alex Certify ಯಾರೂ ಬೇಧಿಸಲು ಸಾಧ್ಯವಾಗಿಲ್ಲ ʼಪುರಿ ಜಗನ್ನಾಥʼ ದೇವಾಲಯದ ಈ 5 ರಹಸ್ಯ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾರೂ ಬೇಧಿಸಲು ಸಾಧ್ಯವಾಗಿಲ್ಲ ʼಪುರಿ ಜಗನ್ನಾಥʼ ದೇವಾಲಯದ ಈ 5 ರಹಸ್ಯ…..!

ಪುರಿಯ ಜಗನ್ನಾಥ ದೇವಾಲಯವು ವಿಷ್ಣುವಿನ ಎಂಟನೇ ಅವತಾರವಾದ ಶ್ರೀಕೃಷ್ಣನಿಗೆ ಸಮರ್ಪಿತವಾಗಿದೆ. ಈ ದೇವಾಲಯ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಾಕಷ್ಟು ಖ್ಯಾತಿಯನ್ನು ಗಳಿಸಿದೆ. 12ನೇ ಶತಮಾನದ ದೇವಸ್ಥಾನವಿದು. ಇಲ್ಲಿನ ಈ ದೇವಾಲಯವು ತನ್ನ ಅನೇಕ ರಹಸ್ಯಗಳಿಗೆ ಬಹಳ ಪ್ರಸಿದ್ಧವಾಗಿದೆ. ಈ ರಹಸ್ಯವನ್ನು ಇದುವರೆಗೆ ಯಾರಿಂದಲೂ ಬೇಧಿಸಲು ಸಾಧ್ಯವಾಗಿಲ್ಲ.

ಸಾಗರ ಅಲೆಗಳ ಸದ್ದು

ಜಗನ್ನಾಥ ದೇಗುಲವನ್ನು ಪ್ರವೇಶಿಸಿದ ತಕ್ಷಣ ಸಮುದ್ರದ ಅಲೆಗಳ ಸದ್ದು ಕೇಳಿಸುವುದಿಲ್ಲ ಎಂದು ಹೇಳಲಾಗುತ್ತದೆ. ದೇವಸ್ಥಾನದಿಂದ ಹೊರಗೆ ಬಂದ ತಕ್ಷಣ ಮತ್ತೆ ಅಲೆಗಳ ಸದ್ದು ಕೇಳಿಸುತ್ತದೆ. ದೇವಾಲಯದೊಳಗೆ ಜನರು ಶಾಂತಿಯಿಂದ ಇರಬೇಕೆಂದು ಸುಭದ್ರಾ ದೇವಿಯು ಹಾರೈಸುತ್ತಾಳೆ, ಇದೇ ಕಾರಣಕ್ಕೆ ಕಡಲ ಮೊರೆತ ಕೇಳುವುದಿಲ್ಲ ಎಂಬ ನಂಬಿಕೆಯಿದೆ.

ದೇವಾಲಯದ ಮೇಲೆ ಪಕ್ಷಿಗಳು ಹಾರುವುದಿಲ್ಲ

ವಾಸ್ತವವಾಗಿ, ಪಕ್ಷಿಗಳಿಗೆ ಆಕಾಶದಲ್ಲಿ ಯಾವುದೇ ಮಿತಿ ಅಥವಾ ಅಡಚಣೆಯಿಲ್ಲ. ಜಗನ್ನಾಥ ದೇವಾಲಯದ ಮೇಲ್ಭಾಗದಲ್ಲಿ ಮಾತ್ರ ಯಾವುದೇ ಪಕ್ಷಿಯಾಗಲಿ ಅಥವಾ ವಿಮಾನವಾಗಲಿ ಹಾರಲು ಸಾಧ್ಯವಿಲ್ಲವಂತೆ. ಇದನ್ನು ದೇವಾಲಯಕ್ಕೆ ಸಂಬಂಧಿಸಿದ ರಹಸ್ಯವೆಂದು ಪರಿಗಣಿಸಲಾಗಿದೆ. ಇಲ್ಲಿಯವರೆಗೆ ಜನರು ಇದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ.

