alex Certify ‌ಎಲ್‌ಐಸಿ ಜೀವನ್ ಶಿರೋಮಣಿ: 4 ವರ್ಷ ಪ್ರೀಮಿಯಂ ಕಟ್ಟಿ ಒಂದು ಕೋಟಿ ರೂ. ರಿಟರ್ನ್ಸ್ ಪಡೆಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ಎಲ್‌ಐಸಿ ಜೀವನ್ ಶಿರೋಮಣಿ: 4 ವರ್ಷ ಪ್ರೀಮಿಯಂ ಕಟ್ಟಿ ಒಂದು ಕೋಟಿ ರೂ. ರಿಟರ್ನ್ಸ್ ಪಡೆಯಿರಿ

ಹೂಡಿಕೆ ಮಾಡಿ ಒಳ್ಳೆ ರಿಟರ್ನ್ಸ್ ಪಡೆಯಲು ಶೇರು ಮಾರುಕಟ್ಟೆ ಸಾಕಷ್ಟು ಒಳ್ಳೆಯ ಅವಕಾಶಗಳನ್ನು ನೀಡುತ್ತಿದೆ. ಆದರೆ ನಿಮ್ಮ ದುಡ್ಡನ್ನು ಸುರಕ್ಷಿತವಾದ ಆಯ್ಕೆ ಮೇಲೆ ಹೂಡಿ, ಒಳ್ಳೆಯ ರಿಟರ್ನ್ಸ್ ಪಡೆದುಕೊಳ್ಳಲು ಎಲ್‌ಐಸಿಯ ಜೀವನ್ ಶಿರೋಮಣಿ ಯೋಜನೆ ಉತ್ತಮವಾದುದಾಗಿದೆ.

ಡಿಸೆಂಬರ್‌ 19, 2017ರಲ್ಲಿ ಚಾಲ್ತಿಗೆ ಬಂದ ಈ ಯೋಜನೆಯಲ್ಲಿ ಕನಿಷ್ಠ ಒಂದು ಕೋಟಿ ರೂ.ಗಳಷ್ಟು ಗ್ಯಾರಂಟಿಯನ್ನು ನೀವು ಪಡೆದುಕೊಳ್ಳಬಹುದಾಗಿದೆ. ಪಾಲಿಸಿಯ ಕನಿಷ್ಠ ರಿಟರ್ನ್ಸ್ ಒಂದು ಕೋಟಿ ರೂ.ಗಳಾಗಿದೆ.

ನಿರ್ಬಂಧಿತ ಪ್ರೀಮಿಯಂ ಪಾವತಿಯ ಈ ಯೋಜನೆಯನ್ನು ಮಾರುಕಟ್ಟೆಯೊಂದಿಗೆ ಜೋಡಿಸಲಾಗಿದೆ. ಈ ಯೋಜನೆಯನ್ನು ನಿರ್ದಿಷ್ಟವಾಗಿ ಅಗಾಧವಾಗಿ ಆದಾಯ ಹೊಂದಿರುವ ಮಂದಿಗೆಂದು ರೂಪಿಸಲಾಗಿದೆ. ಅನಾರೋಗ್ಯದ ವಿಚಾರದಲ್ಲಿ ಈ ಯೋಜನೆ ನಿಮ್ಮನ್ನು ಕವರ್‌ ಮಾಡಲಿದ್ದು, ಈ ಸಂಬಂಧ ಮೂರು ಷರತ್ತುಗಳು ಇವೆ.

ಬೆಚ್ಚಿಬೀಳಿಸುತ್ತೆ ಕಾಯಿಲೆ ಗುಣಪಡಿಸಲು ಈ ಚೈನೀಸ್ ಥೆರಪಿ ಅಳವಡಿಸುವ ವಿಧಾನ…!

ಪಾಲಿಸಿ ಅವಧಿಯಲ್ಲಿ ಪಾಲಿಸಿದಾರರು ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಜೀವನ್ ಶಿರೋಮಣಿ ಯೋಜನೆಯ ಮೂಲಕ ಆರ್ಥಿಕ ಅನುಕೂಲಗಳು ಸಿಗಲಿವೆ. ಪಾಲಿಸಿದಾರರಿಗೆ ಏನೂ ಆಗದೇ ಇದ್ದಲ್ಲಿ, ಮೆಚ್ಯೂರಿಟಿ ಅವಧಿಯಲ್ಲಿ ದೊಡ್ಡದೊಂದು ಮೊತ್ತ ಅವರ ಕೈಗೆ ಸೇರಲಿದೆ.

