alex Certify 2022 ರ ಕುರಿತು ನಾಸ್ಟ್ರಡಾಮಸ್‌ ಭವಿಷ್ಯ…! ಕಾಲಜ್ಞಾನಿಯ ಪುಸ್ತಕದ ಅಂಶಗಳು ಮತ್ತೆ ಮುನ್ನೆಲೆಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2022 ರ ಕುರಿತು ನಾಸ್ಟ್ರಡಾಮಸ್‌ ಭವಿಷ್ಯ…! ಕಾಲಜ್ಞಾನಿಯ ಪುಸ್ತಕದ ಅಂಶಗಳು ಮತ್ತೆ ಮುನ್ನೆಲೆಗೆ

ಫ್ರೆಂಚ್‌ ಕಾಲಜ್ಞಾನಿ ಮೈಕೇಲ್ ಡಿ ನಾಸ್ಟ್ರಡಾಮಸ್‌ ತನ್ನ ’ಲೆಸ್ ಪ್ರಾಫೆಸಿಸ್’ ಪುಸ್ತಕದಲ್ಲಿ ಸಾವಿರಾರು ಊಹೆಗಳನ್ನು 465 ವರ್ಷಗಳ ಹಿಂದೆ ಬರೆದಿಟ್ಟಿದ್ದಾನೆ. 942 ಕವನ ಸಂಕಲನಗಳನ್ನು ಹೊಂದಿರುವ ಈ ಪುಸ್ತಕದಲ್ಲಿ ಭವಿಷ್ಯದ ಬಗ್ಗೆ ಬರೆಯಲಾಗಿದ್ದು, ಅವುಗಳಲ್ಲಿ ಬಹುತೇಕ ಎಲ್ಲವೂ ಸತ್ಯವಾಗಿವೆ ಎನ್ನಲಾಗುತ್ತದೆ.

ಫ್ರಾನ್ಸ್‌ನ ದಕ್ಷಿಣ ಭಾಗದ ಸೇಂಟ್ ರೆಮೇ ಡಿ ಪ್ರಾವೆನ್ಸ್‌ನಲ್ಲಿ 1503ರಲ್ಲಿ ಜನಿಸಿದ ನಾಸ್ಟ್ರಡಾಮಸ್‌ ಬರೆದ ’ಲೆಸ್ ಪ್ರಾಫೆಸಿಸ್‌’ ಪುಸ್ತಕವನ್ನು 1555ರಲ್ಲಿ ಮೊದಲ ಬಾರಿಗೆ ಮುದ್ರಿಸಲಾಯಿತು.

ಈತನ ಊಹೆಗಳ ಸತ್ಯಾಸತ್ಯತೆಗಳನ್ನು ಪರೀಶೀಲಿಸಿ ನೋಡಲು ದೊಡ್ಡ ದೊಡ್ಡ ಪಂಡಿತರಿಗೇ ಸವಾಲಾಗಿದ್ದರೂ, ಜಾಗತಿಕ ಇತಿಹಾಸದ ಬಹು ದೊಡ್ಡ ಘಟನಾವಳಿಗಳ ಕುರಿತಂತೆ ಶತಮಾನಗಳ ಮುಂಚೆಯೇ ನಾಸ್ಟ್ರಡಾಮಸ್ ಹೇಳಿದ್ದ ಉಲ್ಲೇಖಗಳು ಇವೆ.

‌ಎಲ್‌ಐಸಿ ಜೀವನ್ ಶಿರೋಮಣಿ: 4 ವರ್ಷ ಪ್ರೀಮಿಯಂ ಕಟ್ಟಿ ಒಂದು ಕೋಟಿ ರೂ. ರಿಟರ್ನ್ಸ್ ಪಡೆಯಿರಿ

ಅಡಾಲ್ಫ್ ಹಿಟ್ಲರನ ಏರುಗತಿ, ಲಂಡನ್‌ನ ಮಹಾ ಅಗ್ನಿ ದುರಂತ, ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿರ ಹತ್ಯೆ, 9/11 ಭಯೋತ್ಪಾದಕ ದಾಳಿಗಳು ಸೇರಿದಂತೆ ಅನೇಕ ವಿಷಯಗಳ ಕುರಿತು ನಾಸ್ಟ್ರಡಾಮಸ್‌ ಮುಂಚೆಯೇ ಅಂದಾಜಿಸಿದ್ದರು ಎನ್ನಲಾಗಿದೆ.

