alex Certify ಕೊರೊನಾ ನಡುವೆಯೂ ಬುದ್ಧಿ ಕಲಿಯದ ಜನ..! ಸಾಮಾಜಿಕ ಅಂತರ ಮರೆತು ಪ್ರವಾಸಿ ತಾಣದಲ್ಲಿ ಮೋಜು-ಮಸ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ನಡುವೆಯೂ ಬುದ್ಧಿ ಕಲಿಯದ ಜನ..! ಸಾಮಾಜಿಕ ಅಂತರ ಮರೆತು ಪ್ರವಾಸಿ ತಾಣದಲ್ಲಿ ಮೋಜು-ಮಸ್ತಿ

ದೇಶದಲ್ಲಿ ಕೊರೊನಾ 2ನೆ ಅಲೆಯ ಭೀಕರತೆ ಎಷ್ಟರ ಮಟ್ಟಿಗೆ ಇತ್ತು ಅನ್ನೋದನ್ನ ಇನ್ನೊಮ್ಮೆ ವಿವರಿಸಿ ಹೇಳಬೇಕಾದದ್ದೇನಿಲ್ಲ. ಸಾಕಷ್ಟು ಸಾವು ನೋವಿನ ಬಳಿಕ ಇದೀಗ ಕೊರೊನಾ 2ನೆ ಅಲೆಯ ಆರ್ಭಟ ಇಳಿಮುಖವಾಗುತ್ತಿದೆ. ಆದರೆ ಕೊರೊನಾ ಮೂರನೇ ಅಲೆಯ ಬಗ್ಗೆಯೂ ತಜ್ಞರು ಮುನ್ಸೂಚನೆಯನ್ನ ನೀಡುತ್ತಲೇ ಇದ್ದಾರೆ.

ಆದರೆ ಎಷ್ಟೇ ಪಾಠ ಕಲಿತರೂ ಜನತೆಗೆ ಮಾತ್ರ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಕೊರೊನಾ ಕೇಸ್​ಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆಯೇ ಸಿಟಿ ಮಂದಿ ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ್​ನ ಹಿಲ್​ ಸ್ಟೇಷನ್​​ನತ್ತ ಪ್ರಯಾಣ ಬೆಳೆಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮನಾಲಿಯಲ್ಲಿ ಕ್ಲಿಕ್ಕಿಸಲಾದ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು ಇದಲ್ಲಿ ಮನಾಲಿಯ ಹೋಟೆಲ್​, ರೆಸ್ಟಾರೆಂಟ್​ ಸೇರಿದಂತೆ ಹಲವೆಡೆ ಜನರು ಸಾಮಾಜಿಕ ಅಂತರ ಮರೆತದ್ದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು.

ಇದೀಗ ಉತ್ತರಾಖಂಡ್​ನಲ್ಲಿ ಇಂತದ್ದೇ ಘಟನೆಯೊಂದು ನಡೆದಿದ್ದು ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ. ಮಸ್ಸೂರಿಯ ಕೆಂಪ್ಟಿ ಜಲಪಾತದಲ್ಲಿ ಕಿಕ್ಕಿರಿದು ಸೇರಿದ ಜನತೆ ಜಲಪಾತದಲ್ಲಿ ಸಖತ್​ ಎಂಜಾಯ್​ ಮಾಡ್ತಿದ್ದಾರೆ. ಈ ವಿಡಿಯೋವನ್ನ ನೋಡುತ್ತಿದ್ದ ಕೊರೊನಾ ಮಾರ್ಗಸೂಚಿಗಳನ್ನ ಗಾಳಿಗೆ ತೂರಿರೋದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಮಾಸ್ಕ್​ಗಳನ್ನ ಧರಿಸದೇ ಸಾಮಾಜಿಕ ಅಂತರವನ್ನ ಕಾಪಾಡದೇ ಪ್ರವಾಸಿಗರು ಬೇಜವಾಬ್ದಾರಿತನವನ್ನ ಪ್ರದರ್ಶಿಸಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ಇದೀಗ ಏಕಕಾಲಕ್ಕೆ 50 ಮಂದಿಗೆ ಮಾತ್ರ ಪ್ರವೇಶ ಎಂಬ ನಿಯಮವನ್ನು ಜಾರಿಗೆ ತರಲಾಗಿದೆ.

— Infobug (@InfobugI) July 7, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...