alex Certify ಕಾರಿನ ಬದಲು ಪಲ್ಲಕ್ಕಿ ಏರಿದ ಜೋಡಿ…! ತಾಳೆ ಎಲೆಗಳಿಂದ ಮಾಡಿದ ಕಿರೀಟ ಧರಿಸಿದ ವರನಿಂದ ಪರಿಸರ ಕಾಳಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನ ಬದಲು ಪಲ್ಲಕ್ಕಿ ಏರಿದ ಜೋಡಿ…! ತಾಳೆ ಎಲೆಗಳಿಂದ ಮಾಡಿದ ಕಿರೀಟ ಧರಿಸಿದ ವರನಿಂದ ಪರಿಸರ ಕಾಳಜಿ

No to Car, Sehra Made of Palm Leaves: MP Cop Takes Love For Environment To Next  Level At His Wedding | See Picsಮಧ್ಯಪ್ರದೇಶದಲ್ಲಿ ಆರಕ್ಷಕರೊಬ್ಬರು ತನ್ನ ಮದುವೆಯಂದು ಪರಿಸರದ ಮೇಲಿನ ಪ್ರೀತಿಯನ್ನು ತೋರ್ಪಡಿಸಿದ್ದಾರೆ. ಪೃಥ್ವಿಪುರ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಒಪಿ) ಸಂತೋಷ್ ಪಟೇಲ್ ಅವರ ವಿಶಿಷ್ಠ ವಿವಾಹ ಸಮಾರಂಭವು, ಸಾಮಾಜಿಕ ಮಾಧ್ಯಮದಲ್ಲಿ ಅನೇಕರ ಗಮನ ಸೆಳೆದಿದೆ.

ಪೊಲೀಸ್ ಅಧಿಕಾರಿ ಸಂತೋಷ್ ಒಬ್ಬ ಪರಿಸರ ಪ್ರೇಮಿಯಾಗಿರುವುದರಿಂದ ತನ್ನ ಮದುವೆಯಲ್ಲಿ ಪರಿಸರದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಪರಿಸರ ಮಾಲಿನ್ಯ ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ, ತನ್ನ ಮದುವೆಯ ಸಮಯದಲ್ಲಿ ಕಾರನ್ನು ಕೂಡ ಪೊಲೀಸ್ ಅಧಿಕಾರಿ ಬಳಸಿಲ್ಲ. ದುಬಾರಿ ಮತ್ತು ಮನಮೋಹಕ ಸೆಹ್ರಾಗೆ ನೋ ಎಂದ ಅಧಿಕಾರಿಯು, ತಾಳೆ ಎಲೆಗಳ ಕಿರೀಟವನ್ನು ಧರಿಸಿದ್ದಾರೆ.

ಮದುವೆಯಲ್ಲಿ ಕಾರು ಇಲ್ಲದ ಕಾರಣ ವಧು-ವರರಿಗೆ ಪಲ್ಲಕ್ಕಿ ಬಳಸಲಾಗಿತ್ತು. ಪತ್ನಿಯ ಜೊತೆ ಕಾರಿನ ಬದಲಾಗಿ ಬೈಸಿಕಲ್ ಮುಖಾಂತರ ಇವರು ಪಯಣಿಸಿದ್ದು, ವಿವಿಧ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಜಾಗತಿಕ ಎಚ್ಚರಿಕೆಯ ಆತಂಕದ ನಡುವೆ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಅವರು ಈ ರೀತಿಯ ಸಂದೇಶ ಕಳುಹಿಸಲು ನಿರ್ಧರಿಸಿದ್ದರು. ನೆಟ್ಟಿಗರು ಕೂಡ ಪೊಲೀಸ್ ಅಧಿಕಾರಿಯ ಪರಿಸರ ಕಾಳಜಿಯನ್ನು ಕೊಂಡಾಡಿದ್ದಾರೆ.

ಸಂತೋಷ್ ಪಟೇಲ್ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಅಜಯ್‌ಗಢ್‌ನ ದೇವ್ ಗ್ರಾಮದ ನಿವಾಸಿಯಾಗಿದ್ದು, ನವೆಂಬರ್ 29 ರಂದು ಬುಂದೇಲಿ ಸಂಪ್ರದಾಯದ ಪ್ರಕಾರ ಅವರ ಮದುವೆ ನಡೆಯಿತು.

No to Car, Sehra Made of Palm Leaves: MP Cop Takes Love For Environment To Next  Level At His Wedding | See Pics

ಮದುವೆಯ ಸಮಯದಲ್ಲಿ ಎಲ್ಲಾ ವಿಧಿವಿಧಾನಗಳು ಸರಳ ಮತ್ತು ಸಾಂಪ್ರದಾಯಿಕ ಶೈಲಿಯಲ್ಲಿ ಹೆಚ್ಚು ಅಬ್ಬರವಿಲ್ಲದೆ ನಡೆಸಲಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...