alex Certify ಬೆರಗಾಗಿಸುತ್ತೆ ʼಪುಷ್ಪಾʼ ಚಿತ್ರದ ಹಾಡಿಗೆ ನಟಿ ಸಮಂತಾ ಪಡೆದಿರುವ ಸಂಭಾವನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ʼಪುಷ್ಪಾʼ ಚಿತ್ರದ ಹಾಡಿಗೆ ನಟಿ ಸಮಂತಾ ಪಡೆದಿರುವ ಸಂಭಾವನೆ

ಅಲ್ಲು ಅರ್ಜುನ್‌ ಅವರ ಪುಷ್ಪ: ದ ರೈಸ್‌ ನ ಊ ಅಂಟಾವ ಹಾಡು ಎಲ್ಲೆಡೆ ಸದ್ದು ಮಾಡ್ತಿದೆ‌. ಅದ್ರಲ್ಲೂ ಹಾಡಿನಲ್ಲಿ ಗ್ಲಾಮರಸ್ ಬೊಂಬೆಯಂತೆ ಕಾಣಿಸಿಕೊಂಡು, ಕುಣಿದು ಕುಪ್ಪಳಿಸಿರುವ ಸ್ಟಾರ್ ನಟಿ ಸಮಂತಾ ಈ ಹಾಡಿನ‌ ಮೂಲಕ ಮತ್ತಷ್ಟು ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದಾರೆ.

ಸಮಂತಾ ಈ ಹಾಡಿಗೆ ಪರ್ಫಾರ್ಮ್ ಮಾಡಲು ಹಿಂದೇಟಾಕಿದ್ರು, ಅಲ್ಲು ಅರ್ಜುನ್ ಜೊತೆ ಮಾತುಕತೆ ನಡೆಸಿದ ನಂತರ ಒಪ್ಪಿಕೊಂಡರು. ಆದರೆ ಅವರು ಊ ಅಂಟಾವ ಹಾಡಿಗೆ ಯೆಸ್ ಅಂದಿದ್ದಕ್ಕೆ ದೊಡ್ಡ ಮೊತ್ತವನ್ನೆ ಚಾರ್ಜ್ ಮಾಡಿದ್ದಾರೆ. ಸಮಂತಾ ಈ ಹಾಡಿಗೆ ಬರೋಬ್ಬರಿ ಐದು ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ ಎಂದು ಹಲವು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಸಮಂತಾ ಅವರ ಊ ಅಂಟಾವಾ ಹಾಡು ಅಭಿಮಾನಿಗಳಲ್ಲಿ ಮಾತ್ರವಲ್ಲದೆ ಸೆಲೆಬ್ರಿಟಿಗಳಲ್ಲಿಯೂ ಸಂಚಲನ ಮೂಡಿಸಿದೆ. ಇತ್ತೀಚೆಗೆ, ಕೃತಿ ಸನೋನ್ ಸಾಮಾಜಿಕ ಮಾಧ್ಯಮದಲ್ಲಿ ಹಾಡನ್ನು ಕೇಳುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಬಹಿರಂಗಪಡಿಸಿದ್ದರು.

ಆದರೆ ಈ ಹಾಡಿಗೆ ಹೆಜ್ಜೆಹಾಕಲು ಸಮಂತಾ ಒಪ್ಪಿರಲಿಲ್ಲ, ಖುದ್ದು ಸಿನಿಮಾದ ಹೀರೋ ಅಲ್ಲು ಅರ್ಜುನ್, ಸಮಂತಾಳನ್ನ ಒಪ್ಪಿಸಿದ್ದರು ಎಂದು IWMBUZZ ವರದಿ ಮಾಡಿದೆ. ಅಲ್ಲದೇ ಸಮಂತಾ ಮೂರು ನಿಮಿಷಗಳ ಈ ಡ್ಯಾನ್ಸ್ ನಂಬರ್ ಗೆ 5 ಕೋಟಿ ರೂ.‌ ಸಂಭಾವನೆ ಪಡೆದುಕೊಂಡಿದ್ದಾರೆ.

ಊ ಅಂಟಾವಾ ಹಾಡಿಗೆ ಮೆರುಗಾಗಿರುವುದೇ ಆ ಹಾಡಿನ ಡ್ಯಾನ್ಸ್ ಸ್ಟೆಪ್ಸ್. ಈ ಹಾಡಿನ ಚಿತ್ರೀಕರಣಕ್ಕೂ ಮುನ್ನಾ ಸಾಕಷ್ಟು ದಿನಗಳ ಕಾಲ ಸಮಂತಾ ಅಂಡ್ ಟೀಮ್ ಪ್ರಾಕ್ಟೀಸ್ ಮಾಡಿದ್ದಾರೆ‌. ಈ ರಿಹರ್ಸಲ್ ಕ್ಲಿಪ್ ಗಳನ್ನ ಸಮಂತಾ ಹಂಚಿಕೊಂಡಿದ್ದಾರೆ. ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆಯಲ್ಲಿ ಊ ಅಂಟಾವಾ ಹಾಡು ಮೂಡಿಬಂದಿದೆ. ತೆಲುಗಿನಲ್ಲಿ ಇಂದ್ರಾವತಿ ಚೌಹಾಣ್ ಹಾಡಿದ್ದರೆ, ತಮಿಳಿನ ಓ ಸೊಲ್ರಿಯಾ ಹಾಡಿಗೆ ಆಂಡ್ರಿಯಾ ಜೆರೆಮಿಯಾ ಅವರು ಧ್ವನಿ‌ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...