alex Certify BREAKING: ಅಮೆರಿಕ ವಿಜ್ಞಾನಿಗಳ ಮುಡಿಗೆ ʼನೊಬೆಲ್ʼ​ ಪ್ರಶಸ್ತಿ ಗೌರವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಅಮೆರಿಕ ವಿಜ್ಞಾನಿಗಳ ಮುಡಿಗೆ ʼನೊಬೆಲ್ʼ​ ಪ್ರಶಸ್ತಿ ಗೌರವ

ವೈದ್ಯಕೀಯ ಕ್ಷೇತ್ರಕ್ಕೆ ನೀಡಲಾಗುವ ನೊಬೆಲ್​ ಪ್ರಶಸ್ತಿ ಗೌರವಕ್ಕೆ ಅಮೆರಿಕದ ವಿಜ್ಞಾನಿಗಳಾದ ಡೇವಿಡ್​ ಜೂಲಿಯಸ್​ ಹಾಗೂ ಆರ್ಡೆಮ್​ ಪಟಪೂಟಿಯನ್​​ ಪಾತ್ರರಾಗಿದ್ದಾರೆ.

ತಾಪಮಾನ ಹಾಗೂ ಸ್ಪರ್ಶಕ್ಕಾಗಿ ರೆಸೆಪ್ಟರ್​ಗಳನ್ನು ಕಂಡು ಹಿಡಿದ ಕಾರಣಕ್ಕೆ ಇವರಿಗೆ ನೊಬೆಲ್​ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನೊಬೆಲ್​ ಕಮಿಟಿಯ ಸೆಕ್ರೆಟರಿ ಜನರಲ್​​​ ಥೋಮಸ್​ ಪರ್ಲ್​ಮನ್​​​ ವಿಜೇತರ ಹೆಸರುಗಳನ್ನು ಇಂದು ಘೋಷಣೆ ಮಾಡಿದ್ದಾರೆ.

ʼನೊಬೆಲ್ʼ ಬಹುಮಾನದ ಕುರಿತು ನಿಮಗೆ ತಿಳಿದಿರಲಿ ಈ ಇಂಟ್ರಸ್ಟಿಂಗ್‌ ಮಾಹಿತಿ

ಶಾಖ ಶೀತ ಹಾಗೂ ಸ್ಪರ್ಶವನ್ನು ಗ್ರಹಿಸಲು ನಮಗಿರುವ ಶಕ್ತಿಯು ನಿಜಕ್ಕೂ ತುಂಬಾ ಅವಶ್ಯಕವಾಗಿದೆ. ಇದು ನಮಗೆ ಸುತ್ತಲಿನ ಪ್ರಪಂಚದ ಜೊತೆ ಸಂವಹನ ನಡೆಸಲು ಸಹಕಾರಿಯಾಗಿದೆ. ಆದರೆ ತಾಪಮಾನ ಮತ್ತು ಒತ್ತಡವನ್ನು ಗ್ರಹಿಸಲು ನರ ಪ್ರಚೋದನೆಗಳನ್ನು ಹೇಗೆ ಪ್ರಾರಂಭಿಸಲಾಗುತ್ತದೆ ? ಈ ವರ್ಷದ ನೊಬೆಲ್ ಪ್ರಶಸ್ತಿ ವಿಜೇತರು ಈ ಗೊಂದಲಕ್ಕೆ ಪರಿಹಾರ ನೀಡಿದ್ದಾರೆ. ದೈನದಿಂದ ಜೀವನದಲ್ಲಿ ಈ ಗ್ರಹಿಸುವ ಸಾಮರ್ಥ್ಯವನ್ನು ನಾವು ಒಂದು ಸಾಮಾನ್ಯ ಪ್ರಕ್ರಿಯೆ ಎಂದು ಭಾವಿಸಿಬಿಡುತ್ತೇವೆ ಎಂದು ನೋಬೆಲ್​ ತೀರ್ಪುಗಾರರು ಹೇಳಿದ್ದಾರೆ.‌

ʼನೊಬೆಲ್ʼ ಪ್ರಶಸ್ತಿ ವಿಜೇತ ವಿಜ್ಞಾನಿಯ ಸ್ವಾರಸ್ಯಕರ ಸಂಗತಿ 11 ವರ್ಷಗಳ ಬಳಿಕ ಬಹಿರಂಗ

ಜೂಲಿಯಸ್​​ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಉಪನ್ಯಾಸಕರಾಗಿದ್ದಾರೆ. ಪಟಪೂಟಿಯನ್​​ ಕ್ಯಾಲಿಫೋರ್ನಿಯಾದ ಸ್ಕ್ರಿಪ್ಸ್​ ರಿಸರ್ಚ್​ನ ಉಪನ್ಯಾಸಕರಾಗಿದ್ದಾರೆ. ಇವರಿಬ್ಬರು ನೊಬೆಲ್​ ಪ್ರಶಸ್ತಿಯ ಜೊತೆ ಬರುವ 1.1 ಮಿಲಿಯನ್​ ಡಾಲರ್​ ಮೊತ್ತಕ್ಕೆ ಸಮಾನ ಹಕ್ಕುದಾರರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...