗವಾಸ್ಕರ್​ರ ಪ್ರಕಾರ ಬಾಲಿವುಡ್​ ಹಿರಿಯ ನಟ ಅಮಿತಾಬ್​ ಬಚ್ಛನ್​ ಅಂತೆ..! ಅಮಿತಾಬ್​ ಬಚ್ಚನ್​ ನಿಜಕ್ಕೂ ಒಬ್ಬ ಅದ್ಭುತ ವ್ಯಕ್ತಿ. ಅವರ ನಟನೆಯಲ್ಲಿ ನೈಜತೆ ಇದೆ ಎಂದು ಹೇಳಿದ್ದಾರೆ. ಇನ್ನು ಇದನ್ನ ಹೊರತುಪಡಿಸಿ ಎಬಿ ಡಿವಿಲಿಯರ್ಸ್ ಹೆಸರನ್ನೂ ಹೇಳಿದ ಗಾವಸ್ಕರ್​ ನಾನು ಅವರಂತೆ ಬ್ಯಾಟಿಂಗ್​ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಅವರು ಬ್ಯಾಟಿಂಗ್​ ಮಾಡೋದನ್ನ ನೋಡೋದು ನನಗೆ ತುಂಬಾನೇ ಪ್ರಿಯವಾದ ಕೆಲಸ ಎಂದೂ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...