3797ನೇ ಇಸವಿಯವರೆಗೂ ಜಗತ್ತಿನಲ್ಲಿ ಸಂಭವಿಸಬಹುದಾದ ದೊಡ್ಡ ಘಟನಾವಳಿಗಳ ಕುರಿತಂತೆ ನಾಸ್ಟ್ರಡಾಮಸ್‌ ಭವಿಷ್ಯ ನುಡಿದಿದ್ದು, 2022ನೇ ಇಸವಿಗೆ ಈತ ಏನು ಹೇಳಿದ್ದ ಎಂಬ ಕುತೂಹಲ ಅನೇಕ ಜನರಲ್ಲಿ ಮೂಡಿದೆ.

ಉಲ್ಕಾಪಾತ

2022ರಲ್ಲಿ ಅನೇಕ ಅಪಾಯಗಳಿದ್ದು, ಉಲ್ಕಾಪಾತಗಳು ಸಂಭವಿಸಲಿದ್ದು, ಇವುಗಳಿಂದ ಭಾರೀ ನಷ್ಟಗಳು ಆಗಲಿವೆ ಎಂದು ನಾಸ್ಟ್ರಡಾಮ್ ನುಡಿದಿದ್ದಾನೆ. ಆಗಸದಲ್ಲಿ ಬಹುದೊಡ್ಡ ಅಗ್ನಿಸ್ಪೋಟಗಳು ಸಂಭವಿಸಲಿದ್ದು, ಇವುಗಳ ಪೈಕಿ ಉಲ್ಕಾಸ್ಫೋಟವೂ ಇದೆ ಎಂದು ಈ ಕಾಲಜ್ಞಾನಿ ತಿಳಿಸಿದ್ದಾನೆ.

ಹಣದುಬ್ಬರ

2022ರ ಕುರಿತಂತೆ ನಾಸ್ಟ್ರಡಾಮಸ್ ಹೇಳಿರುವ ಮತ್ತೊಂದು ಸಂಗತಿ ಹಣದುಬ್ಬರ. ಈ ವರ್ಷದಲ್ಲಿ ಹಣದುಬ್ಬರವು ನಿಯಂತ್ರಣ ಮೀರಿ ಏರಲಿದ್ದು, ಡಾಲರ್‌ ಮೌಲ್ಯವನ್ನು ಕುಸಿಯುವಂತೆ ಮಾಡಲಿದೆ ಎಂದಿದ್ದಾನೆ ನಾಸ್ಟ್ರಾಡಾಮಸ್.

ಫ್ರಾನ್ಸ್‌ನಲ್ಲಿ ಸಂಕಷ್ಟ

ಭಾರೀ ಮಾರುತದಿಂದಾಗಿ ಪ್ರವಾಹಗಳು, ಅಗ್ನಿಅನಾಹುತಗಳು ಹಾಗೂ ಬರಗಾಲ ಸೃಷ್ಟಿಯಾಗಲಿರುವ ಕಾರಣ ಫ್ರಾನ್ಸ್ ಸೇರಿದಂತೆ ಜಗತ್ತಿನ ಅನೇಕ ಕಡೆಗಳಲ್ಲಿ ಸಂಕಷ್ಟದ ಪರಿಸ್ಥಿತಿ ನೆಲೆಸಲಿದೆಯಂತೆ.

ಮಾನವರನ್ನು ನಿಯಂತ್ರಿಸಲಿರುವ ಕಂಪ್ಯೂಟರ್‌ಗಳು

ಕೃತಕ ಬುದ್ಧಿಮತ್ತೆ ಹಾಗೂ ಕಂಪ್ಯೂಟರುಗಳು ಮಾನವರನ್ನು ನಿಯಂತ್ರಿಸುವ ಸಂಗತಿಗಳನ್ನು ಅನೇಕ ಸಿನೆಮಾಗಳು ಹಾಗೂ ಸೈ-ಫೈ ಕಾದಂಬರಿಗಳಲ್ಲಿ ಓದಿದ್ದೇವೆ. 2022ರಲ್ಲಿ ಕೃತಕ ಬುದ್ಧಿಮತ್ತೆ ಜಗತ್ತನ್ನು ಆಳುವ ಸಾಧ್ಯತೆಯನ್ನು ನಾಸ್ಟ್ರಡಾಮಸ್ ಅದಾಗಲೇ ಊಹಿಸಿದ್ದಾನೆ.

ಮೇಲ್ಕಂಡ ಎಲ್ಲವೂ ಊಹೆಗಳಾಗಿದ್ದರೂ ಸಹ ವಾಸ್ತವಿಕವಾಗಿ ಇವೆಲ್ಲವೂ ಸಾಧ್ಯವಾಗಬಹುದಾದಂಥವೂ ಆಗಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...