ದೇವಾಲಯದ ನೆರಳು

ಜಗನ್ನಾಥ ದೇವಾಲಯಕ್ಕೆ ಸಂಬಂಧಿಸಿದ ಮತ್ತೊಂದು ರಹಸ್ಯವೆಂದರೆ ಈ ದೇವಸ್ಥಾನದ ನೆರಳು ಗೋಚರಿಸುವುದಿಲ್ಲ. ದೇವಸ್ಥಾನದ ಮೇಲೆ ಸೂರ್ಯನ ಬೆಳಕು ಬಿದ್ದರೂ ಅದರ ನೆರಳು ಕಾಣುವುದಿಲ್ಲ. ಇದು  ನಿಗೂಢತೆಗೆ ಕಾರಣವಾಗಿದೆ.

ಜಗನ್ನಾಥ ದೇವಾಲಯ ಚಕ್ರ

ದೇವಾಲಯದ ಮೇಲ್ಭಾಗದಲ್ಲಿ ಸ್ಥಾಪಿಸಲಾದ ಚಕ್ರವು ಸರಿಸುಮಾರು ಒಂದು ಟನ್ ತೂಗುತ್ತದಂತೆ. ಆದರೆ ಈ ಚಕ್ರಕ್ಕೆ ಸಂಬಂಧಿಸಿದ ರಹಸ್ಯವೆಂದರೆ ಅದನ್ನು ಯಾರು ನೋಡಿದರೂ ಅದು ಒಂದೇ ದಿಕ್ಕಿನಲ್ಲಿ ತಿರುಗುತ್ತದೆ. ದೇವಾಲಯದ ಈ ಚಕ್ರವನ್ನು 12 ನೇ ಶತಮಾನದ ಜನರು ಸ್ಥಾಪಿಸಿದ್ದಾರೆ ಎಂದು ಹೇಳಲಾಗುತ್ತದೆ.

ಪ್ರಸಾದಕ್ಕೆ ಸಂಬಂಧಿಸಿದ ನಿಗೂಢತೆ

ಪ್ರತಿ ವರ್ಷ ಲಕ್ಷಾಂತರ ಭಕ್ತರು ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ರಥಯಾತ್ರೆಯ ಸಮಯದಲ್ಲಿ ಭಕ್ತಸಾಗರವೇ ಹರಿದುಬರುತ್ತದೆ. ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದಾಗಲೂ ಇಲ್ಲಿ ಪ್ರಸಾದಕ್ಕೆ ಕೊರತೆಯಾಗುವುದಿಲ್ಲ ಮತ್ತು ಪ್ರಸಾದ ವ್ಯರ್ಥವಾಗುವುದಿಲ್ಲ.

ಸದ್ಯ ಜಗನ್ನಾಥ ದೇವಾಲಯದಲ್ಲಿ ಹೊಸ ಡ್ರೆಸ್‌ಕೋಡ್‌ ಜಾರಿ ಮಾಡಲಾಗಿದೆ. ಹಾಫ್ ಪ್ಯಾಂಟ್, ಹರಿದ ಜೀನ್ಸ್, ಸ್ಕರ್ಟ್ ಮತ್ತು ಸ್ಲೀವ್‌ಲೆಸ್ ಬಟ್ಟೆಗಳನ್ನು ಧರಿಸಿ ದೇವಸ್ಥಾನಕ್ಕೆ ಬರುವ ಭಕ್ತರನ್ನು ನಿಷೇಧಿಸಲಾಗಿದೆ. ಪುರುಷರು ಧೋತಿ ಅಥವಾ ಪಂಚೆ ಧರಿಸಿ ಬರಬೇಕು. ಮಹಿಳೆಯರು ಸೀರೆ, ಸಲ್ವಾರ್-ಕಮೀಜ್ ಇತ್ಯಾದಿಗಳನ್ನು ಧರಿಸಿ ಮಾತ್ರ ದೇವಾಲಯವನ್ನು ಪ್ರವೇಶಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...