alex Certify ಕೊರೊನಾ ನೆಪದಲ್ಲಿ ಶಾಲೆಗಳ ಬಾಗಿಲು ಮುಚ್ಚುವ ಅಗತ್ಯವೇ ಇಲ್ಲ: ವಿಶ್ವಬ್ಯಾಂಕ್‌ ನಿರ್ದೇಶಕರ ಸ್ಪಷ್ಟ ನುಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ನೆಪದಲ್ಲಿ ಶಾಲೆಗಳ ಬಾಗಿಲು ಮುಚ್ಚುವ ಅಗತ್ಯವೇ ಇಲ್ಲ: ವಿಶ್ವಬ್ಯಾಂಕ್‌ ನಿರ್ದೇಶಕರ ಸ್ಪಷ್ಟ ನುಡಿ

ಕೊರೊನಾ ಮೂರನೇ ಅಲೆ ಎದ್ದಿದೆ. ಮಕ್ಕಳಿಗೆ ವೇಗವಾಗಿ ಹರಡುತ್ತದೆ. ಅವರಿಗೆ ಲಸಿಕೆ ಬೇರೆ ಕೊಡಲಾಗಿಲ್ಲ ಎಂಬ ನೆಪಗಳನ್ನು ಒಡ್ಡುತ್ತಾ ಶಾಲೆಗಳ ಬಾಗಿಲು ಮುಚ್ಚುವ ಅಗತ್ಯವೇ ಇಲ್ಲ. ಅಂಥ ಕಾಲಘಟ್ಟದಿಂದ ಮುಂದೆ ಸರಿದಿದ್ದೇವೆ ಎಂದು ವಿಶ್ವಬ್ಯಾಂಕ್‌ನ ಜಾಗತಿಕ ಶಿಕ್ಷಣ ವಿಭಾಗದ ನಿರ್ದೇಶಕ ಜೈಮೀ ಸವೀದ್ರಾ ಅಭಿಪ್ರಾಯಪಟ್ಟಿದ್ದಾರೆ. ಇವರು ಪೆರು ದೇಶದ ಮಾಜಿ ಶಿಕ್ಷಣ ಸಚಿವರು ಕೂಡ ಹೌದು.

ನನ್ನ ತಂಡವು ಕೊರೊನಾ ಸಾಂಕ್ರಾಮಿಕದಿಂದ ಶಿಕ್ಷಣ ಕ್ಷೇತ್ರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ಕಳೆದ ಎರಡು ವರ್ಷಗಳಿಂದ ಅಧ್ಯಯನ ನಡೆಸುತ್ತಿದೆ. ಶಾಲೆಗಳು ಮಕ್ಕಳಿಗೆ ಸುರಕ್ಷಿತ ಸ್ಥಳವಾಗಿವೆ. ಶಾಲೆಗಳ ಬಾಗಿಲು ತೆರೆದು ಮಕ್ಕಳಿಗೆ ಶಿಕ್ಷಣ ಮುಂದುವರಿಸುವುದರಿಂದ ಕೊರೊನಾ ಹೆಚ್ಚು ಹರಡಲ್ಲ. ಲಸಿಕೆ ಕೊಟ್ಟ ನಂತರವೇ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುತ್ತೇವೆ ಎಂಬ ಪೋಷಕರ ವಾದವು ವೈಜ್ಞಾನಿಕವಲ್ಲ. ಮುಂದೆ ಇನ್ನೂ ಬೇರೆ ರೀತಿಯ ಕೊರೊನಾ ಅಲೆಗಳು ವಿಶ್ವಾದ್ಯಂತ ಬಾಧಿಸಲಿವೆ. ಆಗ ಶಾಲೆಗಳನ್ನು ಮುಚ್ಚುವ ಕ್ರಮವನ್ನು ಕಟ್ಟಕಡೆಯದಾಗಿ ಸರಕಾರಗಳು ಪರಿಗಣಿಸಬೇಕು. ಈಗಾಗಲೇ ಎರಡು ವರ್ಷಗಳ ಮುಖ್ಯವಾಹಿನಿ ಶಿಕ್ಷಣದಿಂದ, ಗೆಳೆಯರೊಂದಿಗೆ ಬೆರೆಯುವ ವಾತಾವರಣದಿಂದ, ಶಿಕ್ಷಕರ ಮಾರ್ಗದರ್ಶನದಿಂದ ನೇರವಾಗಿ ಮಕ್ಕಳು ವಂಚಿತರಾಗಿದ್ದಾರೆ. ಈ ಕಲಿಕಾ ವಿಕಲತೆ ಆದಷ್ಟು ವೇಗ ಸರಿಯಾಗಬೇಕು ಎಂದು ಸವೀದ್ರಾ ಅವರು ಸಂದರ್ಶನವೊಂದರಲ್ಲಿ ಮುಕ್ತವಾಗಿ ವಿವರಿಸಿದ್ದಾರೆ.

BIG NEWS: ಅಪರೂಪದ ಪ್ರಕರಣ; ಹಾವಿನ ಕಡಿತದಿಂದ ಮೂತ್ರಪಿಂಡಗಳು ವೈಫಲ್ಯವಾದ್ರೂ ಸಂಪೂರ್ಣ ಚೇತರಿಸಿಕೊಂಡ ರೋಗಿ

ವಿದೇಶಗಳಲ್ಲಿ 4 ಮತ್ತು 5ನೇ ಅಲೆಗಳು ಹಾವಳಿ ನಡೆಸುತ್ತಿವೆ. ಯುರೋಪ್‌ ಸೇರಿದಂತೆ ಅನೇಕ ಕಡೆಗಳಲ್ಲಿ ಶಾಲೆಗಳನ್ನು ತೆರೆದು ಶಿಕ್ಷಣ ನೀಡಲಾಗುತ್ತಿದೆ. 2 ರಿಂದ 3 ದಿನ ಮಕ್ಕಳಿಗೆ ಜ್ವರ, ಕೆಮ್ಮು ಬಾಧಿಸಿದರೂ ಕೂಡ ಕೊರೊನಾದಿಂದ ಅವರಿಗೆ ಗಂಭೀರ ಕಾಯಿಲೆ ಕಾಣಿಸಿಲ್ಲ. ಹಾಗಾಗಿ ಮಕ್ಕಳ ಪ್ರಾಣಾಪಾಯದ ಬಗ್ಗೆ ಪೋಷಕರು ಆತಂಕಪಡುವ ಅಗತ್ಯವೇ ಇಲ್ಲ.

ಹೀಗೆ ಮುಂದುವರಿದರೆ ಜಗತ್ತಿನಾದ್ಯಂತ “ಶಿಕ್ಷಣ /ಕಲಿಕೆಯ ದಾರಿದ್ರ್ಯ” ಕಾಡಲಿದೆ. ಭಾರತ, ಚೀನಾದಂತಹ ಅಧಿಕ ಜನಸಂಖ್ಯೆ ಇರುವ ದೇಶಗಳಲ್ಲಿ 10 ವರ್ಷಗಳಾದರೂ ತಮ್ಮ ಮಾತೃಭಾಷೆ ಅಥವಾ ಇಂಗ್ಲಿಷ್‌ ಭಾಷೆಯನ್ನು ಸರಿಯಾಗಿ ಓದಲು, ಅರಿಯಲು ಮಕ್ಕಳಿಗೆ ಆಗಲ್ಲ. ಇದು ಕೊರೊನಾಗೆ ಹೆದರಿ ಶಾಲೆಗಳನ್ನು ಮುಚ್ಚಿದ ಅಡ್ಡಪರಿಣಾಮ ಕೂಡ ಎಂದು ಸವೀದ್ರಾ ಎಚ್ಚರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...