ಪಾಲಿಸಿದಾರರಿಗೆ ಸಿಗಲಿರುವ ಪ್ರಯೋಜನಗಳು ಇಂತಿವೆ:

1. 14 ವರ್ಷದ ಪಾಲಿಸಿ – 10ನೇ ಮತ್ತು 12ನೇ ವರ್ಷದಲ್ಲಿ ಖಾತ್ರಿಪಡಿಸಲಾದ ದುಡ್ಡಿನ 30-30%.

2. 16 ವರ್ಷದ ಪಾಲಿಸಿ – 12ನೇ ಹಾಗೂ 14ಮೇ ವರ್ಷದಲ್ಲಿ ಖಾತ್ರಿಪಡಿಸಲಾದ ದುಡ್ಡಿನ 35-35%.

3. 18 ವರ್ಷದ ಪಾಲಿಸಿ – 14ನೇ ಹಾಗೂ 16ನೇ ವರ್ಷದಲ್ಲಿ ಖಾತ್ರಿಪಡಿಸಲಾದ ದುಡ್ಡಿನ 40-40%.

4. 20 ವರ್ಷದ ಪಾಲಿಸಿ – 16ನೇ ಹಾಗೂ 18ನೇ ವರ್ಷದಲ್ಲಿ ಖಾತ್ರಿಪಡಿಸಲಾದ ದುಡ್ಡಿನ 45-45%.

ಸಿದ್ಧರಾಮಯ್ಯ, ಡಿಕೆಶಿಗೆ ಈಶ್ವರಪ್ಪ ಸವಾಲ್: ಬಿಜೆಪಿಗೆ ಅಧಿಕಾರ ದಾಹ ಎಂಬ ಹೇಳಿಕೆಗೆ ತಿರುಗೇಟು

ಈ ಪಾಲಿಸಿಯಲ್ಲಿರುವ ಮತ್ತೊಂದು ವಿಶೇಷ ಸಾಧ್ಯತೆ ಎಂದರೆ, ಗ್ರಾಹಕರು ತಮ್ಮ ಪಾಲಿಸಿಯ ಮೌಲ್ಯದ ಮೇಲೆ ಸಾಲ ಪಡೆಯಬಹುದಾಗಿದೆ. ಆದರೆ ಈ ಸಾಲವನ್ನು ಎಲ್‌ಐಸಿಯ ಷರತ್ತುಗಳು ಮತ್ತು ನಿಬಂಧನೆಗಳ ಮೇಲೆ ಮಾತ್ರವೇ ನೀಡಲಾಗುವುದು. ಪಾಲಿಸಿಯ ಸಾಲವನ್ನು ಆಗಾಗ ನಿರ್ಧರಿಸಲಾಗುತ್ತದೆ.

ಷರತ್ತುಗಳು ಮತ್ತು ನಿಬಂಧನೆಗಳು

1. ಖಾತ್ರಿಯಾದ ಕನಿಷ್ಠ ಮೊತ್ತ – ಒಂದು ಕೋಟಿ ರೂಪಾಯಿ.

2. ಖಾತ್ರಿಯಾದ ಗರಿಷ್ಠ ಮೊತ್ತ – ಮಿತಿ ಇಲ್ಲ (5 ಲಕ್ಷ ರೂಪಾಯಿಗಳ ಗುಣಕದಲ್ಲಿ)

3. ಪಾಲಿಸಿ ಅವಧಿ – 14, 16, 18 ಮತ್ತು 20 ವರ್ಷಗಳು.

4. ಪ್ರೀಮಿಯಂ ಪಾವತಿ ಮಾಡುವ ಅವಧಿ – 4 ವರ್ಷಗಳು.

5. ಪಾಲಿಸಿ ಮಾಡಿಸಲು ಕನಿಷ್ಠ ವಯಸ್ಸು – 18 ವರ್ಷಗಳು.

6. ಪಾಲಿಸಿ ಮಾಡಿಸಲು ಗರಿಷ್ಠ ವಯೋಮಾನ – 14 ವರ್ಷದ ಪಾಲಿಸಿಗೆ 55 ವರ್ಷಗಳು, 16 ವರ್ಷದ ಪಾಲಿಸಿಗೆ 51 ವರ್ಷಗಳು, 18 ವರ್ಷದ ಪಾಲಿಸಿಗೆ 48 ವರ್ಷಗಳು, 20 ವರ್ಷದ ಪಾಲಿಸಿಗೆ 45 ವರ್ಷಗಳು